Sonu Gowda: ನಟ ದರ್ಶನ್ ಪ್ರಕರಣದ ಬಗ್ಗೆ ಸೋನು ಶ್ರೀನಿವಾಸ್ ಗೌಡ ಹೇಳಿದ್ದೇನು ಗೊತ್ತಾ?
Sonu Gowda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಹಾಗೂ ಪಟಾಲಂ ಗ್ಯಾಂಗ್ ಜೈಲು ಪಾಲಾಗಿದೆ. ಇನ್ನು ಪ್ರಕರಣದ ಬಗ್ಗೆ ಕನ್ನಡ ಚಿತ್ರರಂಗದ ಹಲವರು ಪ್ರತಿಕ್ರಿಯಿಸಿದ್ದು, ಇನ್ನು ಕೆಲವರು ಯಾವುದೇ ಪ್ರತಿಕ್ರಿಯೆ ನೀಡದೇ ಹಿಂದೆ ಸರಿಯುತ್ತಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಪ್ರಕರಣದ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಅವರು ತಮ್ಮ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

"ತುಂಬಾ ಜನ ನನಗೂ ಕೆಟ್ಟ ಕೆಟ್ಟದಾಗಿ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಾರೆ, ಕಮೆಂಟ್ ಮಾಡುತ್ತಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ಅಶ್ಲೀಲವಾಗಿ ಕಾಮೆಂಟ್ ಮಾಡಿದರೆ ಸುಮ್ಮನೆ ಇರುತ್ತೀರಾ? ಒಂದು ಬಾರಿ ಅಭಿಮಾನಿಯಾದರೆ ಸಾಯುವವರೆಗೂ ಆ ಅಭಿಮಾನ ಇದ್ದೇ ಇರುತ್ತದೆ. ನಾನು ಕೂಡ ದರ್ಶನ್ ಅಭಿಮಾನಿ. ದರ್ಶನ್ ಮಾಡಿದ್ದು ತಪ್ಪು ಅಂತಾ ಅನೇಕರು ಹೇಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು," ಎಂದರು.
ಇನ್ನು "ನಟ ದರ್ಶನ್ ಅವರಿಂದ ತುಂಬಾ ಜನರು ಬೆಳೆದಿದ್ದಾರೆ. ದರ್ಶನ್ ಅವರನ್ನು ಬಳಸಿಕೊಂಡವರು ಇದೀಗ ಯಾರೂ ಕೂಡ ಅವರ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ. ದರ್ಶನ್ ಅವರಿಗೆ ಬಹಳಷ್ಟು ಜನರು ಮೋಸ ಮಾಡಿದ್ದಾರೆ, ಆದರೆ ಅವರು ಯಾರಿಗೂ ಮೋಸ ಮಾಡಿಲ್ಲ," ಎಂದು ಸೋನು ಗೌಡ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
"ನಾನು ಕೂಡ ತಪ್ಪು ಮಾಡದೆ ಜೈಲಿಗೆ ಹೋಗಿ ಬಂದಿದ್ದೇನೆ. ಆದ್ದರಿಂದ ಧ್ವನಿ ಎತ್ತಬೇಕು ಅಂತಾ ಮಾತನಾಡುತ್ತಿದ್ದೇನೆ. ನನ್ನ ಬಗ್ಗೆ ನಾಳೆ ಯಾರೇ ಏನೆ ಮಾತನಾಡಿದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತಪ್ಪು ಮಾಡದೆ ಇದ್ದವರೆಲ್ಲ ಜೈಲಿಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಕೆಟ್ಟದ್ದನ್ನು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಆಗತ್ತದೆ. ಅಂದು ಅಣ್ಣ, ತಮ್ಮ, ಮಗ ಅಂತಾ ಹೇಳುವವರು ಇಂದು ಬಾಸ್ ಬಗ್ಗೆ ಏನೂ ಮಾತನಾಡುತ್ತಿಲ್ಲ. ಇದು ತುಂಬಾ ಬೇಸರ ತಂದಿದೆ ಅಂತಾ ಸೋನು ಗೌಡ ಹೇಳಿದ್ದಾರೆ.
"ನಾನಂತೂ ದರ್ಶನ್ ಪರ ನಿಂತುಕೊಳ್ಳುತ್ತೇನೆ. ಮತ್ತೊಂದೆಡೆ ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದಾಗಲಿ, ಕಾನೂನಿನ ಪ್ರಕಾರ ಅವರಿಗೆ ಏನು ಸಿಗಬೇಕೋ ಅದು ಸಿಗತ್ತದೆ. ದರ್ಶನ್ ಅವರ ಒಳ್ಳೆಯತನವೇ ಅವರನ್ನು ಕಾಪಾಡತ್ತದೆ," ಎಂದು ಸೋನು ಗೌಡ ಹೇಳಿದ್ದಾರೆ.
ದರ್ಶನ್ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.
ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳಾಗಿತ್ತು. ಅವರ ಹುಟ್ಟುಹಬ್ಬದಂದು ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿ ವಿಚಾರ ತಿಳಿದುಕೊಂಡೆ, ಪೊಲೀಸ್ ಠಾಣೆ ಹತ್ತಿರ ಹೋಗಿ ಭೇಟಿಯಾಗಲು ಪ್ರಯತ್ನಿಸಿದೆ, ಆದರೆ ಸಾಧ್ಯ ಆಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದ್ದೇನೆ ಎಂದರು.












Click it and Unblock the Notifications