Get Updates
Get notified of breaking news, exclusive insights, and must-see stories!

ಬೆಂಗಳೂರು-ಮಂಗಳೂರು ರೈಲು: ಸಚಿವ ವಿ. ಸೋಮಣ್ಣ ಮುಂದೆ ಬೇಡಿಕೆಗಳೇನು?

ಬೆಂಗಳೂರು, ಏಪ್ರಿಲ್ 15: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮುಂದೆ ಹಲವು ಬೇಡಿಕೆಗಳನ್ನು ಇಡಲಾಗಿದೆ. ಇದರಲ್ಲಿ ವಂದೇ ಭಾರತ್ ರೈಲು ಸೇವೆ ಮುಂಬೈ ನಗರಕ್ಕೆ ವಿಸ್ತರಣೆ, ಯಶವಂತಪುರ-ಸಿಎಸ್‌ಟಿಎಂ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳು ಸೇರಿವೆ.

ಬೆಂಗಳೂರು ನಗರದ ಯಶವಂತಪುರ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ ನಡುವಿನ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆ ಮಾಡಬೇಕು ಎಂಬುದು ಬೇಡಿಕೆ. ಈ ಕುರಿತು ಸಚಿವ ವಿ. ಸೋಮಣ್ಣ ಅವರಿಗೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಮನವಿಯನ್ನು ಸಲ್ಲಿಕೆ ಮಾಡಿದೆ.

Demand To Extend Yesvantpur CSMT Mumbai Train To Mangaluru Central

ಯಾವ-ಯಾವ ಬೇಡಿಕೆಗಳು

* ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು (16575/ 76) ಮತ್ತು16539/ 40) ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು.

* ಸಿಎಸ್‌ಟಿಎಂ ಮುಂಬೈ-ಮಂಗಳೂರು ಜಂಕ್ಷನ್ ರೈಲು (12133/ 34) ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು.

* ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುಂಬೈ ಸಿಎಸ್‌ಟಿಎಂ ತನಕ ವಿಸ್ತರಿಸಬೇಕು.

* ಮಂಗಳೂರು-ಕತ್ರಾ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಪುನಃ ಆರಂಭಿಸಬೇಕು. ಮಾರ್ಗವನ್ನು ಸುಬ್ರಮಣ್ಯ ರೋಡ್, ಹಾಸನ, ಭೋಪಾಲ್ ಮತ್ತು ದೆಹಲಿಯಾಗಿ ಬದಲಾವಣೆ ಮಾಡಬೇಕು.

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಇನ್ನಷ್ಟು ರೈಲುಗಳು ಬೇಕು ಎಂಬುದು ಬೇಡಿಕೆಯಾಗಿದೆ. ಈಗಿರುವ ರೈಲುಗಳಲ್ಲಿ ಜನದಟ್ಟಣೆ ಅಧಿಕವಾಗಿದ್ದು, ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಸೀಟುಗಳು ಸಿಗದೆ ಜನರು ಪರದಾಡುತ್ತಾರೆ. ಆದ್ದರಿಂದ ಇನ್ನಷ್ಟು ರೈಲುಗಳನ್ನು ಓಡಿಸಬೇಕು ಎಂದು ಪದೇ ಪದೇ ಮನವಿ ಮಾಡಲಾಗುತ್ತಿದೆ.

ಈ ಮನವಿಯಂತೆಯೇ ಯಶವಂತಪುರ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ ನಡುವಿನ ರೈಲನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆ ಮಾಡಿ, ಕರಾವಳಿಗೆ ಸಂಚಾರ ನಡೆಸುವ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೇಡಿಕೆ ಇಡಲಾಗಿದೆ.

ಮಂಗಳೂರು-ಮುಂಬೈ ವಂದೇ ಭಾರತ್ ರೈಲು: ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಆರಂಭಿಸಬೇಕು ಎಂಬ ಬೇಡಿಕೆ ಇದೆ. ಸಚಿವ ವಿ. ಸೋಮಣ್ಣ ಉಭಯ ನಗರದ ನಡುವೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಆರಂಭಿಸಲಾಗುತ್ತದೆ ಎಂಬ ಭರವಸೆಯನ್ನು ಸಹ ನೀಡಿದ್ದಾರೆ.

ಸದ್ಯ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ. ಈ ರೈಲು ಪ್ರಯಾಣಿಕರ ಕೊರತೆ ಎದುರಿಸುತ್ತಿದೆ. ಇದನ್ನು ರದ್ದುಗೊಳಿಸುವ ಬದಲು ಮುಂಬೈ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.

ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ರದ್ದಾಗುವುದಿಲ್ಲ, ಬದಲಾಗಿ ಮುಂಬೈಗೆ ಓಡಲಿದೆ' ಎಂದು ಹೇಳಿದ್ದಾರೆ.

'ಮಂಗಳೂರು-ಉಡುಪಿ-ಮಡಗಾಂವ್ ರೈಲು ಮುಂಬೈಗೆ ವಿಸ್ತರಣೆ ಆಗಬೇಕೆಂದು ರೈಲು ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ನಿರಂತರವಾಗಿ ನಾನು ಸಂಪರ್ಕದಲ್ಲಿದ್ದು ಕಳೆದ ವಾರವೂ ಮಾನ್ಯ ಸಚಿವರುಗಳು ಮತ್ತು ರೈಲು ಮಂಡಳಿಯ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿದ್ದೆ' ಎಂದು ಸಂಸದರು ತಿಳಿಸಿದ್ದಾರೆ.

'ಇತ್ತೀಚೆಗೆ ರೈಲು ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮತ್ತು ವಿ. ಸೋಮಣ್ಣ ಅವರು ಈ ಸಂಬಂಧ ನನ್ನ ಮನವಿಯನ್ನು ಅತ್ಯಂತ ಗೌರವಪೂರ್ವಕವಾಗಿ ಆಲಿಸಿ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ' ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

'ಸದ್ಯಕ್ಕೆ ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಸೇವೆ ರದ್ದಾಗುವ ಭೀತಿ ಸಂಪೂರ್ಣವಾಗಿ ದೂರವಾಗಿದ್ದು ಈಗ ನಮ್ಮ ಮುಂದಿರುವ ಗುರಿ ಈ ರೈಲನ್ನು ಮುಂಬೈಗೆ ವಿಸ್ತರಿಸುವ ಗುರಿ ಮಾತ್ರವೇ ಆಗಿರುತ್ತದೆ. ಮುಂದುವರಿದು ಯಥಾಶೀಘ್ರ ವಂದೇಭಾರತ್ ಸ್ಲೀಪರ್ ರೈಲು ಆರಂಭವಾಗಲಿದ್ದು ಮುಂಬೈಗೆ ತೆರಳುವ ಕರಾವಳಿ ಪ್ರಯಾಣಿಕರಿಗೆ ಬಹಳಷ್ಟು ಉಪಯೋಗವಾಗಲಿದೆ' ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+