ಏರ್‌ಪೋರ್ಟ್ ಲೈನ್ ಮೆಟ್ರೊ: ಚಿಕ್ಕಜಾಲ ನಿವಾಸಿಗಳಿಂದ ನಿಲ್ದಾಣಕ್ಕೆ ಬೇಡಿಕೆ
ಬೆಂಗಳೂರು, ಎಪ್ರಿಲ್ 15: ನಮ್ಮ ಬೆಂಗಳೂರು ಮೆಟ್ರೊ ಯೋಜನೆಯಡಿ ವಿಮಾನ ನಿಲ್ದಾಣ ಮಾರ್ಗ ಕಾಮಗಾರಿ ಘೋಷಿಸಲಾಗಿದ್ದು, ಚಿಕ್ಕಜಾಲದ ಸ್ಥಳೀಯರು ಮೆಟ್ರೊ ನಿಲ್ದಾಣ ಕಲ್ಪಿಸುವಂತೆ ಬೆಡಿಕೆ ಇಟ್ಟಿದ್ದಾರೆ.
ಏರ್‌ಪೋರ್ಟ್ ಲೈನ್ ಕಾಮಗಾರಿಯ ಯೋಜನೆಯಲ್ಲಿ ಚಿಕ್ಕಜಾಲ ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಬಂದು ಸೇರುವ ಚಿಕ್ಕಜಾಲ ಮೆಟ್ರೋ ನಿಲ್ದಾಣ ಒದಗಿಸಬೇಕೆಂಬುದು ನಿವಾಸಿಗಳ ಒತ್ತಾಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿತಮಿತ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲೂ ಲೈನ್ ಕಾರಿಡಾರ್ ಫೇಸ್ -2 (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರ) ಫೇಸ್ -2ಬಿ (ಕೆಆರ್ ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಕಾಮಗಾರಿಗಳು ನಡೆಯಲಿವೆ. ಇದನ್ನು ನಗರ ಭೂಸಾರಿಗೆ ನಿರ್ದೇಶನಾಲಯ (DULT) ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ರೂಪಿಸುತ್ತಿವೆ. ಬ್ಲೂ ಲೈನ್ ಕಾರಿಡಾರ್ ಬಗ್ಗೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಇಲ್ಲಿ ಚಿಕ್ಕಜಾಲದ ನಿವಾಸಿಗಳು ಭೇಟಿ ನೀಡಿ ತಮಗೆ ನಿಲ್ದಾಣವೊಂದನ್ನು ಒದಗಿಸಬೇಕು ಎಂದು ಸಭೆಯಲ್ಲಿ ಕೋರಿಕೆ ಸಲ್ಲಿಸಿದ್ದಾರೆ.

ಚಿಕ್ಕಜಾಲದ ಸಾಫ್ಟವೇರ್ ಉದ್ಯೋಗಿ ಹಾಗೂ ನಿವಾಸಿ ಎನ್. ಮನೋಜ್ ಮಾತನಾಡಿ, 'ಜಿಕ್ಕಜಾಲ ಪ್ರದೇಶವು ಒಂದು ತಾಲೂಕು ಕೇಂದ್ರವಾಗಿದೆ. ಚಕ್ಕಜಾಲದಲ್ಲಿ ಶಾಲೆಗಳು ಕಾಲೇಜುಗಳು, ಆಸ್ಪತ್ರೆಗಳು ಮತ್ತು ಪೋಲಿಸ್ ಠಾಣೆಗಳ ಜನನಿಬಿಡ ಪ್ರದೇಶವಾಗಿದೆ. ಇಲ್ಲೊಂದು ಮೆಟ್ರೊ ನಿಲ್ದಾಣವಾದರೆ ಸಾರ್ವಜನಿಕರಿಗೆ ಅಪಾರ ಪ್ರಯೋಜನವಾಲಿದೆ,'' ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.
ಇನ್ನು ಸಭೆಯಲ್ಲಿ ನಗರಸಾರಿಗೆ ತಜ್ಞ ಸತ್ಯ ಅವರು ಮೆಟ್ರೊ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿ, ''ಚಿಕ್ಕಜಾಲ ಪ್ರದೇಶವು ಕನಿಷ್ಠ 50 ಸಾವಿರ ಹೊಂದಿದೆ. ಬೆಂಗಳೂರಿನ ಅನೇಕ ನಗರಗಳಿಗೆ ಕೇಂದ್ರ ಬಿಂದುವಾಗಿರುವ ಚಿಕ್ಕಜಾಲಕ್ಕೆ ಒಂದು ಮೆಟ್ರೋ ನಿಲ್ದಾಣ ಒದಗಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಹಾಗೂ ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಅಗತ್ಯವಿದೆ. ಹೀಗಾಗಿ ಚಿಕ್ಕಜಾಲ ಮೆಟ್ರೊ ನಿಲ್ದಾಣ ಅವಶ್ಯಕ,'' ಎಂದು ಒತ್ತಾಯಿಸಿದರು.

Recommended Video
ಇನ್ನು ಬಿ-ಸೇಫ್ ರಾಯಭಾರಿ ಇಂದಿರಾ, ''ಇಲ್ಲಿನ ಮಹಿಳೆಯರು ಚಿಕ್ಕಜಾಲದ ಸುತ್ತಮುತ್ತಲಿನ ಹಾಗೂ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಸುರಕ್ಷಿತವಾಗಿ ಮನೆಗೆ ತಲುಪಲು ದಿನದ 24 ಗಂಟೆಗಳ ಕಾಲವು ಮೆಟ್ರೋ ರೈಲು ಸೇವೆ ಒದಗಿಸಬೇಕು,'' ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ವಿನಂತಿಸಿದರು.












Click it and Unblock the Notifications