ಬೆಂಗಳೂರಲ್ಲಿ ಪಾನಮತ್ತ ಪೊಲೀಸರು ಮೇಲಾಧಿಕಾರಿಯನ್ನೇ ಥಳಿಸಿದರು
ಬೆಂಗಳೂರು, ಜು.11: ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್ ಬಳಿ ಇರುವ ಹೋಟೆಲ್‌ವೊಂದರಲ್ಲಿ ಪೊಲೀಸ್ ಪೊಲೀಸರ ನಡುವೆಯೇ ಗಲಾಟೆ ನಡೆದಿದ್ದು, ಗಲಾಟೆ ತಪ್ಪಿಸಲು ಬಂದ ಎಎಸ್‌ಐ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ಮಂಗಳವಾರದಿಂದ ಮಾಮೂಲಿ ವಿಚಾರಕ್ಕಾಗಿ ಹೊತ್ತಿಕೊಂಡಿದ್ದ ಜಗಳ ಮಂಗಳವಾರ ರಾತ್ರಿ ಸ್ಫೋಟಗೊಂಡಿದೆ, ಮಂಗಳವಾರ ರಾತ್ರಿ ಕುಡಿದು ಹೋಗಿ ಹೋಟೆಲ್‌ನಲ್ಲಿ ಇಬ್ಬರು ಪೇದೆಗಳು ಗಲಾಟೆ ಮಾಡಿದ್ದಾರೆ, ಗಲಾಟೆ ಯಾಕೆ ಎಂದು ಪ್ರಶ್ನಿಸಿದ ಹೋಟೆಲ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ತಕ್ಷಣ ಹೋಟೆಲ್ ಸಿಬ್ಬಂದಿ ಮೈಕೋಲೇಔಟ್ ಪೊಲೀಸರಿಗೆ ಕರೆ ಮಾಡಿದ್ದಾರೆ, ನಂತರ ಗಲಾಟೆ ತಪ್ಪಿಸಲು ಬಂದ ಎಎಸ್‌ಐ ಮೇಲೂ ಕೂಡ ಪೇದೆಗಳು ಹಲ್ಲೆ ಮಾಡಿದ್ದಾರೆ, ಎಎಸ್‌ಐ ತಲೆ ಹಾಗೂ ಮುಖದ ಮೇಲೆ ಗಾಯಗಳಾಗಿವೆ. ಪೊಲೀಸ್ ಪೊಲೀಸರ ನಡುವೆ ನಡೆದ ಗಲಾಟೆಗೆ ಹೋಟೆಲ್ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ.

ಪ್ರಕರಣ ಗಂಭೀರತೆ ಅರಿತ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ, ಹುಳಿಮಾವು ಪೇದೆಗಳ ಪುಂಡಾಟ, ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.












Click it and Unblock the Notifications