₹01 ಲಕ್ಷ ಕೋಟಿ ಹೂಡಿಕೆ: ಇಡೀ ಬೆಂಗಳೂರು ವಿಸ್ತರಣೆಗೆ ಸರ್ಕಾರ ರೂಪಿಸಿದ ಯೋಜನೆಗಳಿವು: ಡಿಕೆ ಶಿವಕುಮಾರ್
ಬೆಂಗಳೂರು, ಜೂನ್ 16: ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಬೆಂಗಳೂರು ಮಹಾನಗರಕ್ಕೆ ಸಾಕಷ್ಟು ಹೆಸರುಗಳಿವೆ. ತನ್ನ ಸಾಧನೆ, ಉತ್ಪಾದನೆ, ಕೊಡಗೆ ಸೇರಿದಂತೆ ಇತರ ಕಾರಣಗಳಿಂದ ಗುರುತಿಸಿಕೊಳ್ಳುತ್ತಿರುವ ಬೆಂಗಳೂರು ಬೆಳೆಯುತ್ತಿರುವ ನಗರ. ಜನಸಂಖ್ಯೆ ದ್ವಿಗುಣಗೊಳ್ಳಲಿದೆ. ಹೀಗಾಗಿ ರಾಜ್ಯ ಸರ್ಕಾರ ಸರ್ಕಾರ ಬೆಂಗಳೂರು ವಿಸ್ತರಣೆಗೆ, ಸಮಸ್ಯೆಗಳಿಗೆ ಮುಕ್ತಿ ನೀಡಲು ಅಥವಾ ಭವಿಷ್ಯ ಸಮಸ್ಯೆ ಗಮನದಲ್ಲಿಟ್ಟು ಕೊಂಡು ಬರೋಬ್ಬರಿ 1,00,000 ಕೋಟಿ ರೂಪಾಯಿಯನ್ನು ಬೆಂಗಳೂರಿನಲ್ಲಿ ಹೂಡಿಕೆ ಮಾಡಿದೆ.
ಈ ಬಗ್ಗೆ ಖುದ್ದಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮೂಲಕ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ. ಬೆಂಗಳೂರು ಮುಂದಿನ 4-5 ವರ್ಷಗಳಲ್ಲಿ 'ಜಾಗತಿಕ ಬ್ಯಾಂಡ್' ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರ 44,000 ಕೋಟಿ ಹೂಡಿಕೆ ಮಾಡಿದೆ. ಇದು ನಗರದಲ್ಲಿ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಇನ್ನು ನಗರದ ಸಂಚಾರದ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿವು ಸುರಂಗ ರಸ್ತೆ (Bengaluru Tunnel Road Project) ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಬರೋಬ್ಬರಿ 37000 ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದರು.
17000+ 14000 ಕೋಟಿ ರೂ. ಹೂಡಿಕೆ
ಬೆಂಗಳೂರು ಟನಲ್ ರಸ್ತೆ ಯೋಜನೆಗಳ ಪೈಕಿ ಮೊದಲ ಹಂತದ ಹೆಬ್ಬಾಳ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಟನಲ್ ರಸ್ತೆ ನಿರ್ಮಾಣಕ್ಕಾಗಿ 17000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ನಗರದಲ್ಲಿ ಎಲೆವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ 14000 ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಇದರಿಂದ ಭವಿಷ್ಯದಲ್ಲಿ ದ್ವಿಗುಣಗೊಳ್ಳುವ ಬೆಂಗಳೂರಿನ ಜನಸಂಖ್ಯೆಗೆ ಅಗತ್ಯೆಕ್ಕೆ ಅನುಗುಣ ಬೇಡಿಕೆ ಈಡೇರಿಕೆಗೆ ಸಾಧ್ಯವಾಗುತ್ತದೆ ಎಂಬದು ಸರ್ಕಾರದ ಚಿಂತನೆಯಾಗಿದೆ.
ಕರ್ನಾಟಕ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ, ನವ ಕರ್ನಾಟಕ ನಿರ್ಮಾಣಕ್ಕೆ ಬದ್ಧವಾಗಿದೆ. ಇದು ಬರೀ ಯೋಜನೆ ಅಲ್ಲ. ಸಮೃದ್ಧ ಬೆಂಗಳೂರಿಗೆ ನಮ್ಮ ವಾಗ್ದಾನ. ನಗರದ ಚಹರೆ ಬದಲಿಸುವ ಯೋಜನೆಗಳೂ ಇವು. ನವ ಕರ್ನಾಟಕಕ್ಕೆ ಪ್ರಗತಿ ಹೆಜ್ಜೆ ಇಟ್ಟಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
₹1 Lakh Crore.
— DK Shivakumar (@DKShivakumar) June 16, 2025
That’s the scale of our commitment to transforming Bengaluru.
In the last 20 years, our city’s population has more than doubled. To meet the demands of this rapid urban expansion, we have formulated development projects worth ₹1 lakh crore.
This is not just… pic.twitter.com/jyRktb4fSX
ಕೆಲವು ಯೋಜನೆಗಳಿಗೆ ಆಕ್ಷೇಪ
ಬ್ರ್ಯಾಂಡ್ ಬೆಂಗಳೂರಿನ ಹೆಸರಿನಡಿ ಹಲವು ಅಭವೃದ್ಧಿ ಯೋಜನೆಗಳು ಈಗಾಗಲೇ ಘೊಷಣೆ ಆಗಿವೆ. ಅದರಲ್ಲಿ ಸುರಂಗ ಯೋಜನೆಗೆ, ರಸ್ತೆ ಆದ್ಯತೆ ನೀಡುವ ಬದಲು ಸರ್ಕಾರದ ನಿರ್ಲಕ್ಷ್ಯ ಇತರ ಕಾರಣಗಳಿಗೆ ಆಕ್ಷೇಪ ಎದುರಿಸುತ್ತಿದೆ. ಈ ಮಧ್ಯೆ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ.
ಹೆಣ್ಣು ಮಕ್ಕಳಿಗೆ ಮುತ್ತು-ರತ್ನಗಳು ಆಭರಣವಿದ್ದಂತೆ, ಕೊಡವ ಸಮಾಜ ಕರ್ನಾಟಕಕ್ಕೆ ಆಭರಣವಿದ್ದಂತೆ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿರುವ ಡಿಕೆ ಶಿವಕುಮಾರ್ ಅವರು, ಕೊಡವ ಸಮುದಾಯದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಸಲುವಾಗಿ ನಮ್ಮ ಸರ್ಕಾರವು ಬೆಂಗಳೂರಿನಲ್ಲಿ 7 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇನ್ನು ನಮ್ಮ ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications