ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಲ್ಲ ನಾಳೆ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಬರಲೇಬೇಕು!

ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಶ್ವಥನಾರಾಯಣ ಅವರ ಮುಂದೆ ಶರಣಾಗಲು ಬರಬೇಕಿದೆ.

By Mahesh
|
Google Oneindia Kannada News

ಚೆನ್ನೈ, ಫೆಬ್ರವರಿ 14: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ಹಾಗೂ ಇನ್ನಿಬ್ಬರನ್ನು ಅಪರಾಧಿಗಳೆಂದು ಸುಪ್ರೀಂ ಕೋರ್ಟ್‌ ಮಂಗಳವಾರ (ಫೆಬ್ರವರಿ 14) ಘೋಷಿಸಿದೆ. ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಶ್ವಥನಾರಾಯಣ ಅವರ ಮುಂದೆ ಶರಣಾಗಲು ಬರಬೇಕಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಅಶ್ವತ್ಥ್ ನಾರಾಯಣ್ ಮುಂದೆ ಶರಣಾದ ಬಳಿಕ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗುವುದು. [ಪರಪ್ಪನ ಅಗ್ರಹಾರದ ಸುತ್ತಮುತ್ತ ಮತ್ತೆ ತಮಿಳರ ಕಲರವ ಶುರು?]

ಸೆಷನ್ಸ್ ನ್ಯಾಯಾಧೀಶರಾಗಿರುವ ಅಶ್ವತ್ಥ್ ನಾರಾಯಣ್ ಅವರು ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ(ಸದ್ಯಕ್ಕೆ ಈ ಹುದ್ದೆ ಖಾಲಿ ಇದೆ) ರೂ ಆಗಿದ್ದಾರೆ.[ಪರಪ್ಪನ ಅಗ್ರಹಾರ ಜೈಲಿಗೆ ಹೆಚ್ಚಿದ ಭದ್ರತೆ]

ವಿಳಂಬವಾಗಲಿದೆ: ಎಐಎಡಿಎಂಕೆ ಅಧಿನಾಯಕಿ ಶಶಿಕಲಾಗೆ ಜೈಲು ಶಿಕ್ಷೆ ವಿಧಿಸಿದ್ದರೂ, ಅವರು ವಿಶೇಷ ನ್ಯಾಯಾಲಯದ ಮುಂದೆ ಶರಣಾಗತಿ ವಿಳಂಬವಾಗಲಿದೆ. ಆನಾರೋಗ್ಯದ ಕಾರಣ ನಾಲ್ಕು ವಾರಗಳ ಕಾಲ ಕಾಲಾವಕಾಶ ಕೋರಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯನ್ನು ಶಶಿಕಲಾ ಪರ ವಕೀಲರು ಸಲ್ಲಿಸಿದ್ದಾರೆ. [LIVE: ಶರಣಾಗತಿಗೆ ಕಾಲಾವಕಾಶ ಕೋರಿದ ಶಶಿಕಲಾ ನಟರಾಜನ್]

ಮೂರೂವರೆ ವರ್ಷ ಶಿಕ್ಷೆ

ಮೂರೂವರೆ ವರ್ಷ ಶಿಕ್ಷೆ

ಶಶಿಕಲಾ ಅವರು ಈಗಾಗಲೇ ಈ ಪ್ರಕರಣದಲ್ಲಿ 2014ರ ಅವಧಿಯಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಆರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರಿಂದ ಈಗ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ. ಜತೆಗೆ ಇತರೆ ಆರೋಪಿಗಳ ಜತೆ ಸೇರಿ ತಲಾ 10 ಕೋಟಿ ರು ದಂಡ ತೆರಬೆಕಿದೆ.

ಜೈಲು ದರ್ಶನ ಭಾಗ್ಯ

ಜೈಲು ದರ್ಶನ ಭಾಗ್ಯ

ಈ ಹಿಂದೆ 2014ರ ಏಪ್ರಿಲ್ ತಿಂಗಳಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ನ್ಯಾ. ಮೈಕಲ್ ಡಿ ಕುನ್ಹಾ ಅವರ ಮುಂದೆ ಜಯಲಲಿತಾ ಸೇರಿದಂತೆ ನಾಲ್ವರು ಆರೋಪಿಗಳು ಹಾಜರಾಗಿದ್ದರು. ನಂತರ ಎಲ್ಲರಿಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು. ಈಗ ಮತ್ತೊಮ್ಮೆ ವಿಶೇಷ ನ್ಯಾಯಾಲಯದ ಜಡ್ಜ್ ಮುಂದೆ ಹಾಜರಾಗುತ್ತಿದ್ದು, ಮತ್ತೊಮ್ಮೆ ಪರಪ್ಪನ ಅಗ್ರಹಾರ ಸೇರಬೇಕಿದೆ.

 ಈ ಹಿಂದೆ ಕೈದಿ ನಂಬರ್ ಹೀಗಿತ್ತು

ಈ ಹಿಂದೆ ಕೈದಿ ನಂಬರ್ ಹೀಗಿತ್ತು

ಪರಪ್ಪನ ಅಗ್ರಹಾರ ಜೈಲು ಪಾಲಾದ ಜಯಲಲಿತಾಗೆ ಕೈದಿ ನಂಬರ್ 7402, ಶಶಿಕಲಾ 7403, ಇಳವರಸಿ ಕೈದಿ ನಂಬರ್ 7404 ಹಾಗೂ ಸುಧಾಕರನ್ 7405 ನಂಬರ್ ಸಿಕ್ಕಿತ್ತು. ಈಗ ನಂಬರ್ ಬದಲಾದ್ರೂ ವಿಶೇಷ ಸೆಲ್ ಸಿಗುವುದು ಖಾತ್ರಿಯಾಗಿದೆ. ಜಯಾರಂತೆ ಪ್ರತ್ಯೇಕ ಊಟದ ವ್ಯವಸ್ಥೆಗೆ ಶಶಿಕಲಾ ಅವರು ಕೋರಿಕೆ ಸಲ್ಲಿಸಬಹುದಾಗಿದೆ. ಈಗಾಗಲೇ ಕೆಲ ಬೆಂಬಲಿಗರು ಜೈಲಿನ ಸುತ್ತಾ ಕಂಡು ಬಂದಿದ್ದಾರೆ

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಕುನ್ಹಾ

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಕುನ್ಹಾ

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಕುನ್ಹಾ ಅವರು ಹೈಕೋರ್ಟ್ ನ್ಯಾಯಾಧೀಶರಾದ ಬಳಿಕ ವಿಶೇಷ ನ್ಯಾಯಾಲಯಕ್ಕೆ ಜಡ್ಜ್ ನೇಮಕಾತಿ ನಡೆದಿಲ್ಲ. ಸೆಷನ್ಸ್ ಕೊರ್ಟ್ ನ್ಯಾಯಾಧೀಶರೇ ಉಸ್ತುವಾರಿ ವಹಿಸಿಕೊಂಡಿದ್ದಾರೆ.

2014ರ ನಂತರದ ಘಟನಾವಳಿಯಲ್ಲಿ ಜಯಲಲಿತಾ ಜಾಮೀನು ಪಡೆದರು, ಮತ್ತೆ ಸಿಎಂ ಆದರು, ಕಳೆದ ವರ್ಷ ಅನಾರೋಗ್ಯ ಪೀಡಿತರಾಗಿ ಜಯಲಲಿತಾ ಅಸುನೀಗಿದರು. ಶಶಿಕಲಾ ಅವರು ಸಿಎಂ ಆಗಲು ಆಸೆ ಪಟ್ಟರು, ಫೆಬ್ರವರಿ 14ರಂದು ಸುಪ್ರೀಂಕೋರ್ಟಿನಿಂದ ಬಂದ ತೀರ್ಪು ರಾಜಕೀಯ ಭವಿಷ್ಯಕ್ಕೆ ಮಾರಕವಾಯಿತು.

English summary
Jayalalithaa's close confidante Sasikala Natarajan, Sasikala's nephew Sudhakaran and her sister-in-law Ilavarasi all convicted in DA Case will be appearing before Sessions court Judge Ashwathnarayana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X