ಅಧಿಕಾರಿಗಳಿಗೆ ಸರ್ ಎಂದು ಕರಿಬೇಡಿ: ಸಿಎಂ ಸಿದ್ದರಾಮಯ್ಯ ಹೇಳಿದ್ಯಾರಿಗೆ & ಯಾಕೆ?

ಬೆಂಗಳೂರು, ಸೆಪ್ಟೆಂಬರ್, 06: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ವೇಳೆ ಸಚಿವರಿಗೆ ಸರ್‌ ಎಂದು ಕರೆಯಬೇಡಿ ಎಂದು ಅಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ ಕೊಟ್ಟಿದ್ದಾರೆ. ಹಾಗಾದರೆ ಅವರು ಹೀಗೆ ಹೇಳಿದ್ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ 10 ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ 5 ಕೆ.ಜಿ. ಅಕ್ಕಿ ನೀಡಲು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಇದರ ಹಣವನ್ನು ವ್ಯಕ್ತಿಗಳ ಖಾತೆಗೆ ಹಾಕಲು ನಿರ್ಧಾರ ಮಾಡಿದ್ದು, ಅಂದಿನಿಂದ 170 ರೂಪಾಯಿ ವಿತರಣೆ ಮಾಡಲಾಯಿತ್ತು. ಇದೀಗ ಗುರುವಾರ ನಡೆದ ಸಚಿವ ಸಂಪುಟ ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Don t call sir to officials Why did CM Siddaramaiah say this to Ministers

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ವೇಳೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಒಬ್ಬ ವ್ಯಕ್ತಿಗೆ 170 ರೂಪಾಯಿನಂತೆ ಹಣ ನೀಡುವುದನ್ನು ಮುಂದುವರೆಸುವುದು ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುದೆ. ಆದರೆ, ಈ ನಡುವೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿದೆ ನೋಡಿ ಮಾಹಿತಿ.

ಇನ್ನು ಈ ವೇಳೆ ಕೆಲ ಸಚಿವರು ಅಧಿಕಾರಿಗಳನ್ನು ಸರ್, ಸರ್... ಎಂದು ಕರೆದು ಮಾತನಾಡುತ್ತಿದ್ದು, ಇದರಿಂದ ಕೋಪಗೊಂಡ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸರ್ ಎಂದು ಕರೆಯಬೇಡಿ ಅಂತಾ ಅಧಿಕರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ ಘಟನೆ ನಡೆದಿದೆ.

ಯಾವ ಸಚಿವರು ಕೂಡ ಅಧಿಕಾರಿಗಳನ್ನು ಸರ್ ಎಂದು ಕರೆಯಕೂಡದು. ಸಾಂವಿಧಾನಿಕವಾಗಿ ನೀವು ಸಚಿವರಾಗಿದ್ದು, ಅಧಿಕಾರಿ ವರ್ಗ ನಿಮ್ಮ ಕೈಯಡಿ ಇದೆ. ನೀವೇ ಅಧಿಕಾರಿಗಳಿಗೆ ಸರ್, ಸರ್ ಎಂದು ಕರೆದು ನಿಮ್ಮ ಸ್ಥಾನವನ್ನು ಕಡೆಗೆಣಿಕೊಳ್ಳುತ್ತಿದ್ದೀರಾ ಪ್ರಶ್ನಿಸಿದರು.

ಇನ್ನು ಇಲಾಖೆ ಬಗ್ಗೆ ಮಾಹಿತಿ ಕೊರತೆಯಿದ್ದರೆ ಅದಕ್ಕೆ ಬೇಕಾದ ಸೂಕ್ತ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಿರಿ. ಅದರ ಬದಲಾಗಿ ಅದೇ ಇಲಾಖೆಯ ಇನ್ನೋರ್ವ ಅಧಿಕಾರಿಗೆ ಸರ್ ಸರ್.. ಎಂದು ಕರೆದರೆ ಎಷ್ಟು ಸರಿ? ಅಧಿಕಾರಿಗಳು ಸದಾ ಆ ಸ್ಥಾನಕ್ಕೆ ಗೌರವ ನೀಡಬೇಕು.. ನಿಮ್ಮ ವರ್ತನೆ ಕೂಡ ಅದೇ ರೀತಿಯಾಗಿ ಇರಬೇಕೆಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+