ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಾಹ್ಮಣರ ಕೆಣಕಿದ ಟ್ವಿಟ್ಟರ್ ಸಿಇಒಗೆ ಓದುಗರಿಂದ 'ಮಹಾಮಂಗಳಾರತಿ!'

|
Google Oneindia Kannada News

ಬೆಂಗಳೂರು, ನವೆಂಬರ್ 23: ಇತ್ತೀಚೆಗಷ್ಟೇ ನಡೆದ ಟ್ವಿಟ್ಟರ್ ಸಮ್ಮೇಳನವೊಂದರ ನಂತರ ಭಾರತದ ಮಹಿಳಾ ಪ್ರಕರ್ತರೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ಟ್ವಿಟ್ಟರ್ ಸಿವಿಒ ಜಾಕ್ ಡೋರ್ಸಿ ವಿವಾದದ ಕೇಂದ್ರಬಿಂದುವಾಗಿದ್ದರು.

ಅದಕ್ಕೆ ಕಾರಣ ಅಂದು ಅವರು ಹಿಡಿದಿದ್ದ ಪ್ಲೆಕಾರ್ಡ್. "Smash Brahmanical Patriarchy"(ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ) ಎಂಬ ಘೋಷಣೆಯಿರುವ ಪ್ಲೆಕಾರ್ಡ್ ಹಿಡಿದಿದ್ದ ಡೋರ್ಸಿ ಲಕ್ಷಾಂತರ ಬ್ರಾಹ್ಮಣರ ಕೆಂಗಣ್ಣಿಗೆ ಗುರಿಯಾದರು? ಅಷ್ಟಕ್ಕೂ ಬ್ರಾಹ್ಮಣರ ಬಗ್ಗೆ ಮಾತನಾಡುವುದಕ್ಕೆ, 'ಬ್ರಾಹ್ಮಣರ ಬಗ್ಗೆ ಡೋರ್ಸಿಗೇನು ಗೊತ್ತಿದೆ? ಯಾರೋ ಗಿಫ್ಟು ಕೊಟ್ಟರು ಹಿಡಿದುಕೊಂಡೆ ಎನ್ನುತ್ತಾರಲ್ಲ, ಡೋರ್ಸಿಗೇನು ಓದುವುದಕ್ಕೆ ಬರುವುದಿಲ್ಲವೇ? ಅದೊಂದು ಸಮುದಾಯದ ಭಾವನೆಗೆ ನೋವುಂಟು ಮಾಡುತ್ತದೆ ಎಂಬುದು ತಿಳಿಯುವುದಿಲ್ಲವೇ?' ಎಂದು ಟ್ವಿಟ್ಟರ್ ನಲ್ಲಿ ಹಲವರು ಪ್ರಶ್ನಿಸಿದ್ದರು.

'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!

ಟ್ವಿಟ್ಟರ್ ನಲ್ಲಿ ಈ ಕುರಿತು ಸಾಕಷ್ಟು ವಾದ-ವಿವಾದ ಎದ್ದ ಮೇಲೆ ಟ್ವಿಟ್ಟರ್ ಕ್ಷಮೆ ಯಾಚಿಸಿತ್ತು. ಈ ಕುರಿತು ಒನ್ ಇಂಡಿಯಾ ಪ್ರಕಟಿಸಿದ್ದ ಲೇಖನಗಳಿಗೆ ಓದುಗರು ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿದೆ.

ಇವರಿಗೆ ಇಲ್ಲಿಯ ವ್ಯವಸ್ಥೆಯ ಬಗ್ಗೆ ಏನಾದರೂ ಗೊತ್ತೆ?

ಇವರಿಗೆ ಇಲ್ಲಿಯ ವ್ಯವಸ್ಥೆಯ ಬಗ್ಗೆ ಏನಾದರೂ ಗೊತ್ತೆ?

"ಈ ಮನುಷ್ಯನಿಗೆ ಇಲ್ಲಿಯ ವ್ಯವಸ್ಥೆಯ ಬಗ್ಗೆ ಏನಾದರೂ ಗೊತ್ತೋ? ಅಥವಾ ಯಾರಿಂದಲೋ ಎರವಲು ಪಡೆದು ಚಮಕ್ ಬಿಡುತ್ತಾರೋ? ಮೊದಲು ನಿಮ್ಮ ಕಂಪೆನಿಯಲ್ಲಿ ಸರಿಯಾಗಿ ನೋಡು, ಅದರಲ್ಲಿರುವ ಭಾರತೀಯ ಉದ್ಯೋಗಿಗಳಲ್ಲಿ ಬ್ರಾಹ್ಮಣರ ಸಂಖ್ಯೆಯೇ ಹೆಚ್ಚಿರುತ್ತೆ" ಎಂದಿದ್ದಾರೆ ಶರತ್.

ಸರಿಯಾಗಿದೆ ಅವರು ಹೇಳಿದ್ದು!

ಸರಿಯಾಗಿದೆ ಅವರು ಹೇಳಿದ್ದು!

"ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ. ಸರಿಯಾಗಿದೆ, ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿಲ್ಲ ಅಂದ್ರೆ ಇನ್ನು ಕೆಳ ಜಾತಿಯವರ ಮೇಲೆ ದಬ್ಬಾಳಿಕೆ ಮಾಡೋದು ಜಾಸ್ತಿಯೇ ಆಗುತ್ತೆ. ಬ್ರಾಹ್ಮಣರು ಜಾತಿವಾದಿಗಳು ಎಂದಿದ್ದಾರೆ ಸಂತುಮಹಾರಾಜ್ ಕೆ. ಎಂಬುವವರು.

ಬ್ರಾಹ್ಮಣರನ್ನು ನೋಯಿಸಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ಟ್ವಿಟ್ಟರ್ಬ್ರಾಹ್ಮಣರನ್ನು ನೋಯಿಸಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ಟ್ವಿಟ್ಟರ್

ಬ್ರಾಹ್ಮಣರು ಜಾತಿವಾದಿಗಳಾಗಬಾರದೇಕೆ?

ಬ್ರಾಹ್ಮಣರು ಜಾತಿವಾದಿಗಳಾಗಬಾರದೇಕೆ?

"ಬ್ರಾಹ್ಮಣರು ಜಾತಿವಾದಿಗಳು ಏಕೆ ಆಗಬಾರದು? ಈಗಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಬೀದೀಲಿ ಹೋಗೋರೆಲ್ಲ ಬ್ರಾಹ್ಮಣರ ಬಗ್ಗೆ ಏಕೆ ಮಾತಾಡಬೇಕು? ದೇವೇಗೌಡ ಜಾತ್ಯಾತೀತ ಅಂತ ಹೇಳಿ ಅವನ ಪಕ್ಷದಲ್ಲಿ ಬರೀ ಗೌಡರನ್ನೇ ತುಂಬಿ ಕೊಂಡಿಲ್ಲವಾ? ರಾಹುಲ್ ಗಾಂಧಿ ಚುನಾವಣಾ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾನೆ, ಜನಿವಾರ ಧರಿಸುತ್ತಾನೆ, ಇದೆಲ್ಲ ನಿಮ್ಮಂತಹ ಆಷಾಢ ಭೂತಿಗಳಿಗೆ ಸರಿ ಅಲ್ಲವೇ? ಬ್ರಾಹ್ಮಣರು ಯಾರನ್ನೋ ತುಳಿಯುತ್ತಿಲ್ಲ. ನಿಮ್ಮ ನಿಮ್ಮ ಜಾತಿಯ ರಾಜಕೀಯ ಮುಖಂಡರೇ ನಿಮ್ಮನ್ನ ತುಳಿಯುತ್ತಾ ಇದ್ದಾರೆ. ಇದನ್ನು ಮೊದಲು ತಿಳಿದುಕೊಳ್ಳಿ" ಎಂದಿದ್ದಾರೆ ಶ್ರೀಕಾಂತ್.

ಮೊಬೈಲ್ ಡೆಟಾ ಇದ್ದವರೆಲ್ಲ ಬುದ್ಧಿವಂತರಲ್ಲ!

ಮೊಬೈಲ್ ಡೆಟಾ ಇದ್ದವರೆಲ್ಲ ಬುದ್ಧಿವಂತರಲ್ಲ!

ಸರಿಯಾಗಿ ಹೇಳಿದ್ರಿ. ಈಗೀಗ ನಾಲಿಗೆ ಅಥವಾ ಮೊಬೈಲ್ ಡೇಟಾ ಇದ್ದವನೆಲ್ಲಾ ಬಹಳ ಬುದ್ದಿವಂತರಾದಂತಿದೆ .... ಬುದ್ಧಿಮತ್ತೆಯನ್ನು ಪ್ರದರ್ಶಿಸುವ ಸುಲಭದ ದಾರಿ ಬ್ರಾಹ್ಮಣರ ತೆಗಳಿಕೆ. ಇದೊಂದು ಮನೋ ವಿಕೃತಿ ಅನ್ನಬಹುದು . ಬ್ರಾಹ್ಮಣರ ಪ್ರಭುತ್ವ ಅಂದರೆ ನನಗೆ ಅರ್ಥ ಆಗ್ತಿಲ್ಲ. ಎಲ್ಲಿಯೂ ಬ್ರಾಹ್ಮಣರ ಪ್ರಭುತ್ವ ಕಾಣಿಸ್ತಿಲ್ಲ. ಒಂದುವೇಳೆ ಇದ್ದರೆ ಅದು ಅವರ ಮೆರಿಟ್ ಮೇಲೆ ಬಂದಿದ್ದಷ್ಟೇ ಹೊರತು ಯಾವುದೇ ಬಲಾತ್ಕಾರದಲ್ಲಿ ಕಿತ್ತಿದ್ದಲ್ಲ . ಬ್ರಾಹ್ಮಣರಿಗೆ ಯಾರು ಲಾಬಿ ಮಾಡಲ್ಲ. ಇನ್ನೊಬ್ಬ ಬ್ರಾಹ್ಮಣನೇ ಮಾಡಲ್ಲ . ನ್ಯಾಯ ನಾಜೂಕಲ್ಲಿ ಕಷ್ಟಪಟ್ಟು ಒಳ್ಳೆ ವಿದ್ಯಾವಂತನಾಗಿ ಒಂದು ಹುದ್ದೆಗೆ ಹೋದರೆ ಬೇರೆಯವರಿಗೆ ಯಾಕೋ ಕಣ್ಣುರಿ ಎಂದಿದ್ದಾರೆ ಶರತ್.

ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆ

ಪ್ರತಿಭೆಯನ್ನು ಹತ್ತಿಕ್ಕೋಕಾಗಲ್ಲ!

ಪ್ರತಿಭೆಯನ್ನು ಹತ್ತಿಕ್ಕೋಕಾಗಲ್ಲ!

ಪ್ರತಿಭೆಯನ್ನು ಎಂದಿಗೂ ಹತ್ತಿಕ್ಕುವುದಕ್ಕಾಗುವುದಿಲ್ಲ, ಗುರುತಿಸದೆ ಇರುವುದಕ್ಕೂ ಆಗೋಲ್ಲ. ನಾವು ಬೆಳೆಯುವುದನ್ನು, ಮಿಂಚುವುದನ್ನು, ಮುಂದುವರಿಯುವುದನ್ನು ನಿಮ್ಮಿಂದ ತಡೆಯಲು ಸಾಧ್ಯವಿಲ್ಲ. ನಮ್ಮನ್ನು ತಡೆಯುವ ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆ ಎಂದಿದ್ದಾರೆ ಪಾದ್ದಿ ಎಂಬುವವರು.

ಉಡುಗೊರೆ ಕೊಟ್ಟವರು 'ಸಿಕ್ಯುಲರ್' ಗಳು

ಉಡುಗೊರೆ ಕೊಟ್ಟವರು 'ಸಿಕ್ಯುಲರ್' ಗಳು

ಆ ಉಡೊಗೊರೆ ಕೊಟ್ಟವರು ಯಾರು, ಫೋಟೋ ತೆಗೆಸಿಕೊಂಡ ಪತ್ರಕರ್ತರು ಯಾರು? ಒಂದಂತೂ ನಿಜ ಇದೆಲ್ಲ anti ನ್ಯಾಷನಲ್, ಸಿಕ್ಯುಲರ್ಗಳ ಹುನ್ನಾರ. ಇವರಿಗೆ ಸುಳ್ಳು ಸುಳ್ಳು ಹೇಳಿ ಸಮಾಜ ಒಡೆದು, ಇಲ್ಲದ ಸಮಸ್ಯೆಗಳನ್ನು ಹುಟ್ಟು ಹಾಕುವುದೇ ಕೆಲಸ. ದೇಶ ಅಭಿವೃದ್ಧಿ ಇವರಿಗೆ ಬೇಡ. ಅಲ್ಲದಿದ್ದರೇ ಈ ಟ್ವಿಟ್ಟರಿಗೂ, ಬಡಪಾಯಿ ಬ್ರಾಹ್ಮಣರಿಗೂ ಅದೆಲ್ಲಿಯ ಸಂಬಂಧ? ಎಂದು ಪ್ರಶ್ನಿಸಿದ್ದಾರೆ ಕೃಷ್ಣ ಎಂಬುವವರು.

English summary
After Twitter CEO Jack Dorsey's controversial step holding placard with 'Smash Brahmanical Patriarchy' statement, many readers of Oneindia express their opinion. Here are some among them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X