ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಮೇಲೆ ಡ್ರೋಣ್ ಕಣ್ಣು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 31: ಭಯೋತ್ಪಾದನೆ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮತ್ತಷ್ಟು ಹೈಟೆಕ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆಯಲ್ಲಿ ಭದ್ರತೆಗಾಗಿ ಡ್ರೋನ್ ಕಣ್ಗಾವಲು ಇರಿಸಿದ್ದಾರೆ.

ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಈಗಾಗಲೇ ಡ್ರೋನ್ ಕ್ಯಾಮೆರಾ ಕಾರ್ಯನಿರತವಾಗಿದೆ. ಸುಮಾರು 50 ಮೀ. ಎತ್ತರದಲ್ಲಿ ಡ್ರೋನ್ ಕ್ಯಾಮೆರಾ ಹಾರಲಿದ್ದು, ದೃಶ್ಯಗಳನ್ನು ಸೆರೆ ಹಿಡಿಯಲಿವೆ. ಅಲ್ಲದೆ, ನಗರದಲ್ಲಿ ರಕ್ಷಣೆಗಾಗಿ 15 ಸಾವಿರ ಪೊಲೀಸರನ್ನು ನೇಮಿಸಲಾಗಿದೆ. [ಬೆಂಗಳೂರಿನ ಎಲ್ಲೆಲ್ಲಿ ವಾಹನ ನಿಲುಗಡೆ, ಸಂಚಾರ ನಿರ್ಬಂಧ?]

drone

ಏನಿದು ಡ್ರೋಣ್?: ಮೇಲೆ ಹಾರುತ್ತ ಹೈ ರೆಸಲ್ಯೂಶನ್ ವಿಡಿಯೋ ಹಾಗೂ ಫೋಟೊ ಸೆರೆಹಿಡಿದು ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲಿವೆ. ರಾತ್ರಿ ಸಮಯದಲ್ಲಿಯೂ ಉತ್ತಮ ಗುಣಮಟ್ಟದ ದೃಶ್ಯ ಸೆರೆ ಹಿಡಿಯುವ ಸಾಮರ್ಥ್ಯ ಈ ಡ್ರೋಣ್‌ಗೆ ಇದೆ. [ಹೊಸ ವರ್ಷಾಚರಣೆಗೆ ಬೆಂಗಳೂರಿನ ಭದ್ರತೆ ಹೇಗಿದೆ?]

ಇದನ್ನು ರಿಮೋಟ್ ಕಂಟ್ರೋಲ್ ಹಾಗೂ ಐಓಎಸ್ ಅಥವಾ ಆಂಡ್ರಾಯ್ಡ್ ಸಾಫ್ಟ್‌ವೇರ್ ಹೊಂದಿರುವ ಮೊಬೈಲ್ ಮತ್ತು ಟ್ಲಾಬ್ಲೆಟ್ ಮೂಲಕವೂ ನಿಯಂತ್ರಿಸಬಹುದು.

ಮುಂದುವರಿದ ದೇಶಗಳಲ್ಲಿ ಈ ಕ್ವಾಡ್‌ಕಾಪ್ಟರ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅಮೆರಿಕವು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಡ್ರೋಣ್ ಮಾನವ ರಹಿತ ಯುದ್ಧ ವಿಮಾನವನ್ನು ಬಳಸುತ್ತಿದೆ. ಹಲವು ದೇಶಗಳಲ್ಲಿ ಡ್ರೋಣ್ ಮೂಲಕವೇ ಪಿಜ್ಜಾ, ಬರ್ಗರ್ ಇನ್ನಿತರ ಆಹಾರಗಳನ್ನು ಸರಬರಾಜು ಮಾಡಲಾಗುತ್ತದೆ. [1 ಗಂಟೆವರೆಗೆ ಮಾತ್ರ ಬಾರ್, ಹೋಟೆಲ್ ಓಪನ್]

English summary
Drone aerial cameras will monitor New Year celebrations on MG Road and Brigade Road of Bengaluru city on Wednesday night. This is a remote controlled equipment which can hover at a height of 50 meters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X