ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಖದೀಮರು ದೋಚಿದ್ದು 104 ಕೋಟಿ: ರಿಕವರಿಯಾಗಿದ್ದು 15 ಕೋಟಿ ಯಾಕೆ ?

|
Google Oneindia Kannada News

ಬೆಂಗಳೂರು, ಜೂನ್ 30: ಜನರು ಬೆರಳ ತುದಿಯಲ್ಲೇ ಬ್ಯಾಂಕ್ ವ್ಯವಹಾರವನ್ನು ನಿಭಾಯಿಸೋಕೆ ಪ್ರಾರಂಭಿಸಿ ಬಹಳ ವರ್ಷಗಳೇ ಕಳೆದಿವೆ. ಮೊಬೈಲ್‌ನಲ್ಲೇ ಕ್ಷಣಮಾತ್ರದಲ್ಲಿ ಲಕ್ಷ ಲಕ್ಷ ಹಣವನ್ನು ವ್ಯವಹರಿಸುವಷ್ಟು ಡಿಜಿಟಲಿಕರಣವಾಗಿದೆ. ಇದೇ ಸೈಬರ್ ಕಳ್ಳರ ಪಾಲಿಗೆ ಸ್ವರ್ಗವಾಗಿರುವುದು.

ಸೈಬರ್ ಅಪರಾಧಗಳಿಗೆ ಕಡಿವಾಣ ಪೊಲೀಸರಿಗೆ ಸವಾಲಾಗಿದ್ದು. ವರ್ಷದಿಂದ ವರ್ಷಕ್ಕೆ‌ ಬೆಂಗಳೂರು ಮಹಾನಗರದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ. ವಿವಿಧ ಆಸೆ-ಅಮಿಷವೊಡ್ಡಿ ಮುಗ್ದ ಜನರನ್ನು ನಂಬಿಸಿ ಸೈಲೆಂಟ್ ಆಗಿಯೇ ಕೋಟ್ಯಂತರ ರೂ‌ಪಾಯಿ ಹಣವನ್ನು ಆನ್‌ಲೈನ್‌ ಖದೀಮರು ಕರಗತ ಮಾಡಿಕೊಂಡಿದ್ದಾರೆ. ಇಂತಹ ಸ್ಮಾರ್ಟ್ ಕ್ರೈಂಗೆ ತಕ್ಕಮಟ್ಟಿಗಾದರೂ ತಹಬದಿ ಹಾಕಲು ಜಾರಿ ತಂದಿದ್ದ ಗೋಲ್ಡನ್ ಅವಾರ್ಸ್ ಯೋಜನೆ ಫಲಪ್ರದವಾಗಿದೆ.

ಬೆಂಗಳೂರು: 150 ದಿನಗಳಲ್ಲಿ 200 ಕೋಟಿ ಹಣ ಸೈಬರ್ ವಂಚನೆ! ಬೆಂಗಳೂರು: 150 ದಿನಗಳಲ್ಲಿ 200 ಕೋಟಿ ಹಣ ಸೈಬರ್ ವಂಚನೆ!

ಸಾಮನ್ಯ ಜನರ ನಂಬಿಕೆಯನ್ನೆ ಬಂಡವಾಳ ಮಾಡಿಕೊಳ್ಳುವ‌ ವಂಚಕರು ಕೂತ ಜಾಗದಲ್ಲಿಯೇ ತಂತ್ರಜ್ಞಾನ ನೆರವಿನಿಂದ ಕೋಟ್ಯಂತರ‌ ರೂಪಾಯಿ ಎಗರಿಸುತ್ತಿದ್ದಾರೆ. ‌‌ಇದಕ್ಕೆ ಬ್ರೇಕ್ ಹಾಕಲು‌‌ ಪೊಲೀಸ್ ಆಯುಕ್ತರಾಗಿದ್ದ ಕಮಲ್‌ ಪಂತ್ ಅವರು 2020ರಲ್ಲಿ ಗೋಲ್ಡನ್ ಅವಾರ್ಸ್ ಯೋಜನೆ ಜಾರಿ ತಂದಿದ್ದರು.

‌‌ಹಣ‌‌ ಕಳೆದುಕೊಂಡ ಜನರು‌ ಕೂಡಲೇ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ವಿವರ ಸಂಗ್ರಹಿಸಿ ಸಂಬಂಧಪಟ್ಡ ಬ್ಯಾಂಕ್ ಗಳಿಗೆ‌ ಕಳುಹಿಸಿ ಅಲ್ಲಿಂದ ವರ್ಗಾವಣೆಯಾದ ಖದೀಮರ ಬ್ಯಾಂಕ್ ಅಕೌಂಟ್ ಜಪ್ತಿ ಮಾಡುವುದೇ ಯೋಜನೆ ಉದ್ದೇಶವಾಗಿದೆ.

2020ರ ಡಿಸೆಂಬರ್ ನಲ್ಲಿ ಜಾರಿಯಾಗಿದ್ದ ಈ ಯೋಜನೆಯು ಇದುವರೆಗೂ 12,126‌ ದೂರುಗಳು ಬಂದಿದೆ. ಈ ಪೈಕಿ 11,200 ದೂರುಗಳನ್ನು‌ ಇತ್ಯರ್ಥ ಮಾಡಲಾಗಿದ್ದು 904 ದೂರುಗಳು ತನಿಖಾ ಹಂತದಲ್ಲಿವೆ.

ಯೋಜನೆ ವೇಗಕ್ಕೆ‌ ಸ್ಪಂದಿಸುತ್ತಿಲ್ಲ ಬ್ಯಾಂಕರ್ಸ್ ಗಳು

ಯೋಜನೆ ವೇಗಕ್ಕೆ‌ ಸ್ಪಂದಿಸುತ್ತಿಲ್ಲ ಬ್ಯಾಂಕರ್ಸ್ ಗಳು

112ಗೆ ಕರೆಯನ್ನು ಮಾಡಿ ದೂರುಗಳ ಆಧಾರದಲ್ಲಿ 104 ಕೋಟಿ ಹಣ‌ ಕಳೆದುಕೊಂಡಿದ್ದು ಇದರಲ್ಲಿ 15 ಕೋಟಿ ರೂ.ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ‌ ಮುಕ್ತಾಯ ಬಳಿಕ‌ ವಾರಸುದಾರರು ಕೋರ್ಟ್ ಗೆ ಸೂಕ್ತ ದಾಖಲಾತಿ ನೀಡಿ ಹಣ ಪಡೆದುಕೊಳ್ಳಬಹುದಾಗಿದೆ.

ಹಣ ಕಳೆದುಕೊಂಡವರು 112 ಮೂಲಕ ಮಾಹಿತಿ ನೀಡಿದರೆ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ನಲ್ಲಿ‌ ಪ್ರತ್ಯೇಕವಾಗಿ ಸೈಬರ್ ಕ್ರೈಂ ಇನ್ಸಿಡೆಂಟ್ ರಿಪೋರ್ಟ್ (ಸಿಸಿಇಆರ್) ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಮಾಹಿತಿ ಸಂಗ್ರಹಿಸಿ ಬಂದ ದೂರನ್ನು ಕೂಡಲೇ ಸಂಬಂಧ‌ಪಟ್ಟ ಬ್ಯಾಂಕಿಗೆ ಈಮೇಲ್‌‌ ಮುಖಾಂತರ ಮಾಹಿತಿ ನೀಡುತ್ತೇವೆ. ಬಂದ ದೂರನ್ನ ಬ್ಯಾಂಕ್ ಅಧಿಕಾರಿಗಳು‌ ಖಚಿತಪಡಿಸಿಕೊಂಡ ಬಳಿಕ‌‌ ಆರೋಪಿಗಳ ಬ್ಯಾಂಕ್ ಖಾತೆಯನ್ನು ಸಿಬ್ಬಂದಿ‌ ವಂಚಿಸಿದ್ದ ಹಣವಷ್ಟೇ ಮಾತ್ರ ಮುಟ್ಟುಗೋಲು‌ ಹಾಕಿಕೊಳ್ಳುತ್ತೇವೆ.

ಎಗರಿಸಿದ್ದು 104 ಕೋಟಿ ರಿಕವರಿ 15 ಕೋಟಿ

ಎಗರಿಸಿದ್ದು 104 ಕೋಟಿ ರಿಕವರಿ 15 ಕೋಟಿ

ಈವರೆಗೆ ಬಂದಿದ್ದ ದೂರುಗಳ ಆಧಾರದ ಮೇರೆಗೆ 104 ಕೋಟಿ ಹಣ ಕಳೆದುಕೊಂಡಿದ್ದು ಈ ಪೈಕಿ 15 ಕೋಟಿಯನ್ನು ಫ್ರೀಜ್ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ದೊಡ್ಡ ಮಟ್ಟದಲ್ಲಿ ಸೈಬರ್ ಖದೀಮರ ಪಾಲಾಗುವ ಹಣದ ವರ್ಗಾವಣೆ ತಡೆಯಬಹುದಾಗಿದೆ ಎನ್ನುತ್ತಾರೆ ಎಂದು ಪೊಲೀಸ್‌ ಅಧಿಕಾರಿಗಳು.

ದಿನಕ್ಕೆ ಅಂದಾಜು 25 ಲಕ್ಷ ಮೋಸ

ದಿನಕ್ಕೆ ಅಂದಾಜು 25 ಲಕ್ಷ ಮೋಸ

ಪ್ರತಿ ದಿನ ಸುಮಾರು 20ರಿಂದ 30 ಕರೆಗಳು ಬರಲಿದ್ದು ಅಂದಾಜು‌‌ ದಿನಕ್ಕೆ‌ 25 ಲಕ್ಷ ತನಕ ಹಣ ಕಳೆದುಕೊಂಡಿರುವುದಾಗಿ ಸಾರ್ವಜನಿಕರು ದೂರು ನೀಡುತ್ತಾರೆ. ದೂರು ನೀಡಿದ ಮೇರೆಗೆ ಸಂಬಂಧಪಟ್ಟ ಬ್ಯಾಂಕಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ವೇಗವಾಗಿ ಪರಿಶೀಲಿಸಿ ಬ್ಯಾಂಕ್ ಖಾತೆ ಸೀಜ್ ಮಾಡಿದರೆ ಖದೀಮರು ದೋಚಿದ್ದ ಹಣ ಸಿಗದಂತೆ ಮಾಡಬಹುದು. ಇದಕ್ಕೆ ಪ್ರತಿ ಬ್ಯಾಂಕ್ ನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಆದರೆ ಯಾವ ಬ್ಯಾಂಕ್ ಗಳಲ್ಲಿಯೂ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿಲ್ಲ.‌ ಹೀಗಾಗಿ ಯೋಜನೆ ಯಶಸ್ಚಿ ಅನುಷ್ಠಾನಕ್ಕೆ ಕೊಂಚ ಹಿನ್ನೆಡೆಯಾಗಿದೆ‌.

ಸಿಬ್ಬಂದಿಯ ಕೊರತೆ ನಿವಾರಣೆ ಅಗತ್ಯ

ಸಿಬ್ಬಂದಿಯ ಕೊರತೆ ನಿವಾರಣೆ ಅಗತ್ಯ

ಸೈಬರ್ ಕಳ್ಳರ ವಿರುದ್ದ 112 ಕರೆಯನ್ನು ಮಾಡಿ 18 ತಿಂಗಳಲ್ಲಿ 12 ಸಾವಿರ ದೂರನ್ನು ದಾಖಲಿಸಿದ್ದಾರೆ. ಸೈಬರ್ ಖದೀಮರು ದೋಚಿದ್ದು 104 ಕೋಟಿಯಾದರು ‌ಪೊಲೀಸರು ಫ್ರೀಜ್‌‌‌‌ ಮಾಡಿದ್ದು 15 ಕೋಟಿಯಾಗಿದೆ. ಹಣ ರಿಕವರಿಯನ್ನು ಗೋಲ್ಡನ್ ಅವರ್ ಮೂಲಕ ಮಾಡಲಾಗುತ್ತಿದೆ. ಆದರೂ ಸೈಬರ್ ಸಿಬ್ಬಂದಿಗಳ ಕೊರತೆಯಿಂದ ವಂಚನೆಯ ಹಣವನ್ನು ಸೈಬರ್ ಠಾಣೆಯ ಮೂಲಕ ರಿಕವರಿ ಮಾಡಲು ಸಾಧ್ಯವಾಗುತ್ತಿಲ್ಲ.

ಸಣ್ಣ ಸಣ್ಣ ಮೊತ್ತದ ಹಣ ರಿಕವರಿ ಸುಲಭ

ಸಣ್ಣ ಸಣ್ಣ ಮೊತ್ತದ ಹಣ ರಿಕವರಿ ಸುಲಭ

ಗೋಲ್ಡನ್ ಅವರ್‌ನಲ್ಲಿ ಮೋಸ ಹೋದ ಕೆಲವೇ ನಿಮಿಷಗಳಲ್ಲಿ 112ಗೆ ಕರೆ ಮಾಡಿ ದೂರನ್ನು ನೀಡಬೇಕು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾಗಿ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಲಾಗುತ್ತದೆ. ಬ್ಯಾಂಕ್‌ಗಳಲ್ಲಿ 90 ಕೋಟಿ ಹಣ ಬ್ಲಾಕ್ ಮಾಡಲಾಗಿದೆ. ಬ್ಲಾಕ್ ಮಾಡಿದ ಅಕೌಂಟ್‌ಗೆ ಮತ್ತೊಂದು ಹಣ ಜಮೆಯಾದರೆ ಆ ಹಣ ರಿಕವರಿಯಾಗುತ್ತದೆ. ಇದೀಗ ರಿಕವರಿಯಾಗಿರುವ ಹಣ 15 ಕೋಟಿ ಜನರ ಪಾಲಿಗೆ ಬಹಳದೊಡ್ಡದು. ಸಣ್ಣ ಸಣ್ಣ ಮೊತ್ತದ ಹಣವನ್ನು ರಿಕವರಿ ಬೇಗ ಮಾಡಬಹುದು. ಸೈಬರ್ ವಂಚಕರು ಸಣ್ಣ ಮೊತ್ತದ ಹಣವನ್ನು ಬೇಗನೇ ವಿಥ್‌ಡ್ರಾ ಮಾಡುತ್ತಾರೆ. ಇದರಿಂದ ಅಕೌಂಟ್ ಬ್ಲಾಕ್ ಮಾಡಿಸಲಾಗುತ್ತದೆ. ದೊಡ್ಡ ಮೊತ್ತದ ಹಣವನ್ನು ಸೈಬರ್ ವಂಚಕರು ದೋಚಿದ್ದರೆ ಸೈಬರ್ ಠಾಣೆಗೆ ದೂರನ್ನು ನೀಡಬೇಕು ಜೊತೆಗೆ ಸರಿಯಾದ ತನಿಖೆಯ ಮೂಲಕ ರಿಕವರಿ ಮಾಡಬೇಕಾಗುತ್ತದೆ. ಗೋಲ್ಡನ್ ಅವರ್ ಅತ್ಯುತ್ತಮವಾಗಿ ಕೆಲಸವನ್ನು ನಿರ್ವಹಿಸುತ್ತಿದೆ'' ಎಂದು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸದ್ಯ ನೇಮಕಾತಿ ವಿಭಾಗದ ಎಡಿಜಿಪಿಯಾಗಿರುವ ಕಮಲ್ ಪಂಥ್ ಹೇಳಿದ್ದಾರೆ.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
112 calls were made against cyber thieves and 12 thousand complaints were filed in 18 months. 104 crores were looted by cyber criminals and 15 crores were Recovered by the police. Money recovery is done through golden hour, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X