ಬಿರ್ಯಾನಿ ಪ್ರಿಯರಿಗೆ ಸುದ್ದಿ, ಉತ್ತರಹಳ್ಳಿಯಲ್ಲಿ ದಿಂಡಿಗಲ್ ತಲಪ್ಪಾಕಟ್ಟಿ
ಬೆಂಗಳೂರು, ಏಪ್ರಿಲ್ 2: ತಮಿಳುನಾಡಿನಲ್ಲಿ ದಿಂಡಿಗಲ್ ತಲಪ್ಪಾಕಟ್ಟಿ ಪ್ರಖ್ಯಾತ ಹೆಸರಾಗಿದೆ ಮತ್ತು ಈಗ ಅವರು ಉತ್ತರಹಳ್ಳಿಯಲ್ಲಿ ತಮ್ಮ ಮತ್ತೊಂದು ಮಳಿಗೆಯನ್ನು ತೆರೆಯುವ ಮೂಲಕ ತಮ್ಮ ಬಿರಿಯಾನಿ ಪ್ರೀತಿಯನ್ನು ಬೆಂಗಳೂರಿನಲ್ಲಿ ವಿಸ್ತರಿಸಿದ್ದಾರೆ. ದಿಂಡಿಗಲ್ ತಲಪ್ಪಾಕಟ್ಟಿ ಈಗಾಗಲೇ ಜಾಗತಿಕವಾಗಿ 7 ದೇಶಗಳಲ್ಲಿ ವ್ಯಾಪ್ತಿ ಹೊಂದಿದೆ ಮತ್ತು 80+ ಮಳಿಗೆಗಳನ್ನು ಹೊಂದಿದೆ.
ದಿಂಡಿಗಲ್ ತಲಪ್ಪಾಕಟ್ಟಿಯ ಚೀಫ್ ಬ್ಯುಸಿನೆಸ್ ಆಫೀಸರ್ ಅರವಿಂದ್ ಅಯ್ಯರ್, "ನಾವು ದಿಂಡಿಗಲ್ ತಲಪ್ಪಾಕಟ್ಟಿ("ಡಿಟಿ")ಯಲ್ಲಿ ವಿಶಿಷ್ಟ, ಅಧಿಕೃತ, ಸ್ಥಿರ ಮತ್ತು ಗುಣಮಟ್ಟದ ಆಹಾರ ಪೂರೈಸುವ 60 ವರ್ಷಗಳ ಪರಂಪರೆಯನ್ನು ಹೊಂದಿದ್ದೇವೆ. ನಾವು ಬಿರಿಯಾನಿ ಅಡುಗೆಯ ವಿಶಿಷ್ಟ ಶೈಲಿಗೆ ಹೆಮ್ಮೆ ಪಡುತ್ತೇವೆ ಅದು ತಲೆಮಾರುಗಳಿಂದ ವರ್ಗಾವಣೆಯಾಗಿ ಬಂದಿದೆ. ಗುಣಮಟ್ಟ ಮತ್ತು ರುಚಿ ಸದಾ ನಮಗೆ ಬಹುಮುಖ್ಯ ಆದ್ಯತೆಯಾಗಿವೆ. ಉನ್ನತ ಗುಣಮಟ್ಟದ ಸೀರಾಗಾ ಸಾಂಬಾ ಅಕ್ಕಿ, ಸಾಂಪ್ರದಾಯಿಕ ಮಸಾಲೆಗಳ ವಿಶೇಷ ಸಂಯೋಜನೆ, ಕೈಗಳಲ್ಲಿ ಅರೆಯಲಾದ ಮಸಾಲೆಗಳು ಮತ್ತು ವಿಭಿನ್ನ ರೀತಿಯ ಅಡುಗೆ ಶೈಲಿಯು ನಮ್ಮ ಬಿರಿಯಾನಿಯನ್ನು ವಿಶಿಷ್ಟ ಮತ್ತು ರುಚಿಕರವಾಗಿಸುತ್ತದೆ" ಎಂದರು.
''6 ರಾಷ್ಟ್ರಗಳಲ್ಲಿ 80+ ಶಾಖೆಗಳನ್ನು ಹೊಂದಿರುವ ಡಿಟಿ ಅತ್ಯಂತ ಪ್ರೀತಿಪಾತ್ರ ಭಾರತೀಯ ರೆಸ್ಟೋರೆಂಟ್ ಬ್ರಾಂಡ್‍ಗಳಲ್ಲಿ ಒಂದಾಗಿದೆ. ನಾವು ಎಷ್ಟು ಸಾಧ್ಯವೋ ಅಷ್ಟು ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರಿಗೆ ಮಹತ್ತರ ಹಾಗೂ ವಿಶಿಷ್ಟ ದಕ್ಷಿಣದ ಭಾರತೀಯ ಡೈನಿಂಗ್ ಅನುಭವ ಒದಗಿಸುತ್ತಿದ್ದೇವೆ" ಎಂದರು.

ಸದಾ ಗ್ರಾಹಕರಿಗೆ ಸಂತೃಪ್ತಿ ನೀಡುವ ದಿಂಡಿಗಲ್ ತಲಪ್ಪಾಕಟ್ಟಿ ಅವರ ವಿಶಿಷ್ಟ ತಿನಿಸುಗಳಾದ ತಲಪ್ಪಾಕಟ್ಟಿ ಮಟನ್ ಬಿರಿಯಾನಿ, ತಲಪ್ಪಾಕಟ್ಟಿ ಗನ್ ಫೈರ್ ಚಿಕನ್, ತಲಪ್ಪಾಕಟ್ಟಿ ಚಿಕನ್ ಬಿರಿಯಾನಿ, ಜಿಗರ್ಥಾಂಡಾ ಇತ್ಯಾದಿ ಒಳಗೊಂಡಿವೆ.

ಕಳೆದ 60 ವರ್ಷಗಳಿಂದ ಈ ಪ್ರಖ್ಯಾತ ಬಿರಿಯಾನಿ ಕಾಲದ ಪರೀಕ್ಷೆಯನ್ನು ಮೀರಿ ನಿಂತಿದೆ. 1957ರಲ್ಲಿ ದಿಂಡಿಗಲ್‍ನಲ್ಲಿ ನಾಗಸ್ವಾಮಿ ನಾಯ್ಡು, ಅವರಿಂದ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಈಗ ಖ್ಯಾತಿ ಪಡೆದಿರುವ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಹೋಟೆಲ್ ಆಗಿ ಪರಿವರ್ತನೆಯಾಗಿದೆ.

ಉತ್ತರಹಳ್ಳಿಯಲ್ಲಿ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಮನೆಯಲ್ಲಿ ಸಿದ್ಧಪಡಿಸಿದ ಅಳವಡಿಕೆಗಳೊಂದಿಗೆ ಬೆರೆಸಿ ಮತ್ತು ಅದರ ಶ್ರೀಮಂತ ಪರಂಪರೆಯೊಂದಿಗೆ ಅತ್ಯುತ್ತಮವಾದ ಸಂಯೋಜನೆಯನ್ನು ಪಡೆಯಬಹುದು. ದಿಂಡಿಗಲ್ ತಲಪ್ಪಾಕಟ್ಟಿ ಈಗ ಉತ್ತರಹಳ್ಳಿಯಲ್ಲಿ ಸೇವೆ ಒದಗಿಸಲು ಸಜ್ಜಾಗಿದೆ.












Click it and Unblock the Notifications