• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ; ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಗೆ ಚಪ್ಪಾಳೆ ಸ್ವಾಗತ

|

ಬೆಂಗಳೂರು, ಮೇ 03 : ಕೊರೊನಾ ವಿರುದ್ಧ ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಹಗಲು-ರಾತ್ರಿ ಎನ್ನುವುದನ್ನು ಮರೆತು ರೋಗಿಗಳ ಜೀವ ಉಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಕೋವಿಡ್ - 19 ರೋಗಿಗಳ ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಕುಟುಂಬದಿಂದ ದೂರವಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಲವು ದಿನಗಳ ಬಳಿಕ ಮನೆಗೆ ಮರಳಿದರು. ಆಗ ಅಪಾರ್ಟ್‌ಮೆಂಟ್ ನಿವಾಸಿಗಳು ಚಪ್ಪಾಳೆಯ ಮೂಲಕ ಅವರನ್ನು ಸ್ವಾಗತಿಸಿದರು. ಈ ವಿಡಿಯೋ ಈಗ ವೈರಲ್ ಆಗಿದೆ.

ಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದ

ಡಾ. ವಿಜಯಶ್ರೀ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಕೋವಿಡ್ - 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ದರಿಂದ, ಕುಟುಂಬದಿಂದ ದೂರವಿದ್ದಾರೆ.

ಬಡ ಹುಡುಗಿಗಾಗಿ ಕಾರ್‌ ಡ್ರೈವರ್‌ ಕೆಲಸ ಮಾಡಿದ ಕೊಲ್ಕತ್ತಾ ಡಾಕ್ಟರ್

ಹಲವು ದಿನಗಳ ಬಳಿಕ ಮನೆಗೆ ಆಗಮಿಸಿದ ಅವರನ್ನು ಕುಟುಂಬ ಸದಸ್ಯರು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಈ ವಿಡಿಯೋವನ್ನು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಹೃದಯಾಘಾತ; ಚಿಕ್ಕಬಳ್ಳಾಪುರ ಜನಪ್ರಿಯ ವೈದ್ಯ ಅನಿಲ್ ಕುಮಾರ್ ನಿಧನ

ನೆರೆಹೊರೆಯವರ ಚಪ್ಪಾಳೆ ಸ್ವಾಗತಕ್ಕೆ ಡಾ ವಿಜಯಶ್ರೀ ಅವರು ಸಹ ಭಾವುಕರಾದರು. ಕೈ ಮುಗಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೈರಲ್ ಆಗಿರುವ ವಿಡಿಯೋ ಇಲ್ಲಿದೆ....

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ನಾವು ಕೊರೊನಾ ವಾರಿಯರ್ಸ್‌ ಎಂದು ಕರೆಯುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂದಹಾಗೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 145.

English summary
Dr Vijayashree who working in MS Ramaiah memorial hospital returned home after treating COVID - 19 patients. Resident of the apartment in Bengaluru welcome her by applause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X