Darshan: ನಟ ದರ್ಶನ್ ಆಪ್ತ ನಟ ಧನ್ವೀರ್‌ಗೆ ತಪ್ಪದ ಸಂಕಷ್ಟ, ವೈರಲ್ ವಿಡಿಯೋ ಕೇಸ್‌ಗೆ ಟ್ವಿಸ್ಟ್!
Darshan Thoogudeepa ನಟ ದರ್ಶನ್ ತೂಗುದೀಪ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್‌ಗೆ ಹೊಸ ಸಂಕಷ್ಟ ಎದುರಾಗಿದೆ. ನಟ ದರ್ಶನ್ ಅವರ ಡೆವಿಲ್ ಸಿನಿಮಾ ಸಂಭ್ರಮಾಚರಣೆಯಲ್ಲಿ ಅವರ ಆಪ್ತರು ಹಾಗೂ ಅಭಿಮಾನಿಗಳು ಇದ್ದಾರೆ. ಆದರೆ ಈ ರೀತಿ ಇರುವಾಗಲೇ ಅವರ ಆಪ್ತರ ಬಳಗದಲ್ಲಿ ಸಂಕಷ್ಟವೊಂದು ತಲೆದೂರಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂದಿ ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡುತ್ತಿದ್ದ ಐಷಾರಾಮಿ ಸೇವೆಯ ಬಗ್ಗೆ ವಿಡಿಯೋಗಳು ವೈರಲ್ ಆಗಿದ್ದವು, ಇದೀಗ ಈ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.
ದರ್ಶನ್ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಕರ್ಯ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿರುವಾಗಲೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಚಾಣಾಧೀನ ಕೈದಿಗಳಿಗೆ ನೀಡಲಾಗಿದ್ದ ವಿಶೇಷ ಆತಿಥ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ದರ್ಶನ್ ಅವರ ಆಪ್ತ ಧನ್ವೀರ್ ಅವರು ಸಾಕ್ಷ್ಯ ನಾಶಪಡಿಸಿರುವ ಅನುಮಾನ ಶುರುವಾಗಿದೆ. ಈ ರೀತಿ ಮಾಡಿದ್ದರೆ ಕೇಸ್ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.

ಜೈಲಿನ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಧನ್ವೀರ್ ಅವರ ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ನಟ ಧನ್ವೀರ್ ಪೋನ್‌ನಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಡೆಟಾ / ದತ್ತಾಂಶ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಡೆಟಾ ಇಲ್ಲದ ಹೊಸ ಮೊಬೈಲ್ ಕೊಟ್ಟು ತನಿಖೆಯ ದಿಕ್ಕು ತಪ್ಪಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು "ಪ್ರಜಾವಾಣಿ" ವರದಿ ಮಾಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮಾಂಸ, ಮದ್ಯ ಸೇವಿಸಿ ನೃತ್ಯ ಮಾಡುತ್ತಿದ್ದ ಹಾಗೂ ಐಷಾರಾಮಿ ಜೀವನ ನಡೆಸುತ್ತಿರುವ ವಿಡಿಯೊ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಈ ಪ್ರಕರಣದಿಂದ ಸರ್ಕಾರವು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಆಗಿತ್ತು. ಆ ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿರುವ ಆರೋಪ ನಟ ಧನ್ವೀರ್ ಅವರ ಮೇಲಿದ್ದು, ಧನ್ವೀರ್ ಎರಡು ಬಾರಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಮುಂದುವರಿದ ಮೊಬೈಲ್ ಪರಿಶೀಲನೆ: ಪರಪ್ಪನ ಅಗ್ರಹಾರದ ಜೈಲಿನ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜಪ್ತಿ ಮಾಡಿದ್ದ ಮೊಬೈಲ್ ಅನ್ನು ಡೆಟಾ ಸಂಗ್ರಹಣೆಗಾಗಿ ಸೈಬರ್ ಸೆಲ್‍ನ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆದರೆ ತನಿಖೆಗೆ ಒಳಪಡಿಸಲಾಗಿದ್ದ ಮೊಬೈಲ್‌ನಲ್ಲಿ ಯಾವುದೇ ಡೆಟಾ ಇರುವುದು ಪತ್ತೆ ಆಗಿಲ್ಲ ಎಂದು ಹೇಳಲಾಗಿದೆ.












Click it and Unblock the Notifications