ಸ್ನೇಹಿತನ ಮೇಲೆ ಹಲ್ಲೆ: ಫ್ಯಾನ್ಸ್‌ವಾರ್ ಬಗ್ಗೆ ಧ್ರುವ ಸರ್ಜಾ ಸ್ಪಷ್ಟನೆ
ನಟ ಧ್ರುವ ಸರ್ಜಾ ಅವರ ಸ್ನೇಹಿತ, ಜಿಮ್ ಟ್ರೈನರ್ ಆಗಿರುವ ಪ್ರಶಾಂತ್ ಅವರ ಮೇಲಿನ ಹಲ್ಲೆ ಪ್ರಕರಣ ಈಗ ಸಾಕಷ್ಟು ಸುದ್ದಿಯಾಗಿದೆ. ಪ್ರಶಾಂತ್ ಅವರ ಮೇಲಿನ ಹಲ್ಲೆ ಬಗ್ಗೆ ಹಲವು ಊಹಾಪೋಹಗಳು ವ್ಯಕ್ತವಾದ ಬೆನ್ನಲ್ಲೇ ಧ್ರುವಸರ್ಜಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರಶಾಂತ್ ಧ್ರುವ ಸರ್ಜಾ ಅವರ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಲ್ಲೆ ಘಟನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಧ್ರುವ ಸರ್ಜಾ, "ಇದು ಪ್ರಶಾಂತ್ ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರು ನನ್ನ ಸ್ನೇಹೊತ ಮತ್ತು ಟ್ರೇನರ್. ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ" ಎಂದು ಹೇಳಿದರು.

ಈ ಘಟನೆಗೆ ಫ್ಯಾನ್ ವಾರ್ ಏನಾದರೂ ಕಾರಣವಾ ಎನ್ನುವ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದು, ಸುಮ್ಮನೆ ಯಾವ ಸುದ್ದಿಗೂ ಪ್ರಚಾರ ಕೊಡಬೇಡಿ. ಯಾವ ಅಭಿಮಾನಿಗಳು ಕೂಡ ಅಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಇದು ಪ್ರಶಾಂತ್ ಅವರಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಇದಕ್ಕೂ ಫ್ಯಾನ್ ವಾರ್ ಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ತನಿಖೆ ಬಳಿಕ ನಿಜ ಏನೆಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಪ್ರಶಾಂತ್ ಮೇಲೆ ಮಚ್ಚಿನಿಂದ ಹಲ್ಲೆ
ಪ್ರಶಾಂತ್ ಕಳೆದ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರು ಯುವಕರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನಗರದ ಕೆಆರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಬನಶಂಕರಿ ಪೊಲೀಸರು ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಐಪಿಸಿ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಸದ್ಯ ಕೆಆರ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications