ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru air quality : ದೀಪಾವಳಿ ಹಬ್ಬ:ಬೆಂಗಳೂರಲ್ಲಿ ವಾಯು ಗುಣಮಟ್ಟ ಹೇಗಿದೆ? ಎಂಬುದನ್ನು ತಿಳಿಯಿರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವಾಯುಗುಣಮಟ್ಟ ಮಂಗಳವಾರ ಸಂಜೆ 5ಗಂಟೆ ವೇಳೆಗೆ ಸಾಧಾರಣದಿಂದ ತೃಪ್ತಿಕರವಾಗಿ ದಾಖಲಾಗಿದೆ ಎಂದು ವಾಯು ಸರ್ವೇಕ್ಷಣಾ ಕೇಂದ್ರಗಳ ವರದಿ ತಿಳಿಸಿದೆ.

ದೀಪಾವಳಿ ಹಬ್ಬದ ನಡುವೆಯು ಬೆಂಗಳೂರಲ್ಲಿ ಸಿಲ್ಕ್‌ ಬೋರ್ಡ್, ಜಯನಗರ 5ನೇ ಬ್ಲಾಕ್ ಹಾಗೂ ಕೆಲವು ಬಡಾವಣೆ ಹೊರತುಡಪಡಿಸಿ ಉಳಿದೆಡೆ ಸಾಧಾರಣದಿಂದ ತೃಪ್ತಿಕರವಾಗಿ ವಾಯಗುಣಮಟ್ಟ ದಾಖಲಾಗಿದೆ. ಸಿಲ್ಕ್ ಬೋರ್ಡ್, ಸಿಟಿ ರೈಲು ನಿಲ್ದಾಣ ಹಾಗೂ ಜಯನಗರ 5ನೇ ಬ್ಲಾಕ್ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 5ಗಂಟೆ ಹೊತ್ತಿಗೆ ವಾಯು ಗುಣಮಟ್ಟ ಸೂಚ್ಯಂಕ (AQI) 105 ದಾಖಲಾಗಿದೆ. ಇಷ್ಟು ಕಳಪೆ ವಾಯು ಗುಣಮಟ್ಟದ ಮನುಷ್ಯರಲ್ಲಿ ವಿವಿಧ ಕಾಯಿಲೆಗಳ ಹುಟ್ಟಿಗೆ ಕಾರಣವಾಗುತ್ತದೆ.

ಸಾಮಾನ್ಯವಾಗಿ AQI 0-50 ಇದ್ದರೆ ಗಾಳಿಯ ಗುಣಮಟ್ಟ ಉತ್ತಮವಾಗಿದೆ ಎನ್ನಬಹುದು. AQI ಮಟ್ಟ 50-100ರೊಳಗೆ ಇದ್ದರೆ ತೃಪ್ತಿಕರ, AQI ಮಟ್ಟ 100 ರಿಂದ 150 ಇದ್ದರೆ ಅದನ್ನು ಸಾಧಾರಣ ಮತ್ತು ಕಳಪೆ ಗುಣಮಟ್ಟದ ಗಾಳಿ ಎಂದು ಕರೆಯಲಾಗುತ್ತದೆ.

ನಗರದ ಚನ್ನಸಂದ್ರದಲ್ಲಿ AQI 42, ಕಾಕ್ಸಟೌನ್ AQI 70, ಸಿ.ವಿ.ರಾಮನ್ ನಗರ 53, ಈಜಿಪುರ 66, ಹೆಬ್ಬಾಳ 95, ಕೆ.ಆರ್‌.ಪುರಂ 21 (ಉತ್ತಮ), ಕುಂದಲಹಳ್ಳಿ ಕಾಲೋನಿ 42 (ಉತ್ತಮ), ಮಾರುತಿನಗರ 74 , ಪೀಣ್ಯ 93, ಪ್ರೆಸ್ಟೀಜ್ ಪಾರ್ಕ್ ವ್ಯೂವ್ ಬಳಿ AQI ಮಟ್ಟ 42 (ಉತ್ತಮ) ದಾಖಲಾಗಿದೆ.

Deepavali festival Moderate to good AQI level recorded in Bengaluru city on Tuesday

ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಹೆಚ್ಚು

ಮಳೆಗಾಲ ಮುಗಿದ ಚಳಿಗಾಲ ಆರಂಭವಾದ ಬಳಿಕ ಸಾಮಾನ್ಯವಾಗಿ ಉಸಿರಾಟ ಸಮಸ್ಯೆ ಹೆಚ್ಚುತ್ತವೆ. ಚಳಿ ಹಾಗೂ ವಾಹನಗಳ ಹೊಗೆಯಿಂದ ರೂಪುಗೊಳ್ಳುವ ಮಂಜು ಇದಕ್ಕೆ ಕಾರಣವಿರಬಹುದು ಎನ್ನತ್ತಾರೆ ತಜ್ಞರು. ಅಲ್ಲದೇ ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಪಟಾಕಿಗಳಿಗೆ ನಿಷೇಧ ಹೇರಿದ್ದರು ಸಹ ಅನೇಕ ಕಡೆಗಳಲ್ಲಿ ಹಸಿರು ಪಟಾಕಿ ಎಲ್ಲ ಬಗೆಯ ಪಟಾಕಿ ಸಿಡಿಸಲಾಗಿದೆ. ಇದು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಮತ್ತು ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮತ್ತು ಎಚ್ಚರಿಕೆ ಮೇಲೆಯು ರಾತ್ರಿ 8ಗಂಟೆ ಮುಂಚಿತವಾಗಿ ಹಾಗೂ ರಾತ್ರಿ 10ಗಂಟೆ ನಂತರ ರಾಜಾರೋಷವಾಗಿ ಪಟಾಕಿ ಸಿಡಿಸಲಾಗಿದೆ. ದೀಪಾವಳಿ ಆಚರಣೆ ಮತ್ತು ಪಟಾಕಿ ಹೊಡೆಯುವುದರ ಕುರಿತು ಆದೇಶಗಳನ್ನು ಪಾಲಿಸಿದರೆ ಮಾತ್ರ ಹಬ್ಬದ ಸಂದರ್ಭದಲ್ಲು ನಾವು ವಾತಾವರಣದಲ್ಲಿ ಗಾಳಿ ಗುಣಮಟ್ಟವನ್ನು ಉತ್ತಮವಾಗಿ ಕಾಪಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಹಿರಿಯ ನಾಗರಿಕರಿಗೆ, ರೋಗಿಗಳು ಉಸಿರಾಟ ತೊಂದರೆಗೆ, ಎಲ್ಲ ವಯಸ್ಸಿನವರಿಗೆ ಕ್ರಮೇಣ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಜೊತೆಗೆ ಪೂನಾ, ನವದೆಹಲಿ, ಕಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಹಬ್ಬದ ವೇಳೆ ವಾಯು ಮಾಲಿನ್ಯವಾಗಿದೆ. ಇದರಲ್ಲಿ ದೆಹಲಿ ಅಗ್ರಸ್ಥಾನದಲ್ಲಿದ್ದು, ಅಲ್ಲಿAQI ಮಟ್ಟ 153 (ಕಳಪೆ) ಇದೆ ಎಂದು ತಿಳಿದು ಬಂದಿದೆ.

English summary
Deepavali festival Moderate to good Air Quality Index level (AQI) recorded in Bengaluru city on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X