ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ; ಡಿಕೆ ಶಿವಕುಮಾರ್
ಬೆಂಗಳೂರು, ಮಾರ್ಚ್ 28; "ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ. ಯಾರು ಏನು ಬೇಕಾದರೂ ಹೇಳಲಿ ಕಾನೂನು ಇದೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡತ್ತೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರದಿಂದ ವಾಪಸ್ ಆದ ಡಿ. ಕೆ. ಶಿವಕುಮಾರ್ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಆರೋಪಗಳ ಕುರಿತು ಮಾತನಾಡಿದರು.
"ಯಾರು ಏನು ಬೇಕಾದರೂ ಹೇಳಬಹುದು. ಅದಕ್ಕೆಲ್ಲ ಪುರಾವೆಗಳು ಬೇಕು. ಅವರು ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಯುವತಿ ಆಡಿಯೋ ಬಗ್ಗೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಯುವತಿ ನನ್ನ ಬಳಿ ಬಂದಿಲ್ಲ. ಭೇಟಿ ಕೂಡಾ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಶನಿವಾರ ಸಂಜೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, "ಆ ಮಹಾನಾಯಕ ಯಾರೆಂದು ಯುವತಿಯ ಪೋಷಕರು ಹೇಳಿದ್ದಾರೆ. ಆ ನಾಯಕ ರಾಜಕೀಯದಲ್ಲಿ ಇರಲು ನಾಲಾಯಕ್, ಇಂಥ ಷಡ್ಯಂತ್ರ ಮಾಡಬಾರದು" ಎಂದು ಹೇಳಿದ್ದರು.
ಡಿಕೆಶಿ ಬೆಳಗಾವಿಗೆ; ರಮೇಶ್ ಜಾರಕಿಹೊಳಿ ಸಿಡಿ ವಿವಾದದ ನಡುವೆಯೇ ಇಂದು ಸಂಜೆ ಡಿ. ಕೆ. ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಬೆಳಗಾವಿಗೆ ತಲುಪಲಿರುವ ಡಿ. ಕೆ. ಶಿವಕುಮಾರ್ 7 ಗಂಟೆಗೆ ಜಿಲ್ಲಾ ಘಟಕದ ಜೊತೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.











Click it and Unblock the Notifications