ಮೈಸೂರು -ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಕ್ಯಾಮೆರಾ ಅಳಡಿವಕೆಗೆ ನಿರ್ಧಾರ, ಇಲ್ಲಿದೆ ವಿವರ
ರಾಮನಗರ, ಡಿಸೆಂಬರ್, 23: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳನ್ನು ತಡೆಯಲು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನದ ನೆರವು ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ. ಒಟ್ಟು 118 ಕಿಲೋ ಮೀಟರ್ ರಸ್ತೆಯಲ್ಲಿ ಪ್ರತಿ 500 ಮೀಟರ್ ಪ್ರದೇಶದಲ್ಲಿ ಎಐ ನೆರವಿನ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ. ಇಂಟಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್‌ನಡಿ ರಸ್ತೆ ನಿರ್ವಹಣೆ ವ್ಯವಸ್ಥೆ ರೂಪಿಸಲು ಪ್ರಾಧಿಕಾರ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಒಂದು ವೇಳೆ ಇದು ಜಾರಿಗೆ ಬಂದರೆ ಬೆಂಗಳೂರು ಇಲ್ಲವೇ ಮೈಸೂರಿನ ಕಂಟ್ರೋಲ್ ರೂಂನಲ್ಲಿ ಕುಳಿತುಕೊಂಡೆ 118 ಕಿಲೋ ಮೀಟರ್ ದೂರದ ಹೆದ್ದಾರಿಯ ಸಂಚಾರಿ ವ್ಯವಸ್ಥೆ ಮೇಲೆ ನಿಗಾ ಇಡಬಹುದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿಎಕ್ಸ್‌ಪ್ರೆಸ್ ವೇನಲ್ಲಿ 65 ಅಪಘಾತಗಳು ನಡೆದಿದ್ದು, ಅಪಘಾತದಲ್ಲಿ 22 ಜನ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನುವವ ಮಾಹಿತಿ ಲಭ್ಯವಾಗಿತ್ತು. ಆದ್ದರಿಂದ ಅಪಘಾತಗಳ ತಡೆಯಲು ಪ್ರಧಿಕಾರ ಪ್ರಮುಖ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಅಲ್ಲದೇ, ಸಂಚಾರಿ ನಿಯಮಗಳ ಪಾಲನೆಗೂ ಈ ಕ್ಯಾಮೆರಾಗಳ ಅಳವಡಿಕೆ ನೆರವಾಗಲಿದೆ.

ವಾಹನಗಳ ಸಂಚಾರವನ್ನು ಸೆರೆ ಹಿಡಿಯಲಿವೆ
ಪ್ರತಿ 500 ಮೀಟರ್‌ಗೆ ಒಂದರಂತೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಹೆದ್ದಾರಿಯ ಪ್ರತಿ ವಾಹನದ ಸಂಚಾರವನ್ನು ಸೆರೆ ಹಿಡಿಯಲಿವೆ. ಇದರಿಂದ ಹೆದ್ದಾರಿಯಲ್ಲಿ ಯಾವುದೇ ಪ್ರಕರಣ ನಡೆದರೂ, ಘಟನೆಯ ವಿಡಿಯೋಗಳು ಕಂಟ್ರೋಲ್ ರೂಂ, ಹೈವೆ ಪೆಟ್ರೋಲಿಯಂ, ಆ್ಯಂಬುಲೆನ್ಸ್, ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣ ರವಾನೆ ಆಗಲಿದೆ. ಈ ಕ್ಯಾಮೆರಾಗಳು ಆಟೋಮೆಟಿಕ್ ಸೆನ್ಸಾರ್ ಮೂಲಕ ವಾಹನಗಳ ನಂಬರ್ ಪ್ಲೇಟ್, ವೇಗದ ನಿಯಂತ್ರಣ ಎಲ್ಲವನ್ನೂ ದಾಖಲಿಸಿಕೊಳ್ಳಲಿವೆ.

ನಿಯಮ ಉಲ್ಲಂಘಿಸಿದ್ರೆ ಕೂಡಲೇ ಬಿಲ್ ಜನರೇಟ್
ಎಕ್ಸ್‌ಪ್ರೆಸ್ ವೇಯಲ್ಲಿ ನಿಗದಿಪಡಿಸಿರುವ ವೇಗದ ಮಿತಿಗಿಂತ ಹೆಚ್ಚಿನ ಸ್ಪೀಡ್ ಬಳಕೆ ಮಾಡುವುದು, ಅನಗತ್ಯವಾಗಿ ಪದೆಪದೇ ಅವೈಜ್ಞಾನಿಕವಾಗಿ ಲೇನ್ ಬದಲಿಸುವುದು, ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದರೆ ನೋಟಿಸ್ ಜಾರಿಯಾಗಲಿದೆ. ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಕೂಡಲೇ ಬಿಲ್ ಜನರೇಟ್ ಆಗಲಿದೆ. ನಂತರ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ನೋಟಿಸ್ ಜಾರಿಯಾಗಲಿದೆ. ಜೊತೆಗೆ ಅಪಘಾತದಲ್ಲಿ ಚಾಲಕನ ನಿರ್ಲಕ್ಷ್ಯ ಕಂಡು ಬಂದರೆ ಅಂತಹ ವಾಹನದ ವಿಮೆ ವಜಾಗೊಳ್ಳಲಿದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ. ಬೆಂಗಳೂರು ನಗರದ ಕೆಲವಡೆ ಮಾತ್ರವೇ ಇಂಟಲಿಜೆನ್ಸ್ ಕ್ಯಾಮೆರಾ ಅಳವಡಿಕೆಯ ವ್ಯವಸ್ಥೆ ಇದೆ. ಅದನ್ನು ಬಿಟ್ಟರೆ ಈ ಹೆದ್ದಾರಿಯಲ್ಲಿ ಮಾತ್ರ ಇಂಟಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಆನ್‌ಲೈನ್‌ನಲ್ಲೇ ವಾಹನ ಮಾಲೀಕರಿಗೆ ನೋಟಿಸ್
ಹಾಗೆಯೇ ಹೆದ್ದಾರಿಯಲ್ಲಿ ಯಾವುದೇ ಪೊಲೀಸರು ಅಡ್ಡಗಟ್ಟಿ ವಾಹನ ತಪಾಸಣೆ, ದಂಡ ವಿಧಿಸುವ ಕೆಲಸವನ್ನು ಮಾಡುವುದಿಲ್ಲ. ಬದಲಿಗೆ ನೋಟಿಸ್‌ಗಳು ಕೃತಕ ಬುದ್ದಿವಂತಿಕೆ ತಂತ್ರಜ್ಞಾನದ ನೆರವಿನೊಂದಿಗೆ ಆನ್‌ಲೈನ್ ಮೂಲಕ ವಾಹನ ಮಾಲೀಕರ ಮನೆ ಬಾಗಿಲಿಗೆ ಬರಲಿವೆ.

ಅಪಘಾತಗಳ ತಡೆಗೆ ಸೂಕ್ತ ಕ್ರಮ
ಇನ್ನು ಹೆದ್ದಾರಿಯಲ್ಲಿ ಟೋಲ್ ಕಟ್ಟಲು ಫಾಸ್ವ್ ಟ್ಯಾಗ್ ಬದಲು, ಮೊಬೈಲ್ ಆ್ಯಪ್ ಮೂಲಕ ಯಾವುದೇ ವಾಲೆಟ್‌ನಿಂದ ಆದರೂ ಹಣ ಪಾವತಿಸಬಹುದು. ಕೇವಲ ವಾಹನದ ನಂಬರ್ ಪ್ಲೇಟ್ ಸ್ಕ್ಯಾನಿಂಗ್‌ನಲ್ಲಿಯೇ ಹೈವೆಯಲ್ಲಿ ಸಂಚರಿಸಬಹುದಾಗಿದೆ. ಅಪಾಘಾತ ತಡೆ ಮಾತ್ರವಲ್ಲದೇ ಓವರ್ ಸ್ಪೀಡ್ ಕಂಟ್ರೋಲ್ ಮಾಡಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮೆರಾಗಳನ್ನು ಪ್ರತಿ 500 ಮೀಟರ್‌ಗೆ ಒಂದರಂತೆ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ.












Click it and Unblock the Notifications