ಬೆಂಗಳೂರಲ್ಲಿ ನೀರಿಗಾಗಿ ಜಗಳ:ಕೋಪದಲ್ಲಿ ಗರ್ಭಿಣಿಯನ್ನೇ ಕಚ್ಚಿದ ಮಹಿಳೆ

ಬೆಂಗಳೂರು, ಸೆ.28: ಬೆಂಗಳೂರಲ್ಲಿ ಒಂದೆರೆಡು ದಿನ ನೀರಿಲ್ಲ ಅಂದರೆ ಏನೇನಾಗುತ್ತೆ ಗೊತ್ತಾ, ಸ್ಟೋರಿ ಇಲ್ಲಿದೆ ನೋಡಿ..

ಮೊದಲೇ ನೀರಿಗಾಗಿ ದಿನನಿತ್ಯ ಮಹಿಳೆಯರ ಜಗಳಗಳು ಸಹಜ, ನಾಮುಂದು, ತಾಮುಂದು ಎಂದು ಬಿಂದಿಗೆಗಳನ್ನಿಡುತ್ತಾ ಒಬ್ಬರನ್ನೊಬ್ಬರು ದೂರುತ್ತಾ ಇರುವುದು ಸಹಜ ಸ್ಥಿತಿ ಆದರೆ ನೀರಿಗಾಗಿ ಗರ್ಭಿಣಿಯ ಕೈ ಕಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನೀರಿಗಾಗಿ ಜಗಳವಾಡುತ್ತಾ ಮಹಿಳೆಯೊಬ್ಬರು ಗರ್ಭಿಣಿಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದು, ಆಕೆ ಗಂಭಿರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Dispute over water: Anguish woman bites pregnant one

ಬೆಂಗಳೂರು ಹೊರ ವಲಯದ ರಾಜಾನುಕುಂಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ನೀರಿಗಾಗಿ ಮಹಿಳೆಯರಿಬ್ಬರ ನಡುವೆ ಜಗಳ ಉಂಟಾಗಿದೆ, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಗರ್ಭಿಣಿ ಜಯದೇವಿ ಮತ್ತು ಅವರ ಸಹೋದರಿಯ ಕೈಯನ್ನು ಪಕ್ಕದ ಮನೆಯ ಅನಿತಾ ಎಂಬಾಕೆ ಕಚ್ಚಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರವೂ ನಗರದಲ್ಲಿ ಹಲವು ಕಡೆ ನೀರಿನ ವ್ಯತ್ಯಯ ಉಂಟಾಗಲಿದೆ, ಇಂತಹ ನೂರಾರು ಘಟನೆಗಳು ದಿನನಿತ್ಯ ನಡೆಯುತ್ತಿದ್ದರೂ ಬೆಳಕಿಗೆ ಬರುವುದು ಕೆಲವು ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+