ಬೆಂಗಳೂರು : ಧವನಂ ಜ್ಯುವೆಲ್ಲರ್ಸ್ ಅಂಗಡಿಗೆ ಕನ್ನ
ಬೆಂಗಳೂರು, ಆಗಸ್ಟ್ 8 : ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಧವನಂ ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಚಿನ್ನಭರಣ ದೋಚಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಶುಕ್ರವಾರ ರಾತ್ರಿ ಮೊದಲನೇ ಮಹಡಿ ಮೂಲಕ ಜ್ಯುವೆಲ್ಲರ್ಸ್‌ಗೆ ನುಗ್ಗಿರುವ ಕಳ್ಳರು ಚಿನ್ನಭರಣ ದೋಚಿ ಪರಾರಿಯಾಗಿದ್ದಾರೆ. ಶನಿವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. [ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

ಧವನಂ ಜ್ಯುವೆಲ್ಲರ್ಸ್ ಮಳಿಗೆ ಇರುವ ವಾಣಿಜ್ಯ ಸಂಕೀರ್ಣದದ ಹಲವು ಮಳಿಗೆಗಳಲ್ಲಿಯೂ ಕಳ್ಳತನವಾಗಿದೆ. ಜ್ಯುವೆಲ್ಲರ್ಸ್‌ನಲ್ಲಿನ ಒಂದು ಲಾಕರ್ ಅನ್ನು ತೆರೆದು ಚಿನ್ನ ಮತ್ತು ಬೆಳ್ಳಿಯ ಬಿಸ್ಕೆಟ್‌ಗಳನ್ನು ಕಳ್ಳರು ದೋಚಿದ್ದಾರೆ. [ಚಿನ್ನದ ದರ ಎಷ್ಟಿದೆ ಅಂಥ ಗೊತ್ತಾದ್ರೆ ಖುಷಿ ಆಗ್ತು!]
ಶನಿವಾರ ಮುಂಜಾನೆ 3 ರಿಂದ 5 ಗಂಟೆಯ ಸಮುದಲ್ಲಿ ಈ ಕಳ್ಳತನ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಿಂದೆ ಕಳ್ಳತನದಲ್ಲಿ ಪಾಲ್ಗೊಂಡಿದ್ದ ಅಪರಾಧಿಗಳೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications