ಬೆಂಗಳೂರು-ಧರ್ಮಪುರಿ ಮಾರ್ಗದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣ, ವೆಚ್ಚ ಎಷ್ಟು ಸಾವಿರ ಕೋಟಿ?-ಮಾಹಿತಿ, ವಿವರ

ಚೆನ್ನೈ, ಮಾರ್ಚ್‌, 12: ದೇಶದಲ್ಲಿ ರೈಲು ಸಂಪರ್ಕ ವಿಸ್ತರಣೆ ಆಗುತ್ತಲೇ ಇದ್ದು, ಹಲವೆಡೆ ಈ ಕಾಮಗಾರಿಗಳು ಕೂಡ ನಡೆಯುತ್ತಿವೆ. ಹಾಗೆಯೇ ಇದೀಗ ಧರ್ಮಪುರಿ-ಬೆಂಗಳೂರು ಮಾರ್ಗದಲ್ಲಿ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇಲಾಖೆ ಮಾಹಿತಿಯ ಪ್ರಕಾರ ಇದಕ್ಕೆ ತಗಲುವ ವೆಚ್ಚ ಹಾಗೂ ಇದರಿಂದ ಏನೆಲ್ಲ ಪ್ರಯೋಜನೆಗಳಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ದೊಡ್ಡ ದೊಡ್ಡ ರೈಲ್ವೆ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಅವರ ಅನುಕೂಲಕ್ಕೆ ತಕ್ಕಂತೆ ಇಂತಹ ಕಾಮಗಾರಿಗಳನ್ನು ಕೈಗೊಂಡು ರೈಲು ಸೇವೆಯನ್ನು ಒದಗಿಸುವಲ್ಲಿ ಭಾರತೀಯ ರೈಲ್ವೆ ಯಶಸ್ಸು ಕಾಣುತ್ತಿದೆ.

Do you know the construction cost of the new railway line between Bengaluru and Dharmapuri

2,500 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಪುರಿ-ಹೊಸೂರು-ಬೆಂಗಳೂರು ವಿಭಾಗದಲ್ಲಿ ಹೊಸ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈ ಯೋಜನೆಯ ಕುರಿತಿ ವರದಿಯನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್‌.ಎನ್. ಸಿಂಗ್ ಮಾಹಿತಿ ನೀಡಿದ್ದಾರೆ.

ಇನ್ನು ವಂದೇ ಭಾರತ್‌ ರೈಲು ಜನಮನ್ನಣೆ ಗಳಿಸುವ ಮೂಲಕ ದೇಶಾದ್ಯಂತ ವಿಸ್ತರಣೆ ಆಗುತ್ತಿದೆ. ಇದರ ವೇಗ, ಸೌಲಭ್ಯಗಳಿಗೆ ಜನರು ಫಿದಾ ಆಗಿಬಿಟ್ಟಿದ್ದಾರೆ. ಹಾಗೆಯೇ ಜನರ ಅನುಕೂಲಕ್ಕೆ ತಕ್ಕಂತೆ ಭಾರತೀಯ ರೈಲ್ವೆಯು ಈ ರೈಲು ಸೇವೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಲು ಮುಂದಾಗಿದೆ.

ಹಾಗೆಯೇ ಇಂದು (ಮಾರ್ಚ್‌ 12) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆನ್ನೈ-ಮೈಸೂರು ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ ಎಂದು ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್‌.ಎನ್. ಸಿಂಗ್ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 4ರವರೆಗೆ ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಈ ರೈಲು ಸಂಚಾರ ಮಾಡಲಿದೆ. ನಂತರ ಈ ಸೇವೆಯನ್ನು ಮೈಸೂರಿಗೆ ವಿಸ್ತರಣೆ ಮಾಡಲಾಗುತ್ತದೆ. ಇನ್ನು ಮತ್ತೊಂದೆಡೆ ಹೆಚ್ಚುವರಿಯಾಗಿ ತಿರುಪತಿ-ಕೊಲ್ಲಂ ಎಕ್ಸ್‌ಪ್ರೆಸ್ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರಿಗೆ ಸಂಪರ್ಕ ಕಲ್ಪಿಸುವಂತೆ ವಿಸ್ತರಣೆಗೆ ಮಾಡಲಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಬೇಸಿನ್ ಬ್ರಿಡ್ಜ್‌ನಲ್ಲಿ ಪಿಟ್‌ಲೈನ್, ಗೂಡ್ಸ್ ಶೆಡ್‌ಗಳು, ವಾಂಚಿ ಮಣಿಯಾಚ್ಚಿ-ನಾಗರ್‌ಕೋಯಿಲ್ ಡಬ್ಲಿಂಗ್ ಯೋಜನೆ ಮತ್ತು ಚೆನ್ನೈ ಸೆಂಟ್ರಲ್‌ನಲ್ಲಿ ರೈಲ್ ಕೋಚ್ ರೆಸ್ಟೋರೆಂಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೋಗೆ ವಂದೇ ಭಾರತ್‌ ರೈಲು ಸೇವೆ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಿದ್ದ, ಜನರು ಇದರ ಸೇವೆಯನ್ನು ಮೆಚ್ಚಿಕೊಂಡು ಈ ರೈಲಿನಲ್ಲಿಯೇ ಹೆಚ್ಚಾಗಿ ಪ್ರಯಾಣ ಮಾಡಲು ಇಚ್ಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+