ಬೆಳ್ಳಂದೂರು ರೈಲು ನಿಲ್ದಾಣಕ್ಕೆ ಈ ಹೆಸರಿಡುವಂತೆ ಒತ್ತಾಯ
ಬೆಂಗಳೂರು, ಡಿಸೆಂಬರ್, 06: ಈಗಾಗಲೇ ಅಂದುಕೊಂಡತೆ ಶಿವೊಗ್ಗದ ಬಳಿಯ ಸೋಗಾನೆಯಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲಾಗಿದೆ. ಹಾಗೆಯೇ ಒಂದೊಂದು ರೈಲು ನಿಲ್ದಾಣಗಳಿಗೂ ಒಂದೊದು ಹೆಸರಿಡಲಾಗಿದೆ. ಇದೀಗ ಮಹದೇವಪುರದ ಬೆಳ್ಳಂದೂರು ರೈಲು ನಿಲ್ದಾಣದ ಹೆಸರು ಬದಲಾಯಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹದೇವಪುರದ ಬೆಳ್ಳಂದೂರು ರೈಲು ನಿಲ್ದಾಣಕ್ಕೆ ಬೆಳ್ಳಂದೂರು ರೋಡ್ ಎಂದು ಹೆಸರಿದೆ. ಆದರೆ ಈ ನಿಲ್ದಾಣಕ್ಕೆ ಭೂಮಿ ನೀಡಿದ್ದು ಪಣತ್ತೂರಿನ ನಿವಾಸಿಗಳಾಗಿದ್ದಾರೆ. ಆದ್ದರಿಂದ ಪಣತ್ತೂರಿನ ಜನರು ಈ ನಿಲ್ದಾಣಕ್ಕೆ ಪಣತ್ತೂರು ರೈಲು ನಿಲ್ದಾಣ ಎಂದು ಹೆಸರಿಡಬೇಕೆಂದು ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಮತ್ತು ಸಂಸದ ಪಿಸಿ ಮೋಹನ್ ಅವರನ್ನು ಸಂಪರ್ಕ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಬೆಳ್ಳಂದೂರು ರೈಲು ನಿಲ್ದಾಣಕ್ಕೆ ಬೆಳ್ಳಂದೂರು ರೋಡ್ ಎಂದು ಹೆಸರಿಸಲಾಗಿದೆ. ಇದಕ್ಕೆ ಪಣತ್ತೂರಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಜಾಗ ನೀಡಿದ್ದು ಪಣತ್ತೂರಿನ ಜನರು, ಆದರೆ, ಹೆಸರು ಮಾತ್ರ 5 ಕಿಲೋ ಮೀಟರ್ ದೂರದಲ್ಲಿರುವ ಬೆಳ್ಳಂದೂರು ಹೆಸರನ್ನು ಇಟ್ಟಿದ್ದಾರೆ ಎಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರು ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಈಗಾಗಲೇ ಈ ಬಗ್ಗೆ ಹಲವು ಬಾರಿ ಬೆಂಗಳೂರು ಪಿಸಿ ಮೋಹನ್ ಅವರಿಗೆ ಇಲ್ಲಿನ ಜನರು ಮನವಿ ಮಾಡಿದ್ದಾರೆ. ಆದರೂ ಇದುವರೆದೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಇಲ್ಲಿನ ಜನರ ಆರೋಪವಾಗಿದೆ. ಇದೀಗ, ಬೆಳ್ಳಂದೂರು ರೈಲ್ವೆ ನಿಲ್ದಾಣಕ್ಕೆ ಕೋಟಿ..ಕೋಟಿ ರೂಪಾಯಿ ಹಣ ಸುರಿದು ಅಭಿವೃದ್ಧಿ ಮಾಡಲಾಗುತ್ತಿದೆ. ಈ ವೇಳೆ ಮತ್ತೆ ಬೆಳ್ಳಂದೂರು ರೋಡ್ ಎಂದು ಹೊಸ ಬೋರ್ಡ್ ಹಾಕಿದ್ದಾರೆ ಎಂದು ಸ್ಥಳೀಯರು ಆಕ್ರೊಶ ಹೊರಹಾಕಿದ್ದಾರೆ.
ಹೊಸ ಪ್ರಯಾಣಿಕರಿಗೆ ತೊಂದರೆ?: ಇನ್ನು ಈ ಬಗ್ಗೆ ಸೂಕ್ತ ಮಾಹಿತಿಯಿಲ್ಲದ ಪ್ರಯಾಣಿಕರು ಬೆಳ್ಳಂದೂರು ಎಂದು ಕ್ಯಾಬ್, ಆಟೋ ಬುಕ್ ಮಾಡಿಕೊಂಡು ಬೆಳ್ಳಂದೂರಿಗೆ ಹೋಗಿ ಮತ್ತೆ ಪಣತ್ತೂರಿಗೆ ವಾಪಾಸ್ ಬಂದು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪಣತ್ತೂರಿನ ನಿವಾಸಿಗಳು ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪಿಸಿ ಮೋಹನ್ ಹೇಳಿದ್ದೇನು?: ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಸ್ಥಳೀಯ ನಿವಾಸಿಗಳು ಸಹಿ ಸಂಗ್ರಹ ಮಾಡಿ, ಬೆಳ್ಳಂದೂರು ರೋಡ್ ರೈಲ್ವೆ ನಿಲ್ದಾಣ ಹೆಸರನ್ನು ಪಣತ್ತೂರು ಎಂದು ಮರುನಾಮಕರಣ ಮಾಡಿ ಎಂದು ಮನವಿ ಮಾಡಿದರು. ಇನ್ನು ಈ ಕುರಿತು ಸಂಸದ ಪಿಸಿ ಮೋಹನ್ ಮಾತನಾಡಿ, ಈಗಾಗಲೇ ಈ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ನಾನು ಸಂಸತ್ತಿನಲ್ಲಿನಲ್ಲಿ ಇದ್ದೇನೆ. ಅಲ್ಲಿಂದ ಬಂದ ಬಳಿಕ ನಂತರ ಮತ್ತೊಮ್ಮೆ ರೈಲ್ವೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications