ಕೊರೊನಾನಿಂದಾಗಿ ನಮ್ಮ ಮೆಟ್ರೋ ಅನುಭವಿಸಿದ ನಷ್ಟವೆಷ್ಟು?

ಬೆಂಗಳೂರು, ಜುಲೈ 05: ಕೊರೊನಾ ಸೋಂಕಿನಿಂದಾಗಿ ನಮ್ಮ ಮೆಟ್ರೋ ಆದಾಯ ಕೋಟಿಗಟ್ಟಲೆ ಕುಸಿದಿದೆ. ಸುಮಾರು 5 ತಿಂಗಳಿಗಿಂತಲೂ ಹೆಚ್ಚು ಕಾಲ ಮೆಟ್ರೋ ಸ್ಥಗಿತಗೊಂಡಿದ್ದರಿಂದ ಬಿಎಂಆರ್‌ಸಿಎಲ್ ಸಂಸ್ಥೆ 904 ಕೋಟಿ ರೂ. ನಷ್ಟ ಅನುಭವಿಸಿದೆ.

2019-20ರಲ್ಲಿ ನಮ್ಮ ಮೆಟ್ರೋ 641 ಕೋಟಿ ರೂ. ನಷ್ಟ ಅನುಭವಿಸಿತ್ತು. ಇದೀಗ 2020-21ರಲ್ಲಿ ಬರೋಬ್ಬರಿ 904 ಕೋಟಿ ಅಂದರೆ ಶೇ.41ಕ್ಕಿಂತ ಹೆಚ್ಚು ಪ್ರಮಾಣದ ನಷ್ಟ ಅನುಭವಿಸಿದೆ.

ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ಮಾರ್ಚ್ 2020 22 ರಿಂದ ನಮ್ಮ ಮೆಟ್ರೋ ಐದು ತಿಂಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್‌ 7ರಿಂದ ಮತ್ತೆ ಸಂಚಾರ ಆರಂಭಿಸಿತ್ತು.

Due To Cororonavirus: BMRCL suffers Rs904 Crore Loss

ಆದರೆ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು, ಹೀಗಾಗಿ ಮೆಟ್ರೋ ಸಂಚಾರ ಆರಂಭವಾದರೂ ಆದಾಯ ಮಾತ್ರ ಬರಲಿಲ್ಲ.

ಕಳೆದ ಆರ್ಥಿಕ ವರ್ಷದಲ್ಲಿ ನಮ್ಮ ಮೆಟ್ರೋ 73.92 ಕೋಟಿ ರೂ. ಆದಾಯ ಗಳಿಸಿತ್ತು. ರೈಲುಗಳ ನಿರ್ವಹಣೆ, ಸಿಬ್ಬಂದಿಗೆ ಸಂಬಳ ಸೇರಿದಂತೆ ಸಾಕಷ್ಟು ನಷ್ಟ ಅನುಭವಿಸಿದೆ.
ಹಾಗೆಯೇ ಬ್ಯಾಂಕ್‌ಗಳಿಂದ ಕಡಿಮೆ ಅವಧಿಗೆ ಸಾಲ ಕೊಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಕಳೆದ ಒಂದೂವರೆ ವರ್ಷದಿಂದ ನಮ್ಮ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದ್ದು, ಕೇವಲ ಸ್ಮಾರ್ಟ್‌ಕಾರ್ಡ್ ಹೊಂದಿರುವವರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.

ಆದರೆ ಈ ಕ್ರಮದಿಂದಾಗಿ ನಮ್ಮ ಮೆಟ್ರೋ ಆದಾಯಕ್ಕೆ ಹೊಡೆತ ಬಿದ್ದಿರುವ ಕಾರಣ ಟೋಕನ್ ವ್ಯವಸ್ಥೆ ಮತ್ತೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಕೊರೊನಾ ಮೊದಲ ಲಾಕ್‌ಡೌನ್ ಬಳಿಕ ಮೆಟ್ರೋ ಸಂಚಾರ ಆರಂಭವಾದಾಗ ಟೋಕನ್ ವ್ಯವಸ್ಥೆ ಜಾರಿ ಮಾಡಿದರೆ ಹೆಚ್ಚು ಮಂದಿ ಸರತಿಯಲ್ಲಿ ನಿಲ್ಲಬೇಕಾಗುತ್ತದೆ ಇದರಿಂದ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಈ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು.

ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಹಾಗೆಯೇ ನಮ್ಮ ಮೆಟ್ರೋ ರೈಲು ವಾರಾಂತ್ಯದಲ್ಲೂ ಕೂಡ ಕಾರ್ಯನಿರ್ವಹಿಸಲಿದೆ, ಬಿಎಂಟಿಸಿ ಬಸ್‌ಗಳು ರಾತ್ರಿ 9 ಗಂಟೆಯವರೆಗೂ ಇರಲಿವೆ.

ಪ್ರತಿ 5 ರಿಂದ 15 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಚಲಿಸಲಿದೆ, ಈ ಹಿಂದೆ ಮೊದಲ ಹಂತದ ಅನ್​ಲಾಕ್​ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಆ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸಲಾಗಿತ್ತು.

Recommended Video

      T 20 ವಿಶ್ವ ಕಪ್ ಒಮನ್ ನಲ್ಲಿ ಆದ್ರೆ ಆಟಗಾರರಿಗೆ ತೊಂದ್ರೆ ತಪ್ಪಿದ್ದಲ್ಲ!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+