ನಟ ದರ್ಶನ್‌ ಬಗ್ಗೆ ಬಾಲ್ಯದ ಗೆಳೆಯ ಹೇಳಿದ್ದೇನು ಗೊತ್ತಾ?

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಪಾಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿದ ದರ್ಶನ್‌ ಬಾಲ್ಯದ ಗೆಳೆಯೊಬ್ಬರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಹಿತಿ ಇಲ್ಲಿದೆ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಡುವೆಯೇ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ಹೆಚ್ಚೆಚ್ಚು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

Do you know what did childhood friend says about actor Darshan

ಇನ್ನು ದರ್ಶನ್‌ನನ್ನು ನೋಡಲು ಚಿತ್ರರಂಗದ ಹಲವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಇದೀಗ ದರ್ಶನ್‌ ಬಾಲ್ಯದ ಗೆಳೆಯ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಅತೀ ಬೇಗ ಜೈಲಿನಿಂದ ಹೊರಗೆ ಬರಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕೆಲವು ಅಹಿತಕರ ಘಟನೆಗಳು ನಡೆದಿವೆ. ದರ್ಶನ್ ಹೆಸರನ್ನು ಹಾಳು ಮಾಡಲು ನಡೆದ ಪ್ರಯತ್ನವೇ? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಜೈಲು ಮುಂಭಾಗ ದರ್ಶನ್ ಅಭಿಮಾನಿಗಳು ಕೂಗಾಟ ಮಾಡಿದ್ದು ಇದೆ. ಮಾಧ್ಯಮದವರ ಮೇಲೆ ಹಲ್ಲೆ ಮಾಡುವ ಪ್ರಯತ್ನಗಳು ಕೂಡ ನಡೆದಿವೆ. ಪ್ರಸನ್ನ ಥಿಯೇಟರ್​ನಲ್ಲಿ ಕೆಲವರು ದರ್ಶನ್ ಖೈದಿ ಸಂಖ್ಯೆ ಹಾಕಿ ಪುಂಡಾಟ ಮೆರೆದಿದ್ದಾರೆ. ಇವರು ಯಾರೂ ದರ್ಶನ್ ಅಭಿಮಾನಿಗಳೇ ಅಲ್ಲವೇ? ದರ್ಶನ್ ಹೆಸರನ್ನು ಹಾಳು ಮಾಡಲು ನಡೆದ ಪ್ರಯತ್ನವೇ? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಇನ್ನೂ ಈ ಬಗ್ಗೆ ದರ್ಶನ್ ಬಾಲ್ಯದ ಗೆಳೆಯ ಶಿವಕುಮಾರ್ ಪ್ರತಿಕ್ರಿಯಿಸಿದ್ದು, "ಪ್ರಸನ್ನ ಥಿಯೇಟರ್ ಬಳಿ ನಡೆದ ಘಟನೆಯನ್ನು ಕೇಳಿದ್ದೆನೆ. ವಿಚಾರಿಸಿದಾಗ ಅವರು ಯಾರೂ ನಮ್ಮವರಲ್ಲ ಅನ್ನುವುದು ತಿಳಿಯಿತು. ಅಭಿಮಾನಿಗಳು ದರ್ಶನ್ ಹೊರಗೆ ಬಂದರೆ ಸಾಕು ಎಂಬ ಕಾರತದಲ್ಲಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಮಾಡಿಸುತ್ತಿದ್ದಾರೆ. ಈ ರೀತಿಯ ಕೆಲಸಗಳಿಗೆ ಅವರು ಕೈ ಹಾಕುತ್ತಿಲ್ಲ," ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್‌ ಅವರನ್ನು ಭೇಟಿ ಮಾಡಲು ಅಭಿಮಾನಿಗಳು ಸೇರಿದಂತೆ ಹಲವರು ಜೈಲಿನತ್ತ ಬಂದು ವಾಪಾಸ್‌ ಆಗುತ್ತಿದ್ದಾರೆ. ಆದರೆ ಕುಟುಂಬ ಸದಸ್ಯರು ಹಾಗೂ ಕೆಲ ಸೆಲೆಬ್ರೆಟಿಗಳನ್ನು ಮಾತ್ರ ದರ್ಶನ್‌ ಭೇಟಿಗೆ ಅವಕಾಶ ನೀಡಲಾಗುತ್ತಿದೆ. ಅದರಲ್ಲೂ ಜೈಲಿನ ನಿಯಮದ ಪ್ರಕಾರ, ಕುಟುಂಬಸ್ಥರಿಗೆ ಮಾತ್ರ ವಾರದಲ್ಲಿ ಮೂವರಿಗೆ ಮಾತ್ರ ದರ್ಶನ್‌ ಭೇಟಿಗೆ ಅವಕಾಶ ನೀಡಲಾಗುತ್ತಿದೆ.

ಕೆಲವು ಸಿನಿಮಾ ನಟ, ನಿರ್ಮಾಪಕರು ಸಹ ದರ್ಶನ್ ಅನ್ನು ಜೈಲಿನಲ್ಲಿ ಭೇಟಿ ಆಗಲು ಸಾಧ್ಯ ಆಗದೆ ವಾಪಾಸ್‌ ತೆರಳಿರುವ ಘಟನೆಗಳು ನಡೆದಿವೆ. ಅಲ್ಲದೆ, ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದ ಕೆಲವೇ ವ್ಯಕ್ತಿಗಳಲ್ಲಿ ಬಾಲ್ಯದ ಗೆಳೆಯ ಕಾಡು ಶಿವು ಸಹ ಒಬ್ಬರಾಗಿದ್ದಾರೆ.

ದರ್ಶನ್‌ನನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿರುವ ಶಿವಕುಮಾರ್‌ ತಮ್ಮ ಹಾಗೂ ದರ್ಶನ್‌ ಅವರ ನಡುವಿನ ಬಾಂಧವ್ಯದ ಜೊತೆಗೆ ದರ್ಶನ್‌ಗಿದ್ದ ಯೋಚನೆಗಳು, ಮಗನ ಬಗ್ಗೆ ಇದ್ದ ಆಸೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

"ನಮ್ಮದು ತುಂಬಾ ಬಹಳ ಹಳೆ ಬಾಂಧವ್ಯವಾಗಿದೆ. ಮೈಸೂರಿನ ಪ್ರಭಾ ಥಿಯೇಟರ್‌ನಲ್ಲಿ ಸಿನಿಮಾ ನಟರ ಕಟೌಟ್ ನೋಡಿ ನಂದೂ ಹೀಗೆ ಕಟೌಟ್ ನಿಲ್ಲುತ್ತದೆ ಅಂತಾ ಹೇಳಿಕೊಂಡಿದ್ದರು. ಹಾಗೆಯೇ ಆಯಿತು," ಎಂದು ಹೇಳಿಕೊಂಡಿದ್ದಾರೆ.

"ನಟ ದರ್ಶನ್ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಬಂಡಿಯಲ್ಲಿ ಮಹದೇಶ್ವರನ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರು. ಜೂನ್‌ನಲ್ಲಿ ಬಂಡಿಗಳನ್ನು ಕಟ್ಟಿಕೊಂಡು ಮಹದೇಶ್ವರ ಬೆಟ್ಟಕ್ಕೆ ಹೋಗುವ ಯೋಜನೆಯಲ್ಲಿದ್ದರು. ಆದರೆ, ಅಷ್ಟರಲ್ಲೇ ದರ್ಶನ್‌ ಜೈಲು ಸೇರಿದರು. ದರ್ಶನ್ ಅವನ ಸ್ವಂತ ವಿಷಯಕ್ಕೆ ಎಂದೂ ಸಮಸ್ಯೆಗೆ ಸಿಕ್ಕಿಹಾಕಿಕೊಂಡವರಲ್ಲ. ಯಾವಾಗಲೂ ಬೇರೆಯವರ ಸಮಸ್ಯೆಗೆ ಸಿಕ್ಕಿರುವುದು ಹೆಚ್ಚು," ಎಂದು ಹೇಳಿದ್ದಾರೆ.

"ಮಗನ ಬಗ್ಗೆ ದರ್ಶನ್‌​ಗೆ ತುಂಬಾ ಕನಸುಗಳಿವೆ. ನನ್ನ ರೀತಿಯಲ್ಲೇ ಶ್ರಮವಹಿಸಿ ಅವನು ಸಿನಿಮಾ ರಂಗವನ್ನು ಪ್ರವೇಶಿಸಬೇಕು. ಒಂದೇ ಬಾರಿಗೆ ನಾಯಕ ನಟ ಆಗಬಾರದು. ಮೊದಲು ಬೇರೆ-ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ಳಬೇಕು. ನಂತರ ಅಷ್ಟೇ ಸಿನಿಮಾ ನಟನಾಗಬೇಕು ಎಂದುಕೊಂಡಿದ್ದರು. ವಿಜಯಲಕ್ಷ್ಮಿ ಅವರೊಟ್ಟಿಗೂ ಸಹ ದರ್ಶನ್ ಚೆನ್ನಾಗಿದ್ದರು. ಸಿನಿಮಾಗಳು ಚೆನ್ನಾಗಿ ನಡೆಯುತ್ತಿದ್ದವು. ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದಾಗ ರಾಜಕೀಯಕ್ಕೆ ಬರುವ ಯೋಚನೆಯೂ ಇತ್ತು. ಎಲ್ಲವೂ ಚೆನ್ನಾಗಿ ನಡೆಯುವಾಗ ಹೀಗಾಗಿದೆ," ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+