ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮುವಾದಿ ಶಕ್ತಿ ನಿರ್ಮೂಲನೆಗೆ ಕಾಂಗ್ರೆಸ್‌ ಪ್ರತಿಷ್ಠಾಪನೆ: ಪರಮೇಶ್ವರ್‌

By Nayana
|
Google Oneindia Kannada News

ಬೆಂಗಳೂರು, ಜು.11: ಕೋಮು ಪ್ರಚೋದನೆ ನೀಡುವ, ಸಂವಿಧಾನವನ್ನೇ ಬದಲು‌ ಮಾಡುತ್ತೇನೆ ಎನ್ನುವ ಬಿಜೆಪಿಯನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್‌ನನ್ನು ಅಧಿಕಾರಕ್ಕೆ ತರುವ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.

ಬಿಜೆಪಿ ಸೋಲಿಸುವುದೇ ನಮ್ಮ ಗುರಿ : ದಿನೇಶ್ ಗುಂಡೂರಾವ್ ಘೋಷಣೆಬಿಜೆಪಿ ಸೋಲಿಸುವುದೇ ನಮ್ಮ ಗುರಿ : ದಿನೇಶ್ ಗುಂಡೂರಾವ್ ಘೋಷಣೆ

ಇಂದು ನಮ್ಮ ದೇಶ ಅಭದ್ರತೆಗೆ ಒಳಗಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಂದ ಮೇಲೆ ಸಾಮಾನ್ಯ ಪ್ರಜೆ ನೋವುಣ್ಣುತ್ತಿದ್ದಾನೆ.‌ ಮನಮೋಹನ್ ಸಿಂಗ್ ಅವರು ಆರ್ಥಿಕ‌ ಸ್ಥಿತಿಯನ್ನು ಸುಭದ್ರತೆ ಮಾಡಿದ್ದರು. ಈಗ ಈ ಭದ್ರ ಬುನಾದಿ ಅಲ್ಲಾಡುವಂತಾಗಿದೆ. ಜಿಎಸ್‌ಟಿ, ನೋಟು‌ ಅಮಾನ್ಯೀಕರಣ, ಕಪ್ಪು ಹಣ ತರುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

DCM says eradication of communal forces in the country is need of the hour

ಐದು ಬಾರಿ ಶಾಸಕರಾಗಿ, ಸಚಿವರಾಗಿ, ಯುವಕಾಂಗ್ರೆಸ್, ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಅಇರುವ ಗುಂಡೂಉರಾವ್‌ ಅವರು ಹೆಚ್ಚು ಅನುಭವ ಪಡೆದುಕೊಂಡಿದ್ದಾರೆ. ಈಶ್ವರ್ ಖಂಡ್ರೆ ಕೂಡ ಶಾಸಕರಾಗಿ ಸಚಿವರಾಗಿ ಜಿಲ್ಲಾಧ್ಯಕ್ಷರಾಗಿ ಕೆಲಸ‌ ಮಾಡಿದ್ದಾರೆ.

ಈ ಇಬ್ಬರು ಯುವನಾಯಕರು ಕೆಪಿಸಿಸಿ ನಾಯಕತ್ವ ವಹಿಸಿರುವುದು ಸಂತಸ ತಂದಿದೆ. ಅಷ್ಟೆ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ವಚು ಸ್ಥಾನ ಗೆಲ್ಲಿಸಿಕೊಂಡು ಬರಲಿದ್ದಾರೆ ಎಂಬ ವಿಶ್ವಾಸವಿದೆ. ನಮ್ಮೆಲ್ಲರ ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಶಕ್ತಿ ನಿಮಗಮಿಬ್ಬರಿಗೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ‌ ಕಟ್ಟಿ ಎಂದು ಹೇಳಿದರು.

2010ರ ಅಕ್ಟೋಬರ್ 19 ರಂದು ಸೋನಿಯಾ ಗಾಂಧಿ ಅವರು ಕರೆ ಮಾಡಿ, ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಜವಾಬ್ಧಾರಿ ಹೊತ್ತು ಪಕ್ಷ ಸಂಘಟನೆ ಮಾಡಿ ಎಂದರು. ನನಗೆ ನಂಬಲು ಆಗಲಿಲ್ಲ‌. ಈಗ ಏಳು ವರ್ಷ ಎಂಟು ತಿಂಗಳು ಆಗಿದೆ.

ಎರಡು ಬಾರಿ ವಿಧಾನಸಭೆ, ಲೋಕಸಭೆ, ಸ್ಥಳೀಯ ಚುನಾವಣೆ, ಮರುಚುನಾವಣೆಯನ್ನು ಎದುರಿಸಿ ಹಲವು ಏಳುಬೀಳು ಕಂಡಿದ್ದೇವೆ. ಲಕ್ಷಾಂತರ ಕಾರ್ಯಕರ್ತರು , ನಾಯಕರು ನನಗೆ ಸಹಕಾರ ಕೊಟ್ಟಿದ್ದಾರೆ.

ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಡಾ.ಜಿ. ಪರಮೇಶ್ವರ್ ಅವರನ್ನು ಇದೇವೇಳೆ ಸನ್ಮಾನಿಸಲಾಯಿತು.

English summary
Deputy chief minister Dr. G. Parameshwar has said eradication of communal forces from the country is need of the hour as the BJP was attempting change the constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X