ಭಾರತದಲ್ಲಿ ಮುಂಗಾರು ಮಳೆ ಶೇ.45 ಕುಸಿತ
ನವದೆಹಲಿ, ಜೂ.24: ಮುಂಗಾರು ಮಳೆ ಆರಂಭಕ್ಕೂ ಮುನ್ನ ಹವಾಮಾನ ಇಲಾಖೆ ತಿಳಿಸಿದ ಮುನ್ಸೂಚನೆ ನಿಜವಾಗಿದೆ. ಈ ಬಾರಿ ಎಲ್ ನಿನೋ ಪ್ರಭಾವದಿಂದಾಗಿ ದೇಶದಲ್ಲಿ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ ಎನ್ನುವ ಅಂಶವನ್ನು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.
ಜೂನ್ ಆರಂಭದಿಂದ ಜೂನ್ 18ರವರೆಗೆ ದೇಶದಲ್ಲಿ ಕೇವಲ ಶೇ.45ರಷ್ಟು ಮಾತ್ರ ಮಳೆಯಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ 78 ಮಿ.ಮೀ. ಮಳೆ ಸುರಿಯಬೇಕಿತ್ತು.
ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಮಹಾರಾಷ್ಟ್ರ, ಗೋವಾ ಹಾಗೂ ಒಡಿಶಾ ಒಳಗೊಂಡ ಮಧ್ಯಭಾರತದಲ್ಲಿ ದೀರ್ಘಕಾಲಿಕ ಸರಾಸರಿ ಮಳೆಯ ಪ್ರಮಾಣದ ಪ್ರಕಾರ ಶೇ. 66.2 ರಷ್ಟು ಮಳೆಯಾಗಬೇಕಿತ್ತು. ಆದರೆ ಇಲ್ಲಿವರೆಗೆ ಕೇವಲ 31.7 ಮಿ.ಮೀ.ನಷ್ಟು ಮಳೆಯಾಗಿದೆ.

ಈ ವರ್ಷ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದ್ದು ಶೇ.95ರಷ್ಟು ಮಳೆ ಬರಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿತ್ತು.[ಪಥ ಬದಲಾವಣೆ : ಓಮನ್ ಕರಾವಳಿಯತ್ತ ಮುಂಗಾರು]
ಇನ್ನೂ ಮೂರು ತಿಂಗಳುಗಳ ಮಳೆಗಾಲ ಇರುವುದರಿಂದ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ಹವಾಮಾನ ತಜ್ಞರದ್ದು. ಸಮುದ್ರದ ವಾತಾವರಣ ಬಿಸಿಯಾಗುವುದರಿಂದ ಉಂಟಾದ ಎಲ್ ನಿನೋ ಪರಿಣಾಮದಿಂದ ಮುಂಗಾರು ದುರ್ಬಲವಾಗಿದೆ. ಇದು ಚೇತರಿಕೆ ಕಂಡು ಬಂದಲ್ಲಿ ಹೆಚ್ಚಿನ ಮಳೆಯಾಗಬಹುದು ಆದರೆ ಚೇತರಿಕೆ ಕಾಣುತ್ತಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.












Click it and Unblock the Notifications