ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?
ಬೆಂಗಳೂರು. ಡಿ. 10 : ದೆಹಲಿ ಟ್ಯಾಕ್ಸಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಟ್ಯಾಕ್ಸಿ ಚಾಲಕ ಮತ್ತು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ಪೊಲೀಸ್ ಆಯುಕ್ತ ಎಂ.ನ್.ರೆಡ್ಡಿ ಮತ್ತು ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ ನಗರದ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ಪಾಲಿಸಲು ತಿಳಿಸಿದ್ದಾರೆ.[ದೆಹಲಿ: ಅತ್ಯಾಚಾರಿ ಟ್ಯಾಕ್ಸಿ ಚಾಲಕ ಬಂಧನ]

ಟ್ಯಾಕ್ಸಿ ಚಾಲಕರು 250 ರೂ. ಶುಲ್ಕ ಪಾವತಿಸಿ, ಅರ್ಜಿಯೊಂದಿಗೆ ಡಿಎಲ್ ಮತ್ತು ವಿಳಾಸದ ವಿವರವನ್ನು ಪೊಲೀಸ್ ಆಯುಕ್ತರ ಕಚೇರಿಗೆ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಡಿ.31ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
25 ಮಾರ್ಗಸೂಚಿಗಳನ್ನು ನೀಡಲಾಗಿದ್ದು ನಿಯಮಗಳನ್ನು ಉಲ್ಲಂಘಿಸುವವರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಚಾಲಕರನ್ನು ನೇಮಿಸಿಕೊಳ್ಳುವಾಗ ಆತನ ಪೂರ್ವಾಪರ ತಿಳಿದುಕೊಂಡರೆ ಉತ್ತಮ. ಅವಘಡವಾದ ನಂತರ ಪಶ್ಚಾತಾಪ ಪಡಬೇಕಾದ್ದು ತಪ್ಪುತ್ತದೆ ಎಂದು ರಾಮೇಗೌಡ ಸಲಹೆ ನೀಡಿದ್ದಾರೆ.[ಬೆಂಗಳೂರು ಮಹಿಳೆಯರು ಸುರಕ್ಷಿತವೇ?]
ಪ್ರಮುಖ ಸೂಚನೆಗಳು
- ಸ್ಥಳೀಯ ಸಾರಿಗೆ ಇಲಾಖೆಗೆ ಮಾಹಿತಿ ನೀಡದೇ ಕ್ಯಾಬ್ ನ ಪ್ರಧಾನ ಕಚೇರಿ ಸ್ಥಳಾಂತರಿಸುವಂತಿಲ್ಲ.
- ವಾಹನದಲ್ಲಿ ಅಸಲಿ ಪರವಾನಗಿ ಪತ್ರ ಇಟ್ಟುಕೊಳ್ಳುವುದು ಕಡ್ಡಾಯ
- 24 ಗಂಟೆಯೂ ಪ್ರಯಾಣಕರಿಗೆ ಸೇವೆ ನೀಡಬೇಕು.
- ಪ್ರತಿ ಕ್ಯಾಬ್ ಟೆಲಿಫೋನ್ ಅಥವಾ ರೆಡಿಯೋ ಕಂಪನಿಯ ನಿಯಂತ್ರಣಾ ಕೊಠಡಿಯ ಅಧೀನದಲ್ಲಿರಬೇಕು.
- ಚಾಲಕ ಸೇರಿ 5 ಕ್ಕಿಂತ ಹೆಚ್ಚು ಜನ ಸಂಚರಿಸುವಂತಿಲ್ಲ
- ವಾಹನ ಹಳದಿ ಬಣ್ಣದಲ್ಲಿರಬೇಕು
- ಇಲಾಖೆಯ ಪರವಾನಗಿಹೊಂದಿರುವ ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಅಳವಡಿಸಿರಬೇಕು.
- ಟಿಂಟೆಡ್ ಗಾಜು ಬಳಸಲು ಅವಕಾಶವಿಲ್ಲ.
- ಚಾಲಕನಿಗೆ ಸಮವಸ್ತ್ರ ಕಡ್ಡಾಯ
- ವಾಹನದ ಮುಂದೆ ಮತ್ತು ಹಿಂದೆ ಸಿಟಿ ಟ್ಯಾಕ್ಸಿ ಎಂಬ ಬೋರ್ಡ್ ಹಾಕಿರಬೇಕು.
- ಚಾಲಕನಿಗೆ ಲಘು ವಾಹನ ಚಾಲನೆಯಲ್ಲಿ ಕನಿಷ್ಠ 2 ವರ್ಷ ಅನುಭವವಿರಬೇಕು.
- ಚಾಲಕ 10ನೇ ತರಗತಿ ತೇರ್ಗಡೆಯಾಗಿರಬೇಕು
- ಲಗೇಜ್ ಇಡಲು ವಾಹನದಲ್ಲಿ ಸೂಕ್ತ ಸ್ಥಳಾವಕಾಶವಿರಬೇಕು
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ?












Click it and Unblock the Notifications