ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಕುಸಿತ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬದಲಾವಣೆ ತರುವ ನಿರೀಕ್ಷೆ ಇದೆ. ಈ ಕುರಿತು ಕಳೆದ ವಾರ ಒಂದು ಸುತ್ತಿನ ಸಭೆಯನ್ನು ನಡೆಸಲಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ಒದಗಿಸಲು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದ್ದಿದ್ದರು.

 ಇಂದಿರಾ ಕ್ಯಾಂಟೀನ್‌ಗೆ ಹೊಸ ಹೆಸರು ಸೂಚಿಸಿದ ಸಿ.ಟಿ. ರವಿ ಇಂದಿರಾ ಕ್ಯಾಂಟೀನ್‌ಗೆ ಹೊಸ ಹೆಸರು ಸೂಚಿಸಿದ ಸಿ.ಟಿ. ರವಿ

ಈಗ ಸರ್ಕಾರ ಕ್ಯಾಂಟೀನ್‌ ನಡೆಸಲು ಅನುದಾನ ನೀಡುವುದು ಸ್ಥಗಿತಗೊಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 174 ಕ್ಯಾಂಟೀನ್, 24 ಮೊಬೈಲ್ ಕ್ಯಾಂಟೀನ್‌ಗಳ ನಿರ್ವಹಣೆ ಹೊಣೆ ಸಂಪೂರ್ಣವಾಗಿ ಬಿಬಿಎಂಪಿ ಮೇಲೆ ಬಿದ್ದಿದೆ.

ತೀರ್ಥಹಳ್ಳಿ: ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ ಕಾಂಗ್ರೆಸ್ತೀರ್ಥಹಳ್ಳಿ: ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ ಕಾಂಗ್ರೆಸ್

Dip In Indira Canteen Visitors At BBMP Limits

ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಗಣನೀಯವಾಗಿ ಕುಸಿತಕಂಡಿದೆ. ಮೊದಲ ಎರಡು ವರ್ಷ ದಿನಕ್ಕೆ 300 ರಿಂದ 450 ಜನರು ಕ್ಯಾಂಟೀನ್‌ಗೆ ಆಗಮಿಸುತ್ತಿದ್ದರು. ಈಗ ಕೆಲವು ಕ್ಯಾಂಟೀನ್‌ಗಳಿಗೆ 50 ರಿಂದ 100 ಜನರು ಆಗಮಿಸುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್ ಕಡೆ ಗಮನಹರಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರಇಂದಿರಾ ಕ್ಯಾಂಟೀನ್ ಕಡೆ ಗಮನಹರಿಸಿ ಸಿಎಂಗೆ ಸಿದ್ದರಾಮಯ್ಯ ಪತ್ರ

ವರದಿಗಳ ಪ್ರಕಾರ ಕರ್ನಾಟಕ ಸರ್ಕಾರ ಕ್ಯಾಂಟೀನ್‌ಗಳಿಗೆ ಅನುದಾನ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಈಗ ಕ್ಯಾಂಟೀನ್ ನಿರ್ವಹಣೆ ಸಂಪೂರ್ಣ ಹೊಣೆ ಬಿಬಿಎಂಪಿಯ ಮೇಲೆ ಬಿದ್ದಿದೆ. ಸುಮಾರು 70 ಕೋಟಿ ಬಿಲ್ ಬಾಕಿ ಉಳಿದಿದೆ ಎಂದು ಅಂದಾಜಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ ಕುಸಿತಗೊಂಡಿದೆ. ಇದರಿಂದಾಗಿ ಜನರು ಕ್ಯಾಂಟೀನ್‌ಗೆ ಭೇಟಿ ನೀಡುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೋಟ್ಯಾಂತರ ರೂಪಾಯಿ ಬಿಲ್ ಪಾವತಿಯಾಗದೇ ಉಳಿದಿದ್ದು, ಟೆಂಡರ್ ಪಡೆದವರು ಕ್ಯಾಂಟೀನ್ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ.

ಬಿಬಿಎಂಪಿಗೆ ಬಿಲ್; ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡುವವರ ಸಂಖ್ಯೆ ಕುಸಿತವಾಗಿದ್ದರೂ ಬಿಬಿಎಂಪಿಗೆ ಪ್ರತಿ ತಿಂಗಳು ಬಿಲ್ ಬರುತ್ತಲೇ ಇದೆ. ಪ್ರತಿ ಕ್ಯಾಂಟೀನ್ ನಿರ್ವಹಣೆ ಮಾಡಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿದೆ. ಇವರು ನೀಡುವ ವರದಿ ಅನ್ವಯ ಬಿಲ್ ಬಿಬಿಎಂಪಿಗೆ ಹೋಗುತ್ತದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದು, "ಕಳೆದ ವಾರ ನಾವು ಇಂದಿರಾ ಕ್ಯಾಂಟೀನ್ ಕುರಿತು ಸಭೆ ನಡೆಸಿದೆವು. ಇದೇ ಮಾದರಿ ಮುಂದುವರೆಸಬೇಕೆ? ಅಥವ ಬದಲಾವಣೆ ಮಾಡಬೇಕೆ? ಎಂದು ಚರ್ಚೆ ನಡೆಸಿದೆವು" ಎಂದು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದು, "ಕಳೆದ ವಾರ ನಾವು ಇಂದಿರಾ ಕ್ಯಾಂಟೀನ್ ಕುರಿತು ಸಭೆ ನಡೆಸಿದೆವು. ಇದೇ ಮಾದರಿ ಮುಂದುವರೆಸಬೇಕೆ? ಅಥವ ಬದಲಾವಣೆ ಮಾಡಬೇಕೆ? ಎಂದು ಚರ್ಚೆ ನಡೆಸಿದೆವು" ಎಂದು ಹೇಳಿದರು.

"ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಕಾಪಾಡಲು ಉತ್ತಮ ಗುಣಮಟ್ಟದ ಆಹಾರ ತಯಾರು ಮಾಡುವ ಸಂಸ್ಥೆಗಳಿಗೆ ಮಾತ್ರ ಆಹಾರ ತಯಾರಿಕೆ ಟೆಂಡರ್ ನೀಡಲು ತೀರ್ಮಾನಿಸಲಾಗಿದೆ" ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಒಂದಲ್ಲ ಒಂದು ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಸುದ್ದಿಯಲ್ಲಿದೆ. ಮೊದಲು ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಸರ್ಕಾರ ಹೆಸರು ಬದಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ ಕಡೆ ಸರ್ಕಾರ ಗಮನಹರಿಸಬೇಕು. ಕ್ಯಾಂಟೀನ್ ನಿರ್ವಹಣೆಗೆ ಬೇಕಾದ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಸಹ ಬರೆದಿದ್ದರು.

ಈ ಹಿಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಒದಗಿಸಲಾಗುತ್ತಿತ್ತು. ಶಾಸಕರು, ಸಚಿವರು, ಅಧಿಕಾರಿಗಳು ಆಗಾಗ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದರು. ಈಗ ಯಾವುದೇ ಪರಿಶೀಲನೆ ಇಲ್ಲವಾಗಿದೆ ಎಂದು ಬಿಬಿಎಂಪಿಯ ಮಾಜಿ ಸದಸ್ಯರೊಬ್ಬರು ಹೇಳಿದರು.

Recommended Video

ಹಿಜಾಬ್ ವಿಚಾರವಾಗಿ ಹೈಕೋರ್ಟ್ ಆದೇಶದ ಬಗ್ಗೆ Basavaraj Bommai ಪ್ರತಿಕ್ರಿಯೆ | Oneindia Kannada

English summary
BBMP decided to review Indira canteen models after dip in visitors. 174 fixed and 24 mobile canteens run by BBMP in Bengaluru City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X