Bengaluru Waste: ಕಸ ವಿಲೇವಾರಿಗೆ ಬಿಜೆಪಿ ನಾಯಕರಿಂದಲೇ ಅಡಚಣೆ, 'ಎಸ್ಮಾ' ಜಾರಿ ಎಚ್ಚರಿಕೆ ಕೊಟ್ಟ ಡಿಕೆ.ಶಿವಕುಮಾರ್
ಬೆಂಗಳೂರು: ಯಾರೇ ಆಗಲಿ ಕಸ ವಿಲೇವಾರಿಗೆ ಅಡ್ಡಪಡಿಸಿದರೆ ಎಸ್ಮಾ ಜಾರಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಡ್ಡಿಪಡಿಸುವವರು ಮನೆ ಮುಂದೆನೆ ಕಸ ವಿಲೆವಾರಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಬಿಜೆಪಿ ಶಾಸಕರಿಗೆ ಮತ್ತು ಮುಖಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಗೌರವದಿಂದ ಇದ್ದರೆ ಸರಿ. ಇಲ್ಲದಿದ್ದರೆ ಎಸ್ಮಾ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳತ್ತೇವೆ. ಕಸ ವಿಲೇವಾರಿಗೆ ಅಡ್ಡಪಡಿಸುವ ಬಿಜೆಪಿ ಶಾಸಕರುಗಳು ಹಾಗು ನಾಯಕರ ಮನೆ ಮುಂದೆನೆ ಕಸ ಹಾಕಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಏಕೆಂದರೆ ಈಗ ನಗರದ ಕಸ ವಿಲೇವಾರಿ ಬಿಕ್ಕಟ್ಟಿನ ಹಿಂದೆ ಕೆಲವು ಹಾಲಿ ಮತ್ತು ಮಾಜಿ ಬಿಜೆಪಿ ಶಾಸಕರುಗಳು ಕೈವಾಡವಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಡಿಕೆ.ಶಿವಕುಮಾರ್ ಈ ಹೇಳಿಕೆ ಹೆಚ್ಚು ಮಹತ್ವ ಪಡೆದಿದೆ. ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಸ್ಥರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ, ಆದರೆ ಈ ರೀತಿ ಕಸ ವಿಲೇವಾರಿಗೆ ತೊಂದರೆ ನೀಡಿದರೆ, ಬೆದರಿಕೆ ಹಾಕುವ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳವುದಾಗಿ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ನಾಯಕರ ಮನೆ ಮುಂದೆ ಕಸ ಎಚ್ಚರಿಕೆ
ಕಸ ವಿಲೇವಾರಿಗೆ ತಡೆ ನೀಡಲು ಮುಂದಾದರೆ ವಿಪಕ್ಷ ನಾಯಕ ಆರ್.ಅಶೋಕ ಮತ್ತು ಬಿಜೆಪಿ ರಾಜ್ಯದ್ಯಕ್ಷ ವಿಜಯೇಂದ್ರ ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ನಿನ್ನೆ ಅರವಿಂದ್ ಲಿಂಬಾವಳಿ ಅವರು ಕಸ ಹಾಕು ತೊಂದರೆ ಮಾಡಿದ್ದರು, ಇಂದು ದೊಡ್ಡಬಳ್ಳಾಪುರ ಶಾಸಕರು ಅದೇ ಕೆಲಸ ಮಾಡಿದ್ದಾರೆ. ಆ ಕಸ ಇನ್ನೆಲ್ಲಿಗೋಬೇಕು? ಆರ್.ಅಶೋಕ್ ಮನೆಗೆ ಹೊಗಬೇಕಾ? ಇಲ್ಲಾ, ಬಿ.ವೈ. ವಿಜಯೇಂದ್ರ ಮನೆಗೆ ಹೊಗಬೇಕಾ ಅಥವಾ ಬಿಜೆಪಿ ಕಚೇರಿಗೆ ಮುಂದೆ ತಂದು ಸುರಿಯಬೇಕಾ ಎಂದು ಗುಡುಗಿದರು
ಮೊದಲಿಂದ ಕಸ ಎಲ್ಲೆಲ್ಲಿ ವಿಲೇವಾರಿ ಮಾಡಿಕೊಂಡು ಬರಲಾಗುತ್ತದೆಯೋ ಅದನ್ನೆ ಈಗಲೂ ಮಾಡಲಾಗುತ್ತಿದೆ. ಇವರ ಕ್ಷೇತ್ರಕ್ಕೆ ಪಂಡ್ ಬೇಕು ಎಂದು ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ನಾಳೆ ಬೆಳಗ್ಗೆ ನಾಯಕ ಎಸ್‌ಟಿ ಸೋಮಶೇಖರ ಹಾಗೂ ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಕಸ ವಿಲೇವಾರಿಗೆ ಎರಡು ಜಾಗನು ಖರೀದಿಸಿದ್ದೇವೆ. ಕಾನೂನು ಪ್ರಕಾರ ಟೆಂಡರ್ ಕರಿದಿದ್ದೇವೆ. ಕಾನೂನು ಅಡಚಣೆ ನಿವಾರಿಸಿಕೊಂಡು ಹೊಸ ಜಾಗದಲ್ಲಿ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಗುತ್ತಿಗೆದಾರರು 10 ಸಾವಿರ ಕೋಟಿ ರೂ, 20 ಮತ್ತು 30 ಸಾವಿರ ಕೋಟಿ ರೂಪಾಯಿ ಟೆಂಡರ್ ಕರಿದಿದ್ದರು. ಇದಕ್ಕೆಲ್ಲ ಬಿಜೆಪಿ ಸರ್ಕಾರನೇ ಕಾರಣ. ದುಡ್ಡು ಇಲ್ಲದಿದ್ದರೂ ಇಂತಹ ತಪ್ಪು ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಿಯಮಗಳ ಪ್ರಕಾರ, ಬಜೆಟ್ ನೋಡಿಕೊಂಡು ನೀಡುತ್ತದೆ. ಹೆದರಿಸುವವರು ಹೆದರಿಸಲಿ ಬಿಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications