ಮಾತಿಲ್ಲ ಕಥೆಯಿಲ್ಲ: ಜೈಲಿನಲ್ಲಿ ದರ್ಶನ 'ಅನಾಥ'ರು

ಸದಾ ಅಕ್ಕ ಪಕ್ಕದಲ್ಲಿ ಅಭಿಮಾನಿಗಳು.. ಕೇಳಿದಾಗ ಬೇಕಿದ್ದನ್ನು ಕೊಡುವ ಆಳುಗಳು.. ಐಶಾರಾಮಿ ಜೀವನ.. ಹೋದಲ್ಲಿ ಬಂದಲ್ಲಿ ಹಾರ, ತುರಾಯಿ, ಘೋಷಣೆಗಳು.. ಊಟಕ್ಕೆ ಇಷ್ಟದ ಆಹಾರ.. ರಾತ್ರಿ ಆಗುತ್ತಿದ್ದಂತೆ ಮತ್ತು.. ಬಣ್ಣ ಬಣ್ಣದ ಬಟ್ಟೆಗಳು.. ಕಾಸ್ಟಲಿ ಲೈಫ್‌ ಸ್ಟೈಲ್‌.. ಐಶಾರಾಮಿ ಕಾರ್‌ಗಳು.. ದೊಡ್ಡ ದೊಡ್ಡ ಬಂಗಲೆ.. ಕಣ್ಣಿಗೆ ಸಾಕುವೆನ್ನಿಸುವಷ್ಟು ಬೆಳಕು.. ಕಣ್ಣು ಹಾಯಿಸಿದ ಕಡೆ ಕ್ಯಾಮೆರಾ..

ಇವುಗಳನ್ನೇ ನೋಡಿ ಅಭ್ಯಾಸವಾಗಿದ್ದ ನಟ ದರ್ಶನ್‌ಗೆ ಈಗ ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಟೈಮ್ ಹಿಡಿಯುತ್ತಿದೆ. ಐಶಾರಾಮಿ ಜೀವನಕ್ಕೆ ದಾಸನಾಗಿದ್ದ ದರ್ಶನ್‌, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧಿನ ಖೈದಿ.

Darshan Actor Maintains Silence During Incarceration

ನಟನಿಗೆ ಈ ವಾತವರಣ ನೋಡಿದ ಮೇಲೆ ಮಾತುಗಳೇ ಬರುತ್ತಿಲ್ಲ. ಬರೀ ದೊಡ್ಡ ದೊಡ್ಡ ಡೈಲಾಗ್‌ಗಳನ್ನು ಹೇಳುತ್ತಾ, ಜನರನ್ನು ರಂಜಿಸಿ ಖುಷಿ ಪಡ್ತಾ ಇದ್ದ ದರ್ಶನ್‌, ಈಗ ಮೌನಿ. ಇವರಿಗೆ ಈಗ ತಾನು ಮಾಡಿದ ಸಾಧನೆ ಎಲ್ಲ ನಶ್ವರ ಎನ್ನುವಂತಾಗಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ಯಾರೊಂದಿಗೆಯೂ ಮಾತನಾಡುತ್ತಿಲ್ಲ ಎಂದು ತಿಳಿದು ಬಂದಿದೆ.

ಭದ್ರತಾ ಕೊಠಡಿಯಲ್ಲಿರುವ

ಇನ್ಸ್‌ಪೆಕ್ಟರ್‌ ಸೇರಿದಂತೆ ಮೂರು ಸಿಬ್ಬಂದಿಯಿಂದ ಆಯೋಜಿಸಲಾದ ಭದ್ರತಾ ಕೋಟೆಯಲ್ಲಿ ದರ್ಶನ್‌ ಅವರನ್ನು ಇರಿಸಲಾಗಿದೆ. ಅಲ್ಲದೆ ಯಾರ ಭೇಟಿಗೂ ಅವಕಾಶವಿಲ್ಲ. ಇನ್ನು ದರ್ಶನ್‌ ತನ್ನ ಸಹಚರರ ಜೊತೆಯೂ ಮಾತನಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಪರಪ್ಪನ ಅಗ್ರಹಾಹರದ ನಾಲ್ಕು ಗೊಡೆಗಳ ಜೊತೆ ದರ್ಶನ್‌ ಮೌನ ಸಂವಾದ ನಡೆಸುತ್ತಿದ್ದಾರೆ. ಯಾರ ಮುಂದೆಯೂ ದರ್ಶನ್‌ ತನ್ನ ನೋವನ್ನು ತೋಡಿಕೊಳ್ಳುತ್ತಿಲ್ಲ. ಅಲ್ಲದೆ ಸಪ್ಪೆ ಮುಖ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಐಶಾರಾಮಿ ಜೀವನ ನಡೆಸಿರುವ ನಟ, ರೀಲ್‌ ಲೈಫ್‌ನಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದರು. ಆದರೆ ಈಗ ನಿಜ ಜೀವನದಲ್ಲೂ ಈ ಸನ್ನಿವೇಶಗಳನ್ನು ಎದುರಿಸುವಂತಾಗಿದೆ.

Darshan Actor Maintains Silence During Incarceration

ಮಾಹಿತಿಗಳ ಪ್ರಕಾರಣ ದರ್ಶನ್‌ ಊಟವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಸರಿಯಾಗಿ ನಿದ್ರೆ ಸಹ ಆಗುತ್ತಿಲ್ಲವಂತೆ. ದರ್ಶನ್‌ ಯಾರೊಂದಿಗೂ ಏನು ಮಾತನಾಡುತ್ತಿಲ್ಲ ಎಂದು ತಿಳಿದು ಬಂದಿದೆ.

ಸೋಮವಾರ ಕುಟುಂಬಸ್ಥರನ್ನು ದರ್ಶನ್‌ ಭೇಟಿ ಆಗಿದ್ದಾರೆ ಎಂಬ ಮಾಹಿತಿ ಇದೆ. ಮಗನನ್ನು ತಬ್ಬಿಕೊಂಡು ನಟ ಕಣ್ಣೀರು ಹಾಕಿದ ಬಗ್ಗೆ ಮಾಹಿತಿ ಸಿಕ್ಕಿದೆ. ನಟ ವಿನೋದ್ ಪ್ರಭಾಕರ್ ದರ್ಶನ್‌ ರನ್ನು ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ವಿನೋದ್‌, ದರ್ಶನ್‌ರನ್ನು ಭೇಟಿಯಾಗಿ ನಾಲ್ಕು ತಿಂಗಳು ಆಗಿತ್ತು. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

ದರ್ಶನ್‌ ಬಂಧನ ಏಕೆ?

ನಟ ದರ್ಶನ್‌ ಚಿತ್ರದುರ್ಗದ ರೇಣುಕಾದ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್‌ 11 ರಂದು ಮೈಸೂರಿನಲ್ಲಿ ಬಂಧನವಾಗಿದ್ದಾರೆ. ರೇಣುಕಾಸ್ವಾಮಿ, ದರ್ಶನ್‌ ಪ್ರೇಯಸಿ ಪವಿತ್ರಾ ಗೌಡ್‌ರಿಗೆ ಸಾಮಾಜಿಕ ತಾಣದಲ್ಲಿ ಅಸಭ್ಯ ಮೆಸೇಜ್‌ ಮಾಡಿದ್ದ ಎಂಬ ಆರೋಪವಿದ್ದು, ಆತನನ್ನು ತನ್ನ ಅಭಿಮಾನಿಗಳ ಮುಖಾಂತರ ಕರೆಸಿಕೊಂಡು ದರ್ಶನ್‌ ಪಟ್ಟಣಗೆರೆ ಶೆಡ್ಡನಲ್ಲಿ ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೆ ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆಯಾದ ಮೇಲೆ, ಶವ ವಿಲೇವಾರಿ ಹಾಗೂ ತನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಬಾರದು ಎಂದು ದರ್ಶನ್‌ ಸಹಚರರಿಗೆ ಹಣದ ಆಮೀಷವನ್ನು ಒಡ್ಡಿದ್ದರು. ಸದ್ಯ ದರ್ಶನ್‌ ಜುಲೈ 3ರ ವರೆಗೆ ಪರಪ್ಪನ ಅಗ್ರಹಾರದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+