ಉಪನ್ಯಾಸಕರ ಹಾಜರಿ: ಬಯೋಮೆಟ್ರಿಕ್ ಅಳವಡಿಕೆ ಇನ್ನೂ ಆಗಿಲ್ಲ
ಬೆಂಗಳೂರು, ಜು.24: ರಾಜ್ಯದ ಎಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಈ ಶೈಕ್ಷಣಿಕ ವರ್ಷದಿಂದ ಬಯೋಮೆಟ್ರಿಕ್ ಹಾಜರಾತಿ ಜಾರಿಗೊಳಿಸುವಂತೆ ಸರ್ಕಾರ ಆದೇಶಿಸಿದೆ.
ಆದರೆ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಇದುವರೆಗೂ ಬಯೋಮೆಟ್ರಿಕ್ ಅಳವಡಿಸಿಲ್ಲ, ಕೆಲವು ಪಿಯು ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ಮೂಗುದಾರ ತೊಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿತ್ತು.
ಮೇ 2ರಿಂದ ಪದವಿಪೂರ್ವ ಕಾಲೇಜು ತರಗತಿಗಳು ಆರಂಭವಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಂದಿನಿಂದಲೇ ಬಯೋಮೆಟ್ರಿಕ್ ವ್ಯವಸ್ಥೆಯೂ ಆರಂಭವಾಗಬೇಕಿತ್ತು. ಆದರೆ ಉಪಕರಣಗಳು ಬಂದರೂ ಜೋಡಿಸುವ ಕೆಲಸ ಮಾತ್ರ ಆರಂಭವಾಗಿಯೇ ಇಲ್ಲ.
ವರ್ಷದ ಹಿಂದೆ ಕೋಲಾರ ಪಿಜಿ ಕೇಂದ್ರದ ವಿದ್ಯಾರ್ಥಿನಿಗೆ ಕನ್ನಡ ಅಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದರು ಎಂಬ ಆರೋಪ ಕೇಳಿಬಂದಾಗ ಅಧ್ಯಾಪರು ಯಾವ ಸಮಯದಲ್ಲಿ ಎಲ್ಲಿದ್ದರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ಬಯೋಮೆಟ್ರಿಕ್ ಅಳವಡಿಸಲು ವಿವಿ ಮುಂದಾಗಿತ್ತು.
ಕೆಲವು ವಿಭಾಗಗಳಲ್ಲಿ ಮಾತ್ರ ಇದುವರೆಗೂ ಅಳವಡಿಸಲಾಗಿದೆ. ಪರಿಣಾಮಕಾರಿಯಾಗಿ ಅನುಷ್ಠಾನವಾಗದಿದ್ದರಿಂದ ವಿವಿ ಸುಮ್ಮನಾಗಿತ್ತು. ವಿಶ್ವವಿದ್ಯಾಲಯಗಳಲ್ಲಿ ಬಯೋಮೆಟ್ರಿಕ್ ಅಳವಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಕಳೆದ ಎರಡು ವರ್ಷಗಳ ಹಿಂದೆಯೇ ಸೂಚನೆ ನೀಡಿತ್ತು.

ಬಯೋಮೆಟ್ರಿಕ್‌ನಲ್ಲಿ ಮೋಸ ಮಾಡುವಂತಿಲ್ಲ
ಕೆಲವು ಸರ್ಕಾರಿ ವ್ಯವಸ್ಥೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಿದ್ದರ ಸಿಬ್ಬಂದಿ ಬೇರೆಯವರ ಬೆರಳಚ್ಚು ನೀಡಿ ಕೆಲಸ ತಪ್ಪಿಸಕೊಳ್ಳುವ ಆರೋಪ ಕೇಳಿಬರುತ್ತಿದ್ದಂತೆ ಪದವಿಪೂರ್ವ ಉಪನ್ಯಾಸಕರೂ ಆ ಕೆಲಸವನ್ನು ಅನುಸರಿಸದೆ ಇರಲು ಪದವಿಪೂರ್ವ ಇಲಾಖೆ ಹೊಸ ಮಾರ್ಗ ಕಂಡುಕೊಂಡಿದೆ.
ಬಯೋಮೆಟ್ರಿಕ್‌ಗೆ ಸ್ವತಃ ಉಪನ್ಯಾಸಕರ ಬೆರಳಚ್ಚು ಜೋಡಿಸುವುದನ್ನು ಕಡ್ಡಾಯಗೊಳಿಸಿದೆ ಆದರೆ ಈ ಯಂತ್ರವೇ ಕಾರ್ಯಾರಂಭವಾಗದೆ ಇವೆಲ್ಲ ವ್ಯವಸ್ಥೆಗಳು ನೆನಗುದಿಗೆ ಬಿದ್ದಿದೆ.

ಬಯೋಮೆಟ್ರಿಕ್ ಅಳವಡಿಸುವವರೇ ಬಂದಿಲ್ಲ
ಕೆಲವು ವಾರಗಳ ಹಿಂದಯೇ ತಮ್ ಕಾಲೇಜಿಗೆ ಬಯೋಮೆಟ್ರಿಕ್‌ಗೆ ಸಂಬಂಧಿಸಿದಂತೆ ಎಲ್ಲಾ ಉಪಕರಣಗಳನ್ನು ಕೆಲವು ಕಾಲೇಜುಗಳು ತಂದಿರಿಸಿವೆ ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಜೋಡಿಸುವ ಸಿಬ್ಬಂದಿಗಳು ಇನ್ನೂ ಬಂದಿಲ್ಲ, ತರಗತಿ ಆರಂಭವಾಗಿ ಮೂರು ತೀಂಗಳುಗಳು ಕಳೆದಿವೆ ಆದರೂ ಕಾರ್ಯಾರಂಭವಾಗಿಲ್ಲ.

ಖಾಸಗಿ ಮಾಹಿತಿ ಅಪ್‌ಲೋಡ್
ಪಿಯು ಉಪನ್ಯಾಸಕರಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮಾತ್ರವಲ್ಲದೆ ಅವರ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಕಾಲೇಜಿನಲ್ಲಿ ಈ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಹೆಸರು, ಜನ್ಮದಿನಾಂಕ, ಸೇರಿದಂತೆ ಆಧಾರ್ ಕಾರ್ಡ್ ನಂಬರ್ ಅಪ್‌ಲೋಡ್ ಮಾಡಬೇಕು.

ಬಯೋಮೆಟ್ರಿಕ್ ವೇತನ ಹೆಚ್ಚಳಕ್ಕೂ ಮಾನದಂಡ
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಪ್ರಾಧ್ಯಾಪಕರ ವೇತನ ಹೆಚ್ಚಳಕ್ಕೂ ಮಾನದಂಡವಾಗಲಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವೇತನ ಹೆಚ್ಚಳಕ್ಕೆ ಬಯೋಮೆಟ್ರಿಕ್ ಹಾಜರಾತಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications