ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾದ ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆಪ್ಟೆಂಬರ್ 18: ಇಂದು ಬೆಳಿಗ್ಗೆಯಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ರಾತ್ರಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ಕನಕಪುರದಿಂದ ರಾಮನಗರಕ್ಕೆ ಬರುವಾಗ ದಾರಿಯಲ್ಲಿ ತಿಂದ ಆಹಾರದಿಂದಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಫುಡ್ ಪಾಯ್ಸನ್ ಆಗಿತ್ತು. ಡೀಹೈಡ್ರೇಶನ್ ನಿಂದ ಬಳಲಿದ್ದ ಅವರನ್ನು ರಾಮನಗರ ನಿವಾಸದಲ್ಲಿಯೇ ವೈದ್ಯರು ಪರೀಕ್ಷಿಸಿ ಉಪಚಾರ ಮಾಡಿದ್ದರು.

DK Shivakumar admitted to Apollo hospital in Bengaluru

ಸಂಜೆ ವೇಳೆಗೆ ಸ್ವಲ್ಪ ಚೇತರಿಸಿಕೊಂಡವರಂತೆ ಕಂಡ ಡಿ.ಕೆ.ಶಿವಕುಮಾರ್, ತಾಯಿ ಮತ್ತು ಮಗಳ ಜೊತೆ ಬೆಂಗಳೂರಿಬ ನಿವಾಸಕ್ಕೆ ಬಂದರು. ಅಲ್ಲಿಯೂ ಸಹ ವೈದ್ಯರು ಬಂದು ಪರೀಕ್ಷೆ ಮಾಡಿದರು. ಆದರೆ ಅವರ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣದ ಕಾರಣ ಅವರನ್ನು ರಾತ್ರಿ ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ.

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇಂದಷ್ಟೆ ಇಡಿ ಎಫ್‌ಐಆರ್ ದಾಖಲಿಸಿದೆ. ವಿಚಾರಣೆಗೆ ಹಾಜರಾಗುವಂತೆ ಕೆಲವೇ ದಿನಗಳಲ್ಲಿ ಅವರಿಗೆ ನೊಟೀಸ್ ಸಹ ಬರಬಹುದು. ಡಿ.ಕೆ.ಶಿವಕುಮಾರ್ ಅವರ ಬಂಧನವಾಗುವ ಸಾಧ್ಯತೆಯೂ ಇದೆ.

ಡಿ.ಕೆ. ಸಾಹೇಬ್ರು ಚಿಲ್ಲರೆ ರಾಜಕಾರಣ ಮಾಡೊಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+