Get Updates
Get notified of breaking news, exclusive insights, and must-see stories!

ಬೆಂಗಳೂರು ಗುಂಡಿಮುಕ್ತ ರಸ್ತೆಗಾಗಿ 1800 ಕೋಟಿ ಯೋಜನೆಗೆ ಡಿಸಿಎಂ ಚಾಲನೆ: ಎಲ್ಲೆಲ್ಲಿ ಕಾಮಗಾರಿ ನಡೆಯಲಿದೆ?

ಬೆಂಗಳೂರು, ಜುಲೈ 15: ಬೆಂಗಳೂರಿನ ರಸ್ತೆಗಳು ಪದೇ ಪದೆ ಕಿತ್ತು ಬರುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಮಳೆಗಾಲವಾದ್ದರಿಂದ ರಸ್ತೆ ಗುಂಡಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯಿಸಿ ವೈಟ್‌ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ.

ಬೆಂಗಳೂರಿನಲ್ಲಿ ಬರೋಬ್ಬರಿ 157ಕಿಲೋ ಮಿಟರ್ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ₹1800 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಸೋಮವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದರು.

DK Shivakumar Gave Green Signal For Project of Rs 1800 Crore worth 157 KM road White Topping

"ಬ್ರ್ಯಾಂಡ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು" ಪರಿಕಲ್ಪನೆಯಡಿ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಪುರಗಳಲ್ಲಿ ಆರಂಭಿಕ ಹಂತದಲ್ಲಿ ₹200 ಕೋಟಿ ವೆಚ್ಚದಲ್ಲಿ 19.67 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಡಿಕೆ ಶಿವಕುಮಾರ್ ಮಾತನಾಡಿದರು.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬೀಳಬಾರದು ಎಂಬ ಉದ್ದೇಶದಿಂದ ವೈಟ್ ಟಾಪಿಂಗ್ ರಸ್ತೆ ಮಾಡಲಾಗುತ್ತಿದೆ. ಈ ರಸ್ತೆಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ನಿತ್ಯ ಮೂರ್ನಾಲ್ಕು ವಾರ್ಡ್ ಗಳಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಲಮಿತಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಆಶ್ವಾಸನೆ ಕೊಟ್ಟರು.

ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು 200 ಕಿ.ಮೀ ನಷ್ಟು ಹೊಸ ರಸ್ತೆ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದೇವೆ. ಉನ್ನತ ಗುಣಮಟ್ಟಕ್ಕಾಗಿ ವೈಟ್ ಟಾಪಿಂಗ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಒಟ್ಟು ವೈಟ್ ಟಾಪಿಂಗ್ ಯೋಜನೆ ಸಂಕ್ಷಿಪ್ತ ಮಾಹಿತಿ

• ಮಹಾಲಕ್ಷ್ಮೀಪುರಂ ವಿಧಾನಸಭಾ ಕ್ಷೇತ್ರ: ಇಲ್ಲಿ ಒಟ್ಟಾರೆಯಾಗಿ 3 ರಸ್ತೆಗಳನ್ನು 2.14 ಕೀ.ಮೀ. ಉದ್ದಕ್ಕೆ ಒಟ್ಟು ರೂ. 25.00 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

• ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ: ಇಲ್ಲಿ ಒಟ್ಟಾರೆಯಾಗಿ 2 ರಸ್ತೆಗಳನ್ನು 3.00 ಕೀ.ಮೀ. ಉದ್ದಕ್ಕೆ ಒಟ್ಟು ರೂ. 30.00 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

• ಗಾಂಧಿನಗರ ವಿಧಾನಸಭಾ ಕ್ಷೇತ್ರ: ಇಲ್ಲಿ ಒಟ್ಟಾರೆಯಾಗಿ 4 ರಸ್ತೆಗಳನ್ನು 3.84 ಕೀ.ಮೀ. ಉದ್ದಕ್ಕೆ ಒಟ್ಟು ರೂ. 50.00 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿರುತ್ತದೆ.

• ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರ: ಇಲ್ಲಿ ಒಟ್ಟಾರೆಯಾಗಿ 9 ರಸ್ತೆಗಳನ್ನು 7.64 ಕೀ.ಮೀ. ಉದ್ದಕ್ಕೆ ಒಟ್ಟು ರೂ. 102.00 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿರುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ "ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಸುಗಮ ಸಂಚಾರ ಬೆಂಗಳೂರು" ವಲಯದ 4 ವಿಧಾನ ಸಭಾ ಕ್ಷೇತ್ರಗಳಿಗೆ ಒಟ್ಟಾರೆಯಾಗಿ 18 ರಸ್ತೆಗಳನ್ನು 16.62 ಕೀ.ಮೀ. ಉದ್ದಕ್ಕೆ ಒಟ್ಟು ರೂ. 207.00 ಕೋಟಿಗಳ ಮೊತ್ತದಲ್ಲಿ ವೈಟ್ ಟಾಪಿಂಗ್ ಅಭಿವೃದ್ಧಿ ಕಾಮಗಾರಿ ನಡೆಸುವ ಗುರಿ ಹೊಂದಲಾಗಿದೆ.

DK Shivakumar Gave Green Signal For Project of Rs 1800 Crore worth 157 KM road White Topping

ಚಾಮರಾಜ ಪೇಟೆಯಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ "5 ಸಂಖ್ಯೆಯ ಆರ್ಟಿರಿಯಲ್/ಸಬ್ ಆರ್ಟರಿಯಲ್ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಹಾಗೂ ಪಾದಾಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

* ಉದ್ದೇಶಿತ ಯೋಜನೆಯ ಮಾದರಿ: ವೈಟ್ ಟಾಪಿಂಗ್ ಹಾಗೂ ಟೆಂಡರ್‌ಶೂರ್ ಮಾದರಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿ.

* ಯೋಜನೆಯ ಒಟ್ಟು ಅಂದಾಜು ಮೊತ್ತ: ರೂ. 52.00 ಕೋಟಿಗಳು.

ಕಾಮಗಾರಿಗಳ ಸ್ಥಳಗಳು

* ಪಂಪ ಮಹಾಕವಿ ರಸ್ತೆ (ಮಿಂಟೋ ಆಸ್ಪತ್ರೆ ಜಂಕ್ಷನ್ ನಿಂದ ಚಾಮರಾಜಪೇಟೆ 5ನೇ ಮುಖ್ಯರಸ್ತೆ ವರೆಗೆ): 0.40 ಕಿ.ಮೀ ಉದ್ದ ಹಾಗೂ 18.00 ಮೀ.ಅಗಲ.

* ಬುಲ್ ಟೆಂಪಲ್ ರಸ್ತೆ (ರಾಯನ್ ವೃತ್ತದಿಂದ- ಚಾಮರಾಜಪೇಟೆ 5ನೇ ಮುಖ್ಯ ರಸ್ತೆ ವರೆಗೆ)-0.40 ಕಿ.ಮೀ ಉದ್ದ ಹಾಗೂ 12.00 ಮೀ. ಅಗಲ.

* ಚಾಮರಾಜಪೇಟೆ 5ನೇ ಮುಖ್ಯ ರಸ್ತೆ (ಕೆ.ಆರ್ ರಸ್ತೆಯಿಂದ 9ನೇ ಅಡ್ಡ ರಸ್ತೆ ವರೆಗೆ) 1.70 ಕಿ.ಮೀ ಉದ್ದ ಹಾಗೂ 9.50 ಮೀ.ಅಗಲ.

* ಚಾಮರಾಜಪೇಟೆ 7ನೇ ಮುಖ್ಯ ರಸ್ತೆ (ಸಿರ್ಸಿ ವೃತ್ತದಿಂದ 5ನೇ ಮುಖ್ಯ ರಸ್ತೆ ವರೆಗೆ) - 0.75 ಕಿ.ಮೀ ಉದ್ದ ಹಾಗೂ 9.50 ಮೀ. ಅಗಲ.

* ಚಾಮರಾಜಪೇಟೆ 2ನೇ ಮುಖ್ಯ ರಸ್ತೆ (2ನೇ ಅಡ್ಡ ರಸ್ತೆಯಿಂದ 9ನೇ ಅಡ್ಡ ರಸ್ತೆವರೆಗೆ) -1.00 ಕಿ.ಮೀ ಉದ್ದ ಹಾಗೂ 9.50 ಮೀ.ಅಗಲ.

* ಜೆ.ಎಂ.ಸಿ ಕನ್‌ಸ್ಟಕ್ಷನ್ಸ್ ಪ್ರೈ ಲಿಮಿಟೆಡ್ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+