Property: ಬೆಂಗಳೂರು ನಗರ & ಬೆಂ. ಗ್ರಾಮಾಂತರ ಈ ಭಾಗದಲ್ಲಿ ಭೂಮಿಗೆ ಭರ್ಜರಿ ಬೆಲೆ!

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಏಕಕಾಲಕ್ಕೆ ಗುಡ್‌ನ್ಯೂಸ್‌ ಕೊಡಲಾಗಿದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶ ದೇವನಹಳ್ಳಿಗೂ ಮೆಟ್ರೋ ವಿಸ್ತರಣೆ ಮಾಡುವುದಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಘೋಷಣೆ ಮಾಡಿದ್ದು. ಇದರಿಂದ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಈ ಭಾಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಂತಾಗಿದೆ. ನಮ್ಮ ಮೆಟ್ರೋ ಜಾಲವನ್ನು ಇದೀಗ ಬೆಂಗಳೂರು ನಗರದಿಂದ ದೇವನಹಳ್ಳಿಯ ವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಬೆಂಗಳೂರಿನ ಈಶಾನ್ಯ ಭಾಗ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರ್ತಿದೆ.

ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರದ ಹೊರ ವಲಯದಲ್ಲಿ ಭೂಮಿಗೆ ಈಗಲಿಂದಲೇ ಒಳ್ಳೆಯ ಬೆಲೆ ಬರುವುದಕ್ಕೆ ಶುರುವಾಗಿದೆ. ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ಮೊದಲಿನಿಂದ ಭೂಮಿಗೆ ಸಾಧಾರಣವಾದ ಬೆಲೆ ಇತ್ತು. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾಗದಲ್ಲಿ ನಿರ್ಮಾಣವಾಗುತ್ತಿದ್ದಂತೆಯೇ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿತ್ತು. ಇದಾದ ಮೇಲೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ನಡುವೆ ಇದ್ದ ಸಮಸ್ಯೆ ಎಂದರೆ ಟ್ರಾಫಿಕ್‌ ಹಾಗೂ ಕನೆಕ್ಟಿವಿಟಿಯದ್ದು ಇದೀಗ ಈ ಸಮಸ್ಯೆಗೂ ಪರಿಹಾರ ಸಿಕ್ಕಂತಾಗಿದೆ.

Devanahalli Metro Benefits Bengaluru and Bengaluru Rural Land in This Area is Worth Gold

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ನಡುವೆ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ (ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಏಕ ಹಾಗೂ ನೇರ ಸಾರಿಗೆ) ವ್ಯವಸ್ಥೆ. ಹೌದು ದೇವನಹಳ್ಳಿಯ ವಿಮಾನ ನಿಲ್ದಾಣ ನಿರ್ಮಾಣವಾದರೂ ಅಲ್ಲಿಗೆ ಇತ್ತೀಚಿನ ದಿನಗಳಲ್ಲಿ ತಲುಪುದಕ್ಕೆ ಟ್ರಾಫಿಕ್‌ ಜಾಮ್‌ ಹೆಚ್ಚಳವಾಗುತ್ತಿದೆ. ಇದೀಗ ಮೆಟ್ರೋ ಸಹ ಬರುತ್ತಿರುವುದರಿಂದ ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಹೋಗುವುದಕ್ಕೂ ಸುಲಭವಾಗಲಿದೆ.

ಬೆಂಗಳೂರು ಮೆಟ್ರೋವನ್ನು ಹೊಸೂರಿಗೂ ವಿಸ್ತರಣೆ ಮಾಡುವಂತೆ ತಮಿಳುನಾಡು ಸರ್ಕಾರವು ಮನವಿ ಮಾಡಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರು ಮೆಟ್ರೋವನ್ನು ಕರ್ನಾಟಕದ ವಿವಿಧ ಭಾಗಕ್ಕೆ ವಿಸ್ತರಣೆ ಮಾಡಿ ಎಂದು ಕನ್ನಡಿಗರು ಆಗ್ರಹಿಸಿದ್ದರು. ಅದರಂತೆ ಇದೀಗ ದೇವನಹಳ್ಳಿಗೆ ಮೆಟ್ರೋ ವಿಸ್ತರಣೆಯಾಗಿದೆ.

ಭೂಮಿಗೆ ಬಂಗಾರದ ಬೆಲೆ: ದೇವಹನಹಳ್ಳಿಗೆ ಮೆಟ್ರೋ ಘೋಷಣೆಯಾಗುತ್ತಿದ್ದಂತೆಯೇ ಇಲ್ಲಿನ ರಿಯಲ್‌ ಎಸ್ಟೇಟ್‌ದಾರರು ಚುರುಕಾಗಿದ್ದಾರೆ. ಭೂಮಿಗೆ ಚಿನ್ನದ ಬೆಲೆ ಬರಲು ಪ್ರಾರಂಭವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿ ಇರುವುದರಿಂದ ಇಲ್ಲಿ ಈಗಾಗಲೇ ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಇದೀಗ ಮೆಟ್ರೋ ಸಹ ಬರುತ್ತಿರುವುದು ಬೆಂಗಳೂರು ನಗರದ ಹೊರ ವಲಯ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲು ಕಾರಣವಾಗಿದೆ.

ಟ್ರಾಫಿಕ್‌ ಜಾಮ್‌ಗೆ ಮುಕ್ತಿ: ಇನ್ನು ಬೆಂಗಳೂರು ನಗರದಲ್ಲಿ ವಿಪರೀತವಾದ ಟ್ರಾಫಿಕ್‌ ಜಾಮ್‌ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಇನ್ನಷ್ಟು ಟ್ರಾಫಿಕ್‌ ಜಾಮ್‌ ಹೆಚ್ಚಳವಾಗುವ ಸಾಧ್ಯತೆ ಇದೆ. ಅಷ್ಟರ ವೇಳೆಗೆ ವಿವಿಧ ಭಾಗದಲ್ಲಿ ಮೆಟ್ರೋ ಪ್ರಯಾಣ ಜಾಲ ವಿಸ್ತರಣೆಯಾಗುವುದರಿಂದ ಟ್ರಾಫಿಕ್‌ ಜಾಮ್‌ಗೂ ಮುಕ್ತಿ ಸಿಗಲಿದೆ.

ಬೆಂಗಳೂರಿಗೆ ಸೀಮಿತವಾಗಿದ್ದ ಮೆಟ್ರೋ ಮೊದಲ ಬಾರಿ ಬೆಂಗಳೂರು ಗ್ರಾಮಾಂತರ ಭಾಗಕ್ಕೂ ವಿಸ್ತರಣೆಯಾಗುವ ಮೂಲಕ ರಾಜ್ಯದ ಎರಡನೇ ಜಿಲ್ಲೆಗೆ ನಮ್ಮ ಮೆಟ್ರೋ ವಿಸ್ತರಣೆಯಾದಂತಾಗಿದೆ. ನಮ್ಮ ಮೆಟ್ರೋ ಜಾಲವು ಇದೀಗ ಮೊದಲ ಹಾಗೂ 2 ನೇ ಹಂತದಲ್ಲಿ ಒಟ್ಟು 76 ಕಿ.ಮೀ ವಿಸ್ತರಣೆಗೊಂಡಿದೆ. ಮುಂದುವರಿದು 2 ಮತ್ತು 3 ನೇ ಹಂತದಲ್ಲಿ ಇನ್ನಷ್ಟು ದೂರಕ್ಕೆ ವಿಸ್ತರಣೆ ಮಾಡಲಾಗುತ್ತಿದೆ. ಅಲ್ಲದೆ ಈಗಾಗಲೇ ಇರುವ ನೇರಳೆ ಮತ್ತು ಹಸಿರು ಮಾರ್ಗದೊಂದಿಗೆ ನೀಲಿ, ಹಳದಿ ಹಾಗೂ ಗುಲಾಬಿ ಮಾರ್ಗದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿ ಇದೆ. ಒಟ್ಟಾರೆಯಾಗಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ ಆಗಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+