Darshan Thoogudeepa: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು.!-ಯಾರಿಂದ?
ಬೆಂಗಳೂರು, ಫೆಬ್ರವರಿ, 23: ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಲೇ ಇವೆ. ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಶ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದ ಸುಮಾರು 35 ಮಹಿಳೆಯರು ದರ್ಶನ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ದೂರು ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿರ್ಮಾಪಕ ಉಮಾಪತಿ ಕುರಿತು ಅಸಂಬದ್ಧ ಪದ ಬಳಕೆ ಮಾಡಿದ್ದಲ್ಲದೆ ಮಹಿಳೆಯರ ಬಗ್ಗೆಯೂ ಹಗುರವಾಗು ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ನಟ ದರ್ಶನ್ ಅವರೊಬ್ಬ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಅವರನ್ನು ನೋಡಿ ಕಲಿಯಬೇಕಾದವರು ತುಂಬಾ ಜರಿದ್ದಾರೆ. ಅವರೊಬ್ಬ ಸೆಲೆಬ್ರಿಟಿಯಾಗಿ ಈ ರೀತಿ ಮಾತನಾಡುವುದು ನನಗೆ ತುಂಬಾ ನೋವಾಗಿದೆ. ದಯವಿಟ್ಟು ದರ್ಶನ್ ಅವರು ಇನ್ಮೇಲೆ ತಿದ್ದಿಕೊಂಡು, ಯಾವ ಸಭೆ ಸಮಾರಂಭಗಳಲ್ಲಿ ಮಾತನಾಡುವಾಗ ಆದರೂ, ಅವಳು, ಇವಳು ಎಂದು ಮಹಿಳೆಯರ ಕುರಿತು ಕೀಳಾಗಿ ಮಾತನಾಡಬೇಡಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ದಿ ಹಿಂದೂಸ್ಥಾನ್ ಗ್ಯಾಜೆಟ್ಟೆಯಲ್ಲಿ ವರದಿಯಾಗಿದೆ.
ನಿಮ್ಮನ್ನು ಹೆತ್ತಿದ್ದೂ ಕೂಡ ಓಬ್ಬರು ತಾಯಿ.. ನಿಮ್ಮ ಅಕ್ಕ ಕೂಡ ಹೆಣ್ಣು.. ಆ ಹೆಣ್ಣನ್ನು ಮರೆತು ಪ್ರತಿ ಸಭೆಯಲ್ಲೂ ಹೆಣ್ಣನ್ನು ಬರುತ್ತಾಳೆ ಹೋಗುತ್ತಾಳೆ ಎಂದು ಮಾತಾಡುವ ಮಾತು ಸರಿಯಲ್ಲ. ದಯವಿಟ್ಟು ತಿದ್ದಿಕೊಳ್ಳಿ. ಈ ರೀತಿ ಮುಂದೆ ಮಾತನಾಡಿದರೆ ಉಗ್ರ ಹೋರಾಟ ಮಾಡಬೆಕಾಗುತ್ತದೆ ಎಂದು ಮಹಿಳೆಯರೊಬ್ಬರು ಎಚ್ಚರಿಕೆ ನೀಡಿದ್ದಾರೆ ಅಂತಾ ವರದಿಯಾಗಿದೆ.
ಇನ್ನು ಇದೇ ವಿಚಾರವಾಗಿ ನಿನ್ನೆ (ಫೆಬ್ರವರಿ 22) ಫಿಲಂ ಚೇಂಬರ್‌ಗೆ ದೂರು ಸಲ್ಲಿಸಲಾಗಿತ್ತು. ಅಲ್ಲದೆ ಗೌಡ್ತಿ ಸಂಘಟನೆಗಳಿಂದ ಸಹ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಇದೀಗ ಮತ್ತೊಂದು ದೂರು ದಾಖಲಾಗಿರುವುದರಿಂದ ನಟ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಹಾಗಾದರೆ ಇದಕ್ಕೆ ದರ್ಶನ್ ಅವರು ಪ್ರತಿಕ್ರಿಯೆ ಹೇಗಿರುತ್ತೆ ಹಾಗೂ ಪೊಲೀಸರು ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications