Darshan Thoogudeepa: ಪೊಲೀಸರ ಕೈಸೇರಿದ ಆ ಫೋಟೋ- ದರ್ಶನ್‌ಗೆ ಎ1 ಆರೋಪಿ ಪಟ್ಟ? ಹೇಗೆ ಸಾಧ್ಯ?-ಇಲ್ಲಿದೆ ಮಾಹಿತಿ
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ದರ್ಶನ್ ವಿರುದ್ಧ ಮತ್ತೊಂದು ಸ್ಟ್ರಾಂಗ್ ಎವಿಡೆನ್ಸ್ ರೀತಿಯಲ್ಲಿ ಫೋಟೋಗಳು ಪೊಲೀಸರ ಕೈಸೇರಿದೆ. ಮಾಹಿತಿ ಇಲ್ಲಿದೆ ನೋಡಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದು, ಈ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈ ಹಿನ್ನೆಲೆ ನಟ ದರ್ಶನ್‌ಗೆ ಮತ್ತಷ್ಟು ಆತಂಕ ಎದುರಾದಂತಾಗಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಮಹತ್ವದ ಫೋಟೋವೊಂದು ಪೊಲೀಸರ ಕೈಸೇರಿದ್ದು, ಇದು ದರ್ಶನ್‌ಗೆ ಮತ್ತಷ್ಟು ಆತಂಕ ಹುಟ್ಟುಹಾಕಿದೆ.

ಪವಿತ್ರಾಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಬರ್ಬರವಾಗಿ ಹತ್ಯೆಗೈದಿದ್ದು, ಈ ಪ್ರಕರಣ ಬರೀ ರಾಜ್ಯ ಅಲ್ಲದೆ, ದೇಶದೆಲ್ಲೆಡೆ ಸದ್ದು ಮಾಡುತ್ತಲೇ ಇದೆ. ಅಲ್ಲದೆ ದಿನಕ್ಕೊಂದು ದರ್ಶನ್ ವಿರುದ್ಧ ಮಹತ್ವದ ಸಾಕ್ಷಿಗಳನ್ನು ಕೆದಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಪೊಲೀಸರ ಕೈಸೇರಿದ ಫೋಟೋಗಳು: ಇದೀಗ ಪೊಲೀಸರು ಮೊಬೈಲ್ ರಿಟ್ರೀವ್ ಮಾಡಿದ್ದು, ಸಾಯುವುದಕ್ಕೂ ಮುನ್ನ ರಕ್ತಸಿಕ್ತವಾಗಿದ್ದ ರೇಣುಕಾಸ್ವಾಮಿ ಕೈ ಮುಗಿದು ಬೇಡಿಕೊಳ್ಳುತ್ತಿರುವ 4 ಫೋಟೋಗಳು ಕೂಡ ಪೊಲೀಸರ ಕೈಸೇರಿದೆ. ಆರೋಪಿಗಳ ಮೊಬೈಲ್‌ನಿಂದ ಈ ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಇನ್ನು ಈ ಸಾಕ್ಷ್ಯವನ್ನೇ ಇಟ್ಟುಕೊಂಡು ಪೊಲೀಸರು ನಟ ದರ್ಶನ್‌ನನ್ನು ಎ2ನಿಂದ ಎ1 ಆರೋಪಿ ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಬಡ್ತಿ ನೀಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ವಿಜಯಲಕ್ಷ್ಮಿ ಟೆಂಪಲ್ ರನ್: ಇನ್ನು ಪತಿ ದರ್ಶನ್‌ಗಾಗಿ ವಿಜಯಲಕ್ಷ್ಮಿ ಇದೀಗ ಟೆಂಪಲ್ ರನ್ ಮುಂದುವರೆಸಿದ್ದು, ದೇವಸ್ಥಾನಗಳ ಪ್ರಸಾದವನ್ನು ತಂದು ದರ್ಶನ್‌ಗೆ ಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಹೊರಗಡೆ ಬರಲಿ ಎಂದು ವಿಶೇಷ ಪೂಜೆ, ವ್ರತಗಳನ್ನು ಮಾಡುತ್ತಿದ್ದಾರೆ. ಇನ್ನೂ ಕೆಲವು ಅಂಧಾಭಿಮಾನಿಗಳು ಫ್ಯಾನ್ ವಾರ್ ಮಾಡುತ್ತಾ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ನಡೆದಿವೆ.
ಜೈಲಿನಲ್ಲೇ ಮರುಗುತ್ತಿರುವ ನಟ ದರ್ಶನ್: ಇದನ್ನೆಲ್ಲ ನೆನಪಿಸಿಕೊಂದು ದರ್ಶನ್ ಕಣ್ಣೀರಿಟ್ಟು ಇದೀಗ ಮರುಗುತ್ತಿದ್ದಾರೆ. ಆದರೂ ಇದೀಗ ಪೊಲೀಸರು ಸಂಗ್ರಹ ಮಾಡಿರುವ ಸಾಕ್ಷ್ಯಗಳ ಮುಂದೆ ದರ್ಶನ್ ಹೊರಬರುವುದು ಬಹುತೇಕ ಡೌಟ್ ಎನ್ನಲಾಗುತ್ತದೆ.












Click it and Unblock the Notifications