• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿ ಗಳಿಕೆ: ಬಿಬಿಎಂಪಿ ಅಧಿಕಾರಿಗೆ 40 ಲಕ್ಷ ರೂ. ದಂಡ, 4 ವರ್ಷ ಶಿಕ್ಷೆ

|
Google Oneindia Kannada News

ಬೆಂಗಳೂರು, ನವೆಂಬರ್ 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕರ ನಿರ್ಧಾರಕ ಅಧಿಕಾರಿ ಮೇಲಿನ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆ ಅಧಿಕಾರಿಗೆ 40ಲಕ್ಷ ರೂ. ಹಾಗೂ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಬಿಬಿಎಂಪಿಯ ಆರ್‌. ಪ್ರಸನ್ನಕುಮಾರ್ ಅಧಿಕಾರಿಯನ್ನು ದೋಷಿ ಎಂದು ಪರಿಗಣಿಸಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸೆಕ್ಷನ್ 13 (1) (ಇ) ಹಾಗೂ 13 (2) ಅಧಿಕಾರಿಗೆ 40ಲಕ್ಷ ರೂ. ಹಾಗೂ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

ದಂಡದ ಹಣ ಪಾವತಿಸಲು ಅಪರಾಧಿಯು ವಿಫಲವಾದಲ್ಲಿ ಹೆಚ್ಚುವರಿಯಾಗಿ ನಾಲ್ಕು ತಿಂಗಳ ಅನುಭವಿಸಬೇಕು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣ್ ಭಟ್ ಸೂಚಿಸಿದ್ದಾರೆ.

ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಮೌಲ್ಯ ನಿರ್ಧಾರ ಅಧಿಕಾರಿ (ಅಸಸರ್) ಆಗಿದ್ದ ಪ್ರಸನ್ನಕುಮಾರ್ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ಲೋಕಾಯುಕ್ತದಲ್ಲಿ ಪೊಲೀಸರು ದೂರು ದಾಖಲಿಸಿದ್ದರು. 2013ರ ವರ್ಷಾಂತ್ಯದ ಡಿಸೆಂಬರ್‌ನಲ್ಲಿ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಲಾಗಿತ್ತು.

ಶೇ. 61.69ರಷ್ಟು ಅಕ್ರಮ ಆಸ್ತಿ ಗಳಿಕೆ

1994 ಅಕ್ಟೋಬರ್‌ನಲ್ಲಿ ಕರ ನಿರ್ಧಾರಕ ಅಧಿಕಾರಿಯಾಗಿ ಬಿಬಿಎಂಪಿಗೆ ನೇಮಕಗೊಂಡಿದ್ದರು. ಬಳಿಕ 1998 ರ ಅಕ್ಟೋಬರ್ ತಿಂಗಳಿನಿಂದ ಈವರೆಗೆ 2013ರ ಡಿಸೆಂಬರ್‌ವರೆಗೆ ಪ್ರಸನ್ನಕುಮಾರ್ ಅಕ್ರಮ ಗಳಿಕೆಯಲ್ಲಿ ತೊಡಗಿದ್ದರು. ಒಟ್ಟು 39 ಲಕ್ಷ ರೂ. ಹಣವನ್ನು ಸಂಪಾದಿಸಿದ್ದಾರೆ ಎಂದು ದಾಳಿ ನಂತರ ತಿಳಿದು ಬಂದಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ ಆರೋಪಿ ವಿರುದ್ಧ ಆರೋಪ ಪಟ್ಟಿ ದಾಖಲಾಗಿತ್ತು. ಅಲ್ಲಿಂದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಬಂದಿತ್ತು.

Disproportionate assets: BBMP officer Prasanna Kumar gets 40 lakh Penalty and 4 years punishment

ಅಧಿಕಾರಿಗಳು ಆರೋಪಿಯ ದಾಖಲೆ ಪರಿಶೀಲಿಸಿದಾಗ ಆತನ ಬಳಿ ಸ್ಥಿರ ಮತ್ತು ಚರಾಸ್ತಿ ಸೇರಿ ಒಟ್ಟು 62 ಲಕ್ಷಕ್ಕೂ ಅಧಿಕ ರೂ. ಇದೆ. ಒಟ್ಟು 39.52 ಲಕ್ಷ ರೂ. ಖರ್ಚು ಮಾಡಲಾಗಿದೆ. ಆರೋಪಿ ಒಟ್ಟು ಒಂದು ಕೋಟಿಯ ಒಡೆಯ ಎಂದು ಗೊತ್ತಾಗಿದೆ. ದೊರೆತ ಕಡತ, ಸಾಕ್ಷ್ಯಗಳ ಆಧಾರದ ಮೇಲೆ ಅಧಿಕಾರಿ ಒಟ್ಟು ಶೇ. 61.69ರಷ್ಟು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

English summary
Disproportionate assets: A Special Court Sentenced BBMP officer Prasanna Kumar with 40 lakh Penalty and 4 years punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X