ಬೆಂಗಳೂರಿಗೆ ಬಂದು "ಯಾಕೆ ಕನ್ನಡ ಕಲಿಯಬೇಕು" ದೆಹಲಿ ಯುವತಿ ವಿಡಿಯೋ ಮೆಚ್ಚಿದ ಕನ್ನಡಿಗರು! Viral Video
ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ಹಿಂದಿ ಸೇರಿದಂತೆ ಕೆಲವು ಅನ್ಯ ಭಾಷಿಕರು ಕನ್ನಡ ಭಾಷೆಯನ್ನು ಕಲಿಯುತ್ತಿಲ್ಲ, ಕನ್ನಡಿಗರನ್ನು ಗೌರವಿಸುತ್ತಿಲ್ಲ ಎನ್ನುವ ಆರೋಪದ ನಡುವೆ ಇದೀಗ ಕನ್ನಡ ಭಾಷೆಯ ಬಗ್ಗೆ ಹಾಗೂ ಬೆಂಗಳೂರಿನ ಬಗ್ಗೆ ಪರಭಾಷಿಕ ಯುವತಿಯೊಬ್ಬರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಕನ್ನಡಿಗರು ಈ ವಿಡಿಯೋಗೆ ಮುಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರಿನ ಬಗ್ಗೆ ಟೀಕೆ ಮಾಡುವ ಹಾಗೂ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೆಲವರು ಅಪಹಾಸ್ಯ ಮಾಡಿ ವಿಡಿಯೋ ಮಾಡುವುದು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತೆ ಹೆಚ್ಚಾಗಿದೆ. ಅದರಲ್ಲೂ ಕನ್ನಡ ಭಾಷೆಯನ್ನು ಮಾತನಾಡಿ ಎಂದು ಹೇಳುವುದನ್ನೂ ಕೆಲವರು ಖಂಡಿಸುವುದು ಹಾಗೂ ಟ್ರೋಲ್ ಮಾಡುವುದು ಮುಂದುವರಿದಿದೆ.

ಇನ್ಸ್ಟಾಗ್ರಾಮ್‌ನಲ್ಲಿ Simridhimakhija ಎನ್ನುವವರು ತಮ್ಮ ಖಾತೆಯಲ್ಲಿ ಬೆಂಗಳೂರು ಹಾಗೂ ಕನ್ನಡ ಭಾಷೆಯನ್ನು ಮೆಚ್ಚಿಕೊಂಡು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಿಮ್ರಿಧಿ ಮಖಿಜಾ ಎನ್ನುವವರು ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ನೆಲೆಸಿರುವ ಬಗ್ಗೆ ಹಾಗೂ ಇಲ್ಲಿನ ಕನ್ನಡಿಗರ ಪ್ರೀತಿಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ನಿಮಗೆ ಕನ್ನಡ ಬರದಿದ್ದರೆ ಬೆಂಗಳೂರಿಗೆ ಬರಬೇಡಿ. ನಾನು ಇದನ್ನು ಈ ಮಾತನ್ನು ಮೊದಲು ಕೇಳಿದಾಗ.. ನಾನು ದೆಹಲಿ ಹುಡುಗಿ ಕನ್ನಡ ಕಲಿಯುವುದಿಲ್ಲ ಎಂದೇ ಅಂದುಕೊಂಡಿದ್ದೆ. ಆದರೆ ನಾನು ಬೆಂಗಳೂರಿಗೆ ಬಂದು 60ಕ್ಕೂ ಹೆಚ್ಚು ದಿನಗಳಾಗಿವೆ. ನಾನು ನಿಮಗೆ ಹೇಳಬಹುದಾದ ಏನಾದರೂ ಇದ್ದರೆ, ಎಲ್ಲರೂ ಕನ್ನಡ ಕಲಿಯಬೇಕು ಏಕೆಂದರೆ ಇಲ್ಲಿ ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ನಿಮಗೆ ಗೊತ್ತಾ ನಾನು ಬೆಂಗಳೂರಿನ HSR ನಲ್ಲಿ ನಿಯಮಿತವಾಗಿ ದೋಸೆ ತಿನ್ನುವ ಸ್ಥಳವಿದೆ. ನಾನು ಅಲ್ಲಿ ಆಗ್ಗಾಗ್ಗೆ ಊಟ ಮಾಡುತ್ತಿದ್ದೆ. ಅಲ್ಲಿನ ಅಣ್ಣ ನನ್ನನ್ನು ಕೇಳಿದರು, ನಾಲ್ಕು ದಿನಗಳಾಯ್ತು ನೀವು ಬರಲಿಲ್ಲ, ಏನಾಯಿತು... ಆರೋಗ್ಯವಾಗಿದ್ದೀರಾ ಎಂದು ಕೇಳಿದರು. ನಾನು ಅವರಿಗೆ ಹೇಳಿದೆ ಸಿಕ್ಕಾಪಟ್ಟೆ ಕೆಲಸ ಇತ್ತು ಅದಕ್ಕೆ ಬರೋದಕ್ಕೆ ಆಗಲಿಲ್ಲ ಅಂತ ಎಂದು ವಿವರಿಸಿದ್ದಾರೆ.
ನಾನು ಕನ್ನಡ ಕಲಿಯುವುದಕ್ಕೆ ಬಯಸುತ್ತೇನೆ. ಕನ್ನಡ ಕಲಿಯುವುದರಿಂದ ಇಲ್ಲಿ ನಿಮ್ಮ ಜೀವನ ಸರಳವಾಗಲಿದೆ. ಅಲ್ಲದೇ ಇಲ್ಲಿನವರೊಂದಿಗೆ ನೀವೂ ಒಬ್ಬರಾಗಬಹುದು ಎಂದು ಅವರು ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾನು ಅವರನ್ನು ಅವರ ಭಾಷೆಯಲ್ಲಿ ಸ್ವಾಗತಿಸಬೇಕೆಂದು ನಾನು ಬಯಸುತ್ತೇನೆ. ಇಲ್ಲಿನ ಜನರು ತುಂಬಾ ಆತಿಥ್ಯ ವಹಿಸುತ್ತಾರೆ. ಭಾಷಾ ಸಮಸ್ಯೆಯನ್ನು ನಾವು ಏಕೆ ಇಷ್ಟು ಜಟಿಲಗೊಳಿಸಿದ್ದೇವೆಂದು ನನಗೆ ತಿಳಿದಿಲ್ಲ. ಏನಾದರೂ ಇದ್ದರೆ, ಕನ್ನಡ ಮಾತನಾಡಬಲ್ಲ ನನ್ನ ಎಲ್ಲಾ ಸ್ನೇಹಿತರ ಬಗ್ಗೆ ನನಗೆ ತುಂಬಾ ಅಸೂಯೆ ಇದೆ. ನಾನು ಭಾಷೆಯನ್ನು ಕಲಿಯಲು ಅವರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೇನೆ. ಭಾಷಾ ಹೋರಾಟಕ್ಕೆ ಇಳಿಯಬೇಡಿ, ಕನ್ನಡ ಕಲಿಯಿ ಎಂದು ಅವರು ಹೇಳಿದ್ದಾರೆ.












Click it and Unblock the Notifications