ನೈಸ್ ವಿರುದ್ಧ ಕ್ರಮ:ಸರ್ಕಾರಕ್ಕೆ ಸೂಚನೆ ಕೊಡುವೆ ಎಂದ ದೇವೇಗೌಡ

ಬೆಂಗಳೂರು, ನವೆಂಬರ್ 23: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಹೊಸಕೆರೆಹಳ್ಳಿ ನೈಸ್ ರಸ್ತೆ ಸಮೀಪದ ಪ್ರಮೋದ್ ಬಡಾವಣೆ ನಿವಾಸಿಗಳ ತೊಂದರೆ ಆಲಿಸಿದರು.

ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ನೈಸ್ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ ನೀಡುವುದಾಗಿ ಭರವಸೆ ನೀಡಿದರು.ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ರಸ್ತೆ ಹಾಗೂ ನೈಸ್ ಮಾಲಿಕರು ಕೊಡುತ್ತಿರುವ ಕಿರಿಕಿರಿ ಬಗ್ಗೆ ಮಾಜಿ ಪ್ರಧಾನಿ ಬಳಿ ದೂರು ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡರು ನೈಸ್ ವಿರುದ್ಧದ ಹೋರಾಟ ಮಾಡಿ ಬಹಳ ದಿನವಾಗಿತ್ತು, ವಿಧಾನಸಭೆಯಲ್ಲಿ ಈ ಬಗ್ಗೆ ಸುಧೀರ್ಘ ಚರ್ಚೆ ಮಾಡಲು ಅವಕಾಶ ಕೋರಿದ್ದೆವು, ಇದರ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿದೆ ಎಂದರು.

Devegowda assures action will be taken according to house committee on NICE

ಪ್ರಮೋದ್ ಬಡಾವಣೆಯಲ್ಲಿ 17 ಎಕರೆ ಮತ್ತು ಹೊಸಕೆರೆ ಹಳ್ಳಿಯಲ್ಲಿ ಐವತ್ತು ಎಕರೆ ಜಮೀನು ನೈಸ್‌ ರಸ್ತೆಗಾಗಿ ಸ್ವಾಧೀನ ಮಾಡಲಾಗಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ವಾಧೀನಗೊಂಡ ಭೂಮಿಗೆ ಪರ್ಯಾಯ ಜಾಗ ನೀಡಲು ಬರುವುದಿಲ್ಲ ಎಂದಿದ್ದರು.

ಯಾವ ಕಾಲದಲ್ಲಿ ಏನೇನು ಅಕ್ರಮ ನಡೆದಿದೆ ಎಂದು ನನಗೆ ತಿಳಿದಿದೆ. ಸರ್ಕಾರ ಇದರ ಬಗ್ಗೆ ವಿಳಂಬ ಮಾಡಿದೆ. ಸದನಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ. ಮೈತ್ರಿ ಸರ್ಕಾರ ಸದ್ಯದಲ್ಲೇ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+