ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತರ ಬೀದಿ ಜಗಳ ನಿಲ್ಲಲಿ! (ಹೀಗೊಂದು ನಿಷ್ಪಕ್ಷಪಾತ ನಿಲುವು)

ಲಿಂಗಾಯತ ಸಮಾಜದ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಡುವವರು ಸಂಯಮದಿಂದ ವರ್ತಿಸಲಿ. 'ಬಸವ ಜ್ಯೋತಿ' ಮಾಸಿಕದ ಸಂಪಾದಕಿ ಕವನ ಅವರ ಅಭಿಪ್ರಾಯ.

|
Google Oneindia Kannada News

ವೀರಶೈವರಿಂದ ಬೇರ್ಪಟ್ಟು ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಲಿಂಗಾಯತರು, ಪ್ರತ್ಯೇಕ ಧರ್ಮವಾದರೆ ವೀರಶೈವ-ಲಿಂಗಾಯತ ಎಂದೇ ಪ್ರತ್ಯೇಕವಾಗಲಿ ಎಂದು ವೀರಶೈವರು ಪರಸ್ಪರ ಕಿತ್ತಾಡಿಕೊಂಡು ಮಾಡುತ್ತಿರುವ ಹಾದಿ ರಂಪ, ಬೀದಿ ಜಗಳಗಳಿಗೆ ಇನ್ನಾದರೂ ತೆರೆಬಿದ್ದು, ಎಲ್ಲರೂ ಒಂದಾಗಿ, ಪ್ರತ್ಯೇಕ ಧರ್ಮಕ್ಕಾಗಿ ಶಾಂತಿಯುತ ಹೋರಾಟ ಮಾಡಲಿ ಎಂದು 'ಬಸವ ಜ್ಯೋತಿ' ಮಾಸಿಕದ ಮುಖ್ಯ ಸಂಪಾದಕರಾದ ಕವನಾ ಅವರು ಹಾರೈಸಿದ್ದಾರೆ.

Recommended Video

Bengaluru : Akhila Bharata Veerashaiva Mahasabha crucial meeting today

ವೀರಶೈವ-ಲಿಂಗಾಯತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ: ಖಂಡ್ರೆವೀರಶೈವ-ಲಿಂಗಾಯತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ: ಖಂಡ್ರೆ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಅವರನ್ನು ಸಂದರ್ಶಿಸಿದ 'ಒನ್ ಇಂಡಿಯಾ'ದೊಂದಿಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅತ್ತ, ಪಂಚಪೀಠದವರ ಅನುಯಾಯಿಯಂತೆ ಮಾತನಾಡದೇ, ಇತ್ತ ಪ್ರತ್ಯೇಕ ಧರ್ಮಕ್ಕೆ ಹೋರಾಡುತ್ತಿರುವ ಲಿಂಗಾಯತ ಮಠಗಳ, ಧರ್ಮಗುರುಗಳ ಪರವಾಗಿಯೂ ಹೇಳದೆ ಒಂದು ರೀತಿಯ 'ತಟಸ್ಥ' ಮಾತುಗಳು ಇಂದಿನ ಲಿಂಗಾಯತ ಯುವ ಸಮೂಹ ತನ್ನ ಸಮಾಜದ ಹಿರಿಯರಿಂದ ಏನನ್ನು ಅಪೇಕ್ಷಿಸುತ್ತಿದೆ ಎಂಬುದನ್ನು ವಿವರಿಸುತ್ತದೆ.

Dignity needed among Lingayath Leaders those demanding for separate religious status

- ಪಂಚಪೀಠ ಹಾಗೂ ಲಿಂಗಾಯತ ಧರ್ಮಗಳ ನಡುವಿನ ಒಡಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಒಡಕು ಮೂಡಲು ಪ್ರಮುಖ ಕಾರಣ ಪಂಚಪೀಠ ಮಠಗಳ ಸ್ವಾಮೀಜಿಗಳಲ್ಲಿದ್ದ ಔನ್ನತ್ಯದ ಭಾವನೆ. ಯಾವುದೇ ಸಭೆ, ಸಮಾರಂಭಗಳು ನಡೆಯಲಿ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿ ತಮ್ಮನ್ನು ವಿಐಪಿಗಳಂತೆ ಎಲ್ಲರೂ ನೋಡಿಕೊಳ್ಳಬೇಕು. ಎಲ್ಲರಿಗಿಂತ ಒಂದೆರಡು ಅಡಿ ಎತ್ತರದಲ್ಲೇ ಕುರ್ಚಿ ಹಾಕಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿಗೆ ತಂದಿದ್ದೇ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ. ಇದೇ, ಲಿಂಗಾಯತರು ಪಂಚಪೀಠಗಳ ವಿರುದ್ಧ ಕೆರಳಲು ಪ್ರಮುಖ ಕಾರಣ ಎಂಬುದು ನನ್ನ ಅಭಿಪ್ರಾಯ.

- ಪಂಚಪೀಠಗಳ ಬಗ್ಗೆ ನಿಮಗೆ ಆಕ್ಷೇಪಣೆಗಳಿವೆಯೇ?
ನಾನು ಪಂಚಪೀಠಗಳ ಪರವಾಗಿಯೂ ಮಾತನಾಡುವುದಿಲ್ಲ, ಲಿಂಗಾಯತ ಮಠಗಳ ಬಗ್ಗೆಯೂ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ನಾನು ನ್ಯೂಟ್ರಲ್. ಆದರೆ, ಇಂದಿನ ವಾಸ್ತವತೆಯನ್ನು ಮನದಲ್ಲಿಟ್ಟುಕೊಂಡು ಮಾತನಾಡುತ್ತೇನೆ. ಬಸವಣ್ಣ ಹೇಳಿದ್ದೇನು, ಇವರು ಮಾಡಿದ್ದೇನು ಎಂಬುದನ್ನು ಗಮನಿಸಿದಾಗ ಪಂಚಪೀಠಗಳು ಹಾಗೂ ಅದರ ಅಧೀನದಲ್ಲಿರುವ ಮಠಗಳಲ್ಲಿ ಅನೇಕ ಲೋಪದೋಷಗಳು ಎದ್ದು ಕಾಣುತ್ತವೆ. ಸ್ತ್ರೀಯರನ್ನು ಸಮಾನವಾಗಿ ನಡೆಸಿಕೊಳ್ಳದಿರುವುದು, ಸಾಧ್ವಿಗಳಾಗ ಬಯಸುವ ಸ್ತ್ರೀಯರಿಗೆ ಆ ದಾರಿಯಲ್ಲಿ ಬೆಳೆಯಲು ಅವಕಾಶ ನೀಡದಿಲ್ಲದಿರುವುದು, ಗುರು-ಶಿಷ್ಯರೆಂಬ ಕಂದಕ ಸೃಷ್ಟಿಸಿರುವುದು, ತಾವು ಹೊಂದಿರುವ ಪೀಠಗಳ ಮುಖ್ಯಸ್ಥರ ಸ್ಥಾನಗಳಿಗೆ ತಮ್ಮ ನಂತರ ತಮ್ಮ ಸಂಬಂಧಿಗಳನ್ನೇ ತಂದು ಕೂರಿಸುವುದು... ಇತ್ಯಾದಿಗಳನ್ನು ನಾನು ಗಮನಿಸಿದ್ದೇನೆ. ಇದು ನಿಜಕ್ಕೂ ಬೇಸರ ತರಿಸುವ ವಿಚಾರ.

ಲಿಂಗಾಯತ ಧರ್ಮಕ್ಕೆ ಬೆಳಗಾವಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರಲಿಂಗಾಯತ ಧರ್ಮಕ್ಕೆ ಬೆಳಗಾವಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ

ಇಂಥ ಪರಿಸ್ಥಿತಿ ಲಿಂಗಯತ ಮಠಗಳಲ್ಲಿಲ್ಲ. ಅಲ್ಲಿ ಸ್ತ್ರೀ ಸಮಾನತೆ ಇದೆ. ಅಲ್ಲಿ ಸ್ತ್ರೀ ಸಾಧಕರಿಗೆ ಬೆಳೆಯಲು ಅವಕಾಶಗಳಿವೆ. ಬಸವ ತತ್ವಗಳಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಾತೆ ಮಹದೇವಿಯಂಥವರು ಪೀಠಾಧ್ಯಕ್ಷರಾಗಲು ಅವಕಾಶವಿದೆ. ಯಾವುದೇ ಬೇಧ-ಭಾವವಿಲ್ಲ. ಬಸವಣ್ಣ ಹೇಳಿದ್ದೂ ಇದನ್ನೇ. ಇದನ್ನು ಲಿಂಗಾಯತ ಮಠಗಳು ಪಾಲಿಸುತ್ತಿರುವಾಗ ಪಂಚಪೀಠಗಳು ಪಾಲಿಸದೇ ಇರುವುದು ಸಹಜವಾಗಿಯೇ ಬೇಸರ ತರಿಸುತ್ತದೆ.

Dignity needed among Lingayath Leaders those demanding for separate religious status

- ನೀವು ಹೀಗೆ ಲಿಂಗಾಯತರನ್ನು ಹೊಗಳಿದರೆ ನಿಮ್ಮನ್ನು ಬ್ರಾಂಡ್ ಮಾಡಲಾಗುತ್ತದಲ್ಲವೇ?
ನಾನು ಅಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ನಾನು ಪಂಚಪೀಠಗಳ ಪರವಾಗಿಯೂ ಇಲ್ಲ, ಲಿಂಗಾಯತರ ಪರವಾಗಿಯೂ ಇಲ್ಲ. ಆದರೆ, ನಾನು ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವವಳು.

ಲಿಂಗಾಯತಕ್ಕೆ ಧರ್ಮಕ್ಕಾಗಿ ಆಗಸ್ಟ್ 22ರಂದು 'ಬೆಳಗಾವಿ ಚಲೋ' ಮಹಾರ‍್ಯಾಲಿಲಿಂಗಾಯತಕ್ಕೆ ಧರ್ಮಕ್ಕಾಗಿ ಆಗಸ್ಟ್ 22ರಂದು 'ಬೆಳಗಾವಿ ಚಲೋ' ಮಹಾರ‍್ಯಾಲಿ

- ಪ್ರತ್ಯೇಕ ಧರ್ಮದ ಬಗ್ಗೆ ನಿಮ್ಮ ನಿಲುವೇನು?
ನಾನು ಒಬ್ಬ ಸಮಾಜ ಸೇವಕಿಯಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಸಾವಿರಾರು ಲಿಂಗಾಯತರ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ. ಲಿಂಗಾಯತ ಸಮಾಜದ ಹಲವಾರು ಜನರು ತುಂಬಾ ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳಲ್ಲಿ ತೊಳಲಾಡುತ್ತಿದ್ದಾರೆ. ಅವರ ಮಕ್ಕಳು ಓದಲು ಹಣವಿಲ್ಲದೆ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇಂಥವರಿಗೆ ಸರ್ಕಾರದಿಂದ ನೆರವು ಸಿಗಬೇಕಾದರೆ ಲಿಂಗಾಯತ ಸಮಾಜಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಲಿ ಎಂದೆನ್ನಿಸುತ್ತದೆ.

- ಒಂದು ತಟಸ್ಥ ಸ್ಥಾನದಲ್ಲಿ ನಿಂತಿರುವ ನೀವು ಈ ಸಂದರ್ಭದಲ್ಲಿ ಏನು ಹೇಳಲಿಚ್ಛಿಸುತ್ತೀರಿ?
ನಾನು ಹೇಳುವುದು ಇಷ್ಟೆ. ಪಂಚಪೀಠದವರಾಗಲೀ, ಲಿಂಗಾಯತ ಮಠಗಳ ಪೀಠಾಧ್ಯಕ್ಷರಾಗಲೀ ಮೊದಲು ಹಾದಿ ರಂಪ, ಬೀದಿ ಜಗಳ ಮಾಡುವುದನ್ನು ಬಿಡಬೇಕು. ಮಾಧ್ಯಮಗಳ ಮುಂದೆ ಸಡಿಲವಾದ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ಉದಾಹರಣೆಗೆ, ರಂಭಾಪುರಿ ಕ್ಷೇತ್ರದ ಗುರುಗಳು ಮಾತೆ ಮಹದೇವಿಯವರ ಬಗ್ಗೆ ಆಕ್ಷೇಪಾರ್ಹ ನುಡಿಗಳನ್ನು ಆಡಿದರು. ಅದರ ಅವಶ್ಯಕತೆ ಏನಿತ್ತು? ಹೀಗೆ, ಇತರರ ವೈಯಕ್ತಿಕ ವಿಚಾರಗಳನ್ನು ಉಲ್ಲೇಖಿಸಿ ಅವರನ್ನು ತೇಜೋವಧೆ ಮಾಡುವ ಅಧಿಕಾರ ಯಾರಿಗೂ ಇಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿ ಟಿ ನರಸೀಪುರದಲ್ಲಿ ಪ್ರತಿಭಟನೆಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿ ಟಿ ನರಸೀಪುರದಲ್ಲಿ ಪ್ರತಿಭಟನೆ

ಹಾಗೆಯೇ, ಮಾತೆ ಮಹದೇವಿವರೂ ಕೊಂಚ ತಾಳ್ಮೆ ವಹಿಸಿ ಸಮಯೋಚಿತ ಹೆಜ್ಜೆಗಳನ್ನಿಡಬೇಕು. ಮಾತೆತ್ತಿದರೆ ಮಾಧ್ಯಮಗಳ ಮುಂದೆ ಬಂದು ನಿಲ್ಲುವುದನ್ನು ಬಿಡಬೇಕು. ಮಾತೆ ಮಹದೇವಿ ಮಾತ್ರವಲ್ಲ ಎಲ್ಲಾ ಲಿಂಗಾಯತ ಮಠಾಧೀಶರೂ ಈ ಬಗ್ಗೆ ಕಾಳಜಿ ವಹಿಸಿ, ಪ್ರತ್ಯೇಕ ಧರ್ಮದ ವಿಚಾರಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ತಪ್ಪಿಸಬೇಕು.

English summary
There should be some kind of dignity among all Lingayth Swamijis who are demanding separate religious status for the community, says Basava Jyothi's editor-in-chief Kavana H.B. in an interview to One India Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X