ಜೆಡಿಎಸ್ ಶಾಸಕರಿಗೆ ರಾಜಕೀಯದ ಪಾಠ ಮಾಡಿದ ದೇವೇಗೌಡ
Recommended Video

ಜೆಡಿಎಸ್ ಶಾಸಕರಿಗೆ ರಾಜಕೀಯ ಪಾಠ ಮಾಡಿದ ಎಚ್ ಡಿ ದೇವೇಗೌಡ | Oneindia Kannada
ಬೆಂಗಳೂರು, ಮೇ 30: ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಇಂದು ಜೆಡಿಎಸ್ ಶಾಸಕರಿಗೆ ರಾಜಕೀಯದ ಪಾಠ ಹೇಳಿಕೊಟ್ಟರು.
ಇಂದು ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕರಿಗೆ ಹಲವು ರಾಜಕೀಯ ಕಿವಿಮಾತುಗಳನ್ನು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಶಾಸಕರ ನಿಲುವು, ವರ್ತನೆಗಳ ಬಗ್ಗೆ ವಿಷದವಾಗಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಉನ್ನತಿಗಾಗಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಕರೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಎಲ್ಲ ಶಾಸಕರೂ ಒಟ್ಟಿಗೆ ಇರಬೇಕು ಎಂದು ಹೇಳಿರುವ ಅವರು, ಶಾಸಕರ ವರ್ತತನೆ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಇರಬೇಕು ಎಂದಿದ್ದಾರೆ. ಸಭೆಯಲ್ಲಿ ಸಂಪುಟ ವಿಸ್ತರಣೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ.












Click it and Unblock the Notifications