• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಮತ್ತೆ ಡೆಂಗ್ಯೂ ಹಾವಳಿ, 1,830 ಪ್ರಕರಣ ಪತ್ತೆ

|

ಬೆಂಗಳೂರು, ಜುಲೈ 5: ನಗರದಲ್ಲಿ ಡೆಂಗ್ಯೂ ಹಾವಳಿ ವಿಪರೀತವಾಗುತ್ತಿದೆ. ಮೋಡ ವಾತಾವರಣ ಆಗಾಗ ಅಲ್ಪಸ್ವಲ್ಪ ಮಳೆ, ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1830 ಪ್ರಕರಣಗಳು ಪತ್ತೆಯಾಗಿವೆ.

ಬೌರಿಂಗ್ ಆಸ್ಪತ್ರೆ, ವಿಕ್ಟೋರಿಯಾ , ಲೇಡಿ ಕರ್ಜನ್, ಇಂದಿರಾ ಮಕ್ಕಳ ಆಸ್ಪತ್ರೆ, ಕೆಸಿ ಜನರಲ್ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ

ನಗರದ ಸರ್ಕಾರಿ ಆಸ್ಪತ್ರೆಯಾದ ಕೆಸಿ ಜನರಲ್ ಆಸ್ಪತ್ರೆಯಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಆಸ್ಪತ್ರೆಯೊಂದರಲ್ಲೇ 100 ಮಂದಿ ವೈರಲ್ ಜ್ವರಕ್ಕೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 20ರಷ್ಟು ಮಂದಿ ಡೆಂಗ್ಯೂ ಜ್ವರ ಹೊಂದಿದವರಾಗಿದ್ದಾರೆ.

ಒಂದೇ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಪಟ್ಟು ಡೆಂಗ್ಯೂ ಏರಿಕೆಯಾಗಿದೆ. ಜೂನ್ 4 ರಂದು 531 ಇದ್ದ ಪ್ರಕರಣ ಜುಲೈ 4ಕ್ಕೆ 1830ಕ್ಕೆ ಏರಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇದೇ ಸ್ಥಿತಿ ಮುಂದುವರೆದಿದೆ. ವಾರಕ್ಕೆ 40-50 ಡೆಂಗ್ಯೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ.

ಡೆಂಗ್ಯೂಗೆ ಸೂಕ್ತ ಔಷಧವಿಲ್ಲ ಮುಂಜಾಗ್ರತಾ ಕ್ರಮ ಅನುಸರಿಸುವುದೇ ಮದ್ದು, ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಬೇಕು. ಶುದ್ಧ ಹಾಗೂ ಕುದಿಸಿದ ನೀರನ್ನೇ ಕುಡಿಯಬೇಕು.

English summary
Dengue stings 1830 cases are found in Bengaluru. Bruhat Bengaluru Mahanagara Palike (BBMP)’s Public Health Information and Epidemiological Cell has recorded 1,830 confirmed cases of dengue in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X