• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಲಿ ಐಸಿಯು ವ್ಯವಸ್ಥೆ ಬಳಸದಿರುವುದಕ್ಕೆ ಸುಧಾಕರ್ ಗರಂ

|

ಬೆಂಗಳೂರು, ಜೂನ್ 26: ಮಾನವ ಸಂಪನ್ಮೂಲ ಮತ್ತು ಲಭ್ಯ ಸೌಲಭ್ಯಗಳನ್ನು ಯೋಜಿತ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಕೋವಿಡ್‌ ನಿಯಂತ್ರಣದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ದೇಶದಲ್ಲೇ ವಿನೂತನ ವ್ಯವಸ್ಥೆ ಎಂದೇ ಹೆಸರಾಗಿರುವ ಟೆಲಿ ಐಸಿಯು ವ್ಯವಸ್ಥೆಗೆ ನಗರದಲ್ಲೇ ಇರುವ ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗಳನ್ನು ಸೇಪ೯ಡೆ ಮಾಡದಿರುವುದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು ತಕ್ಷಣವೇ ಸೇಪ೯ಡೆ ಮಾಡಿ. ಇದರಿಂದ ರೋಗಿಗಳ ಸ್ಥಿತಿಗತಿ ಅಭ್ಯಸಿಸಿ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗಿ ಅವರನ್ನು ಬದುಕಿಸಿಕೊಳ್ಳಬಹುದು ಎಂದರು.

ಭಯಬಿಡಿ! ಬೆಂಗಳೂರಿನಲ್ಲಿ ಮರಣ ಪ್ರಮಾಣ ಕಡಿಮೆ: ಸುಧಾಕರ್‌

ಬೆಂಗಳೂರು ನಗರದಲ್ಲಿ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆರೋಗ್ಯ, ವೈದ್ಯಶಿಕ್ಷಣ, ಬಿಬಿಎಂಪಿ ಹಿರಿಯ ಅಧಿಕಾರಿಗಳು, ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿದೇ೯ಕರು ಹಾಗೂ ಪರಿಣಿತರ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿ ಈ ಸೂಚನೆ ನೀಡಿದರು.

 ಮೂರು ರೋಗಿಗಳಿಗೆ ಒಬ್ಬ ನಸ್‌೯ ಕಡ್ಡಾಯ

ಮೂರು ರೋಗಿಗಳಿಗೆ ಒಬ್ಬ ನಸ್‌೯ ಕಡ್ಡಾಯ

ದಾಖಲಾಗುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಶುಶ್ರೂಷ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಐಸಿಯು ಹಾಗೂ ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಲ್ಲಿ ಮೂರು ರೋಗಿಗಳಿಗೆ ಒಬ್ಬ ನಸ್‌೯ ಕಡ್ಡಾಯವಾಗಿ ಇರಬೇಕು. ಕೊರತೆಯಿರುವ ಕಡೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಬೇಕು. ನೇಮಕ ಆಗುವತನಕ ಸಕಾ೯ರಿ ಮತ್ತು ಖಾಸಗಿ ಕಾಲೇಜುಗಳ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ನಿಯೋಜಿಸುವಂತೆ ಸೂಚಿಸಿದರು.

ಐಸಿಯು ಮತ್ತು ಹೈ ಪ್ಲೊ ಆಕ್ಸಿಜನ್‌ ವಾಡು೯ಗಳಿಗೆ ತರಬೇತಿ ಪಡೆದವರು ಬೇಕು. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಜನರಲ್‌ ವಾಡು೯ಗಳಲ್ಲಿರುವ ತರಬೇತಿ ಪಡೆದವರನ್ನು ಅಲ್ಲಿಗೆ ವಗಾ೯ಯಿಸಿ ಅಂತಿಮ ವಷ೯ದ ವಿದ್ಯಾಥಿ೯ಗಳನ್ನು ಸೆಂಟರ್‌ಗಳಲ್ಲಿ ಬಳಸಬಹುದು. ವೈದ್ಯರ ಕೊರತೆ ನಿವಾರಿಸಿಕೊಳ್ಳಲು ಆಯುಷ್‌ ಮತ್ತು ಪಿಜಿ ವಿದ್ಯಾಥಿ೯ಗಳನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಿ ಎಂದರು.

ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಿ

ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಿ

ನಿಗದಿಪಡಿಸಿ : ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಲು ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಹೊಣೆ ನೀಡಿ ಕತ೯ವ್ಯ ನಿವ೯ಹಿಸುವಂತೆ ನೋಡಿಕೊಳ್ಳಬೇಕು. ಒಂದು ವಾರದ ಊಟದ ಮೆನು ಸಿದ್ಧಪಡಿಸಿ ಅವರಿಗೆ ಕೊಡಬೇಕು. ಅದನ್ನು ಸಂಬಂಧಿಸಿದವರಿಗೆ ಮಾತ್ರವಲ್ಲದೆ ರೋಗಿಗೂ ಕೊಡ ಆ ಮಾಹಿತಿ ಸಿಗುವಂತಿರಬೇಕು ಎಂದು ತಾಕೀತು ಮಾಡಿದರು.

ಕೋವಿಡ್‌ ಚಿಕಿತ್ಸೆ, ಸೌಲಭ್ಯಗಳಲ್ಲಿ ಲೋಪ ಸಹಿಸುವುದಿಲ್ಲ: ಸುಧಾಕರ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಊಟ- ಸ್ವಚ್ಛತೆ ಸಹಿತ ಮೇಲ್ವಿಚಾರಣೆ ನೋಡಿಕೊಳ್ಳಲು ಹಿರಿಯ ಅಧಿಕಾರಿ ಸೋಮಣ್ಣ ಕಡಕೊಳ ಅವರನ್ನು ನೇಮಿಸಲಾಗಿದೆ. ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲೂ ಅದೇ ಕ್ರಮ ಅನುಸರಿಸಬೇಕು ಎಂದು ನಿದೇ೯ಶಕರಿಗೆ ಸೂಚನೆ ನೀಡಿದರು.

ವಿಕ್ಟೋರಿಯಾ ಮೇಲಿನ ಒತ್ತಡ ಕಡಿಮೆ ಮಾಡಿ

ವಿಕ್ಟೋರಿಯಾ ಮೇಲಿನ ಒತ್ತಡ ಕಡಿಮೆ ಮಾಡಿ

ವಿಕ್ಟೋರಿಯಾದಲ್ಲಿ ದಾಖಲಾಗಿ ಡಯಾಲಿಸಿಸ್‌ಗೆ ಒಳಪಡುವ ಕೊರೋನಾ ಸೋಂಕಿತರನ್ನು ಅಲ್ಲಿಯೇ ಇರುವ ನೆಫ್ರಾಲಜಿ ವಿಭಾಗಕ್ಕೆ ವಗಾ೯ಯಿಸಿ. ಇದರಿಂದ ವಿಕ್ಟೋರಿಯಾ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ರೋಗಿಗಳು ಮರಣ ಹೊಂದಿದಾಗ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪರಿಣಿತರ ಜತೆ ಹಂಚಿಕೊಂಡು ಕಾರಣಗಳನ್ನು ಅಧ್ಯಯನ ಮಾಡಿ ಲೋಪ ಮರುಕಳಿಸದಂತೆ ಎಚ್ಚರವಹಿಸಬೇಕು. ಮರಣ ಕಾರಣಗಳ ವಿಶ್ಲೇಷಣೆಗೆ ಪರಿಣಿತ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಸಚಿವರು ನಿದೇ೯ಶಕರಿಗೆ ಆದೇಶಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾವು: ಆಮ್‌ ಆದ್ಮಿ ಪಕ್ಷದ ಆರೋಪ

ಕೋವಿಡ್‌ ಕೇರ್‌ ಸೆಂಟರ್‌ ಸಮರ್ಥವಾಗಿ ಬಳಸಿ

ಕೋವಿಡ್‌ ಕೇರ್‌ ಸೆಂಟರ್‌ ಸಮರ್ಥವಾಗಿ ಬಳಸಿ

ಫೀವರ್‌ ಕ್ಲಿನಿಕ್‌ಗಳಿಗೆ ಬರುವ ಐಎಲ್‌ಐ ಪ್ರಕರಣಗಳಲ್ಲಿ ಲಘು, ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಆರಂಭಿಕ ಹಂತದಲ್ಲೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಿ. ಇದರಿಂದ ಕೋವಿಡ್‌ ಆಸ್ಪತ್ರೆಗಳ ಮೇಲಿನ ಒತ್ತಡ ನಿವಾರಣೆ ಆಗಲಿದೆ ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ಏಕ ಗವಾಕ್ಷಿ ವ್ಯವಸ್ಥೆ : ತಕ್ಷಣ ಖಾಸಗಿ ಆಸ್ಪತ್ರೆಗಳಿಗೆ ಹಿರಿಯ ಅಧಿಕಾರಿಗಳ ತಂಡ ಕಳುಹಿಸಿ ನೀಡಲು ಸೂಚಿಸಿರುವ ಶೇಕಡಾ ಐವತ್ತರಷ್ಟು ಹಾಸಿಗೆಗಳ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಕಡ್ಡಾಯ ಮೀಸಲು ಇಡಲು ಆದೇಶ ನೀಡಬೇಕು. ಬಳಿಕ ಸಕಾ೯ರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿರುವ ಹಾಸಿಗೆಗಳು, ಐಸಿಯುಗಳ ನಿಖರ ಸಂಖ್ಯೆ ಇಟ್ಟುಕೊಂಡು ರೋಗಿಗಳನ್ನು ದಾಖಲು ಮಾಡಿಕೊಂಡು ಬರಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಹಿರಿಯ ಅಧಿಕಾರಿಯನ್ನು ಉಸ್ತುವಾರಿಗೆ ನಿಯೋಜಿಸಬೇಕು ಎಂದು ಸೂಚಿಸಿದರು.

English summary
Medical Education Minister Dr Sudhakar has instructed to deploy Tele--ICU facilities in Victoria, Bowring and Rajiv Gandhi Hospitals. This will enable better monitoring of patients and helps to provide better treatment and save lives, Minister said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X