ತುರಹಳ್ಳಿ ಅರಣ್ಯದಲ್ಲಿ ಸೈಕ್ಲಿಂಗ್ ನಿಷೇಧ, ಇಲ್ಲಿದೆ ಕಾರಣ

ಬೆಂಗಳೂರು, ಮೇ 13: ಇಡೀ ಬೆಂಗಳೂರಲ್ಲೇ ಸೈಕ್ಲಿಂಗ್‌ಗೆ ಹೇಳಿ ಮಾಡಿಸಿದ ಜಾಗವೆಂದರೆ ಅದು ತುರಹಳ್ಳಿ ಅರಣ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ಏಕಾಏಕಿ ಅರಣ್ಯ ಪ್ರದೇಶದೊಳಗೆ ಸೈಕ್ಲಿಂಗ್ ನಿಷೇಧಿಸುವ ಕುರಿತು ಅರಣ್ಯಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲೂ ಕೂಡ ಕಾರಣವಿದೆ.

ಇತ್ತೀಚೆಗೆ ಬಂಡೀಪುರ ಅರಣ್ಯದಲ್ಲಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿ ನೂರಾರು ಪ್ರಾಣಿಗಳನ್ನು ಸಜೀವ ದಹನ ಮಾಡಿತ್ತು. ಇದಾದ ಬಳಿಕವೂ ಇನ್ನೂ ಹಲವು ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

Cycling ban inside Turahalli forest

ಒಂದೊಮ್ಮೆ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂದೊಮ್ಮೆ ಸೈಕ್ಲಿಂಗ್ ಗೆ ಅವಕಾಶ ನೀಡಿದರೆ ಅರಣ್ಯವೂ ಬೆಂಕಿಗಾಹುತಿಯಾಗುವ ಆತಂಕ ವ್ಯಕ್ತಪಡಿಸಿರುವ ಅರಣ್ಯ ಅಧಿಕಾರಿಗಳು ಸೈಕ್ಲಿಂಗ್ ನಿಷೇಧಿಸುವ ಕುರಿತು ನಿರ್ಧಾರ ತೆಗೆದುಕೊಂಡಿದ್ದಾರೆ.

ತುರಹಳ್ಳಿ ಅರಣ್ಯ ಕೇವಲ ಸೈಕ್ಲಿಂಗ್ ಮಾತ್ರವಲ್ಲದೆ ಪಕ್ಷಿ ವೀಕ್ಷಣೆಗೂ ಕೂಡ ಸೂಕ್ತ ಜಾಗವಾಗಿದೆ. ಕನಕಪುರ ರಸ್ತೆಯಿಂದ ಬಲಕ್ಕೆ 2.3 ಕಿ.ಮೀ ದೂರ ಹಾಗೂ ಬನಶಂಕರಿಯಿಂದ 13 ಕಿ.ಮೀ ದೂರದಲ್ಲಿ ಈ ಅರಣ್ಯ ಇದೆ.

ಬೆಂಗಳೂರಲ್ಲಿ ಕಟ್ಟಕಡೆಯದಾಗಿ ಉಳಿದುಕೊಂಡಿರುವ ಏಕೈಕ ಅರಣ್ಯ ಪ್ರದೇಶವೆಂದರೆ ಅದು ತುರಹಳ್ಳಿ ಅರಣ್ಯ. ಅಲ್ಲಿನ ಸ್ಥಳೀಯರು, ಅರಣ್ಯ ನಡಿಗೆದಾರರ ಸಂಘ ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+