ಬೈಕ್ ವ್ಹೀಲಿಂಗ್ ವಿವಾದ: ಯುವಕನಿಗೆ ಚೂರಿ ಇರಿತ
ಬೆಂಗಳೂರು, ಮಾರ್ಚ್ 27: ಕೊಲೆ, ಸುಲಿಗೆ ಪ್ರಕರಣಗಳು ದಿನದಿಂದಾ ದಿನಕ್ಕೆ ಹೆಚ್ಚಾಗುತ್ತಿದೆ. ಕಾನೂನಿನ ಯಾವುದೇ ಭಯವಿಲ್ಲದೆ ಬೆಳ್ಳಂಬೆಳಗ್ಗೆಯೇ ಯುವಕರ ಗುಂಪೊಂದು ಯುವಕನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಯುವತಿ ಹಾಗೂ ಬೈಕ್ ವಿಲ್ಹೀಂಗ್ ವಿಚಾರವಾಗಿ ಯುವಕನ ಮೇಲೆ ಗುಂಪೊಂದು ಚಾಕುವಿನಿಂದ ಇರಿದು, ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಕ್ಬರ್ ಅಲಿ (21) ಇರಿತಕ್ಕೆ ಒಳಗಾದ ಯುವಕ. ಮಾಗಡಿ ರಸ್ತೆಯ ದಾಸರಹಳ್ಳಿ ಬಸ್ ನಿಲ್ದಾಣದ ಎಸ್ ಬಿಐ ಬ್ಯಾಂಕ್ ಮುಂಭಾಗ ನಾಲ್ಕೈದು ಜನರ ಗುಂಪು ಅಕ್ಬರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಚಾಕುವಿನಿಂದ ಇರಿದು ಹತ್ಯೆ ಯತ್ನ ಮಾಡಿದ್ದಾರೆ.

ತೀವ್ರ ರಕ್ತಸ್ರಾವದಿಂದ ಸ್ಥಳದಲೇ ಒದ್ದಾಡುತ್ತಿದ್ದ ಅಕ್ಬರ್ ಅಲಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಶೋಧದಲ್ಲಿ ತೊಡಗಿದ್ದಾರೆ.












Click it and Unblock the Notifications