ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2019ರಲ್ಲಿ ಬಿಜೆಪಿಗೆ ಸೋಲುಣಿಸಲು ಕೈ-ತೆನೆ ಜಂಟಿ ಹೋರಾಟ

|
Google Oneindia Kannada News

ಬೆಂಗಳೂರು, ನವೆಂಬರ್ 07: ಕರ್ನಾಟಕದ ಉಪ ಚುನಾವಣೆಯಲ್ಲಿ 4-1ರಲ್ಲಿ ಗೆಲುವು ಸಾಧಿಸಿ ಸಂಭ್ರಮದಿಂದ ಕಾಂಗ್ರೆಸ್ -ಜೆಡಿಎಸ್ ಬೀಗುತ್ತಿದೆ. ಇದೇ ಖುಷಿಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲೂ ಮೈತ್ರಿಕೂಟದಿಂದ ಒಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜಾತ್ಯಾತೀತ ಶಕ್ತಿಗೆ ಬಲ ತುಂಬಲು, ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಕಾಂಗ್ರೆಸ್- ಜೆಡಿಎಸ್ ಒಟ್ಟಿಗೆ ಮುಂಬರುವ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದರು.

ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ನೀತಿಗಳ ಕಾರಣದಿಂದಾಗಿ ಎರಡು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶ: ಬಹಿರಂಗವಾದ ಅಚ್ಚರಿ ಮಾಹಿತಿ ಉಪಚುನಾವಣೆ ಫಲಿತಾಂಶ: ಬಹಿರಂಗವಾದ ಅಚ್ಚರಿ ಮಾಹಿತಿ

ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕುಮಾರಸ್ವಾಮಿ, ಜನರು ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಜೊತೆಯಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

Dinesh Gundu Rao say JD(S), Congress will fight Lok Sabha 2019 polls together

ಈ ಬಾರಿಯಂತೆ ಮುಂದಿನ ಚುನಾವಣೆಯಲ್ಲೂ ನಾವು ಜೊತೆಯಾಗಿ ತಂತ್ರಗಾರಿಕೆ ರೂಪಿಸಿ ಲೋಕಸಭಾ ಚುನಾವಣೆಯಲ್ಲಿ
ಸ್ಪರ್ಧಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ನಾವು ಹಲವಾರು ಜನಪರ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವು ಜಾರಿಯ ಹಂತದಲ್ಲಿವೆ.

ವಿವಾದಿತ ವ್ಯಕ್ತಿಗಳೇ ಯಶಸ್ಸು ಪಡೆಯುವುದು: ಡಿ.ಕೆ. ಶಿವಕುಮಾರ್ ವಿವಾದಿತ ವ್ಯಕ್ತಿಗಳೇ ಯಶಸ್ಸು ಪಡೆಯುವುದು: ಡಿ.ಕೆ. ಶಿವಕುಮಾರ್

ಅವುಗಳ ಲಾಭ ಇನ್ನೂ ಜನರಿಗೆ ತಲುಪಿಲ್ಲ. ಆದರೂ, ನಮ್ಮ ನೀತಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಬೆಳೆ ಸಾಲ ಮನ್ನಾ ಹಾಗೂ ಬೀದಿ ವ್ಯಾಪಾರಿಗಳಿಗೆ ಹಣಕಾಸು ನೆರವು ನೀಡುವ ಕ್ರಮಗಳನ್ನು ಬೆಂಬಲಿಸಿದ್ದಾರೆ ಎಂದವರು ಹೇಳಿದ್ದಾರೆ.

ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್, ಉಪ ಚುನಾವಣೆಯಲ್ಲಿ ದೊರೆತಿರುವ ದೊಡ ಗೆಲುವು ಮೈತ್ರಿ ಸರ್ಕಾರವನ್ನು ಜನರು ಬೆಂಬಲಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಬಿಜೆಪಿಯ ವಿಭಜನಾತ್ಮಕ ರಾಜಕೀಯ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಜನರು ತಿರಸ್ಕರಿಸಿದ್ದಾರೆ. ನಾವು 2019ರ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

ಮಂಡ್ಯ ಉಪಚುನಾವಣೆ: ಸೋಲಿನಲ್ಲೂ ಬಿಜೆಪಿಯ ಸಾಧನೆ ಮುಂದಿನ ಚುನಾವಣೆಗೆ ದಿಕ್ಸೂಚಿ? ಮಂಡ್ಯ ಉಪಚುನಾವಣೆ: ಸೋಲಿನಲ್ಲೂ ಬಿಜೆಪಿಯ ಸಾಧನೆ ಮುಂದಿನ ಚುನಾವಣೆಗೆ ದಿಕ್ಸೂಚಿ?

ಬಿಜೆಪಿ ಪ್ರತಿಪಕ್ಷವಾಗಿ ತನ್ನ ಹೊಣೆಗಾರಿಕೆಯನ್ನು ಮರೆತಿದೆ. ಅಧಿಕಾರದಾಹಿಯಾಗಿರುವ ಬಿಜೆಪಿ, ಪ್ರತಿಪಕ್ಷವಾಗಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿಲ್ಲ. ಅವರು ನೈತಿಕತೆಯನ್ನು ಮರೆತಿರುವುದೇ ನಾಲ್ಕು ಕ್ಷೇತ್ರಗಳಲ್ಲಿ ಸೋಲಲು ಹಾಗೂ ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಗಿದೆ ಎಂದವರು ಹೇಳಿದ್ದಾರೆ.

ಕರ್ನಾಟಕ ಉಪ ಚುನಾವಣೆ: ಯಾವ ಪಕ್ಷದ ಮತ ಗಳಿಕೆ ಪ್ರಮಾಣ ಎಷ್ಟು? ಕರ್ನಾಟಕ ಉಪ ಚುನಾವಣೆ: ಯಾವ ಪಕ್ಷದ ಮತ ಗಳಿಕೆ ಪ್ರಮಾಣ ಎಷ್ಟು?

ತಮ್ಮ ಪತಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ನಾಯಕರ ಅವಿರತ ಶ್ರಮದಿಂದಾಗಿ ವಿಧಾನಸಭೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

English summary
KPCC president Dinesh Gundurao said Congress and JD(S) will fight Lok Sabha Elections 2019 together. By poll results are victory against communal forces like BJP he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X