Cyber crime: ಅಕೌಂಟ್ ಅಪ್‌ಡೇಟ್ ಮಾಡಲು ಹೋಗಿ ಕ್ಷಣದಲ್ಲೇ 35,000 ರೂ ಕಳೆದುಕೊಂಡ ವ್ಯಕ್ತಿ!
ಬೆಂಗಳೂರು, ಏಪ್ರಿಲ್. 30: ಸೈಬರ್ ಕ್ರೈಮ್ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸೈಬರ್ ಕ್ರೈಂ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದ್ದರೂ, ಈ ಸ್ಕ್ಯಾಮ್‌ಗೆ ಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೈಬರ್ ವಂಚಕರು ತಮ್ಮ ಬಲೆಗೆ ಬೀಳುತ್ತಾರೆ ಎಂಬಂತ ವ್ಯಕ್ತಿಗಳನ್ನು ಬಲೆಗೆ ಬೀಳಿಸಲು ಮತ್ತು ಅವರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕದಿಯಲು ಹೊಸ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ.
ಇಂತಹದ್ದೆ ಪ್ರಕರಣ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವರದಿಯಾಗಿದೆ. ಖಾಸಗಿ ಕಂಪನಿಯೊಂದರ ನಿರ್ದೇಶಕ ಪ್ರದೀಪ್ ಎಂಬುವವರಿಗೆ ವಂಚನೆ ಮಾಡಿರುವ ಘಟನೆ ದಾಖಲಾಗಿದೆ. ಪ್ರದೀಪ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಮೋಹಿತ್ ಜೈನ್ ಎಂದು ಹೇಳಿಕೊಳ್ಳುವ ಸೈಬರ್ ವಂಚಕರೊಬ್ಬ ಪ್ರದೀಪ್‌ಗೆ ಕರೆ ಮಾಡಿ, ತಾನು ಸಿಟಿಬ್ಯಾಂಕ್‌ನಿಂದ ಬಂದಿದ್ದೇನೆ. ಬ್ಯಾಂಕ್ ಕಾರ್ಡ್ ಅಪ್‌ಡೇಟ್ ಮಾಡಬೇಕು ಹಾಗಾಗಿ ಹೊಸ ಮೆಷಿನ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

"ಮೋಹಿತ್ ಜೈನ್ ಅವರು ಸಿಟಿ ಬ್ಯಾಂಕ್‌ನಿಂದ ಎಂದು ನನಗೆ ಕರೆ ಮಾಡಿದರು. ನನ್ನ ಕಾರ್ಡ್ ಅನ್ನು ಅಪ್‌ಗ್ರೇಡ್ ಮಾಡುತ್ತಿದ್ದಾರೆ ಆದ್ದರಿಂದ ಅವರು ನನಗೆ ಸಾಧನವನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿ ಕಳೆದ ರಾತ್ರಿ ಅವರು ನನಗೆ ಸಾಧನವನ್ನು ಕಳುಹಿಸಿದ್ದಾರೆ. ಆದರೆ ಅದು ಫೋನ್ ಆಗಿತ್ತು. ಅವರು ನನ್ನ ಸಿಮ್ ಅನ್ನು ಅದರಲ್ಲಿ ಹಾಕಲು ಹೇಳಿದರು. ನಾನು ಸಿಮ್ ಹಾಕಿದೆ. ಅಪ್‌ಡೇಟ್ ಮಾಡಲು 60 ನಿಮಿಷ ಬೇಕು ಎಂದರು. 60 ನಿಮಿಷಗಳ ನಂತರ ನಾನು ಹೊಸ ಫೋನ್‌ನಲ್ಲಿ ಕರೆ ಫಾರ್ವರ್ಡ್ ಮಾಡುವ ವ್ಯವಸ್ಥೆ ಇದೆ ಎಂದು ಪರಿಶೀಲಿಸಿದೆ. ಆಗ ನನ್ನ ಖಾತೆಯಿಂದಸುಮಾರು 35,000 ರೂಪಾಯಿಗಳನ್ನು ಇಂಪ್ಸ್ ಮೂಲಕ ಸೆಂಡ್ ಮಾಡಲಾಗಿತ್ತು" ಎಂದಿದ್ದಾರೆ.
"ಅದೃಷ್ಟವಶಾತ್, ಮೋಹಿತ್ ಜೈನ್ ಅವರು ಹೇಳುವುದನ್ನು ಮಾಡುವಾಗ ನಾನು ಕಂಪ್ಯೂಟರ್ ಆನ್ ಮಾಡಿಕೊಂಡಿದ್ದೆ. ಕೆಲವೇ ನಿಮಿಷಗಳಲ್ಲಿ, ನನ್ನ ಖಾತೆಯಿಂದ 35,000 ರೂ. ವರ್ಗಾವಣೆಯಾದ ಬಗ್ಗೆ ನನಗೆ ತಿಳಿಯಿತು. ನಾನು ತಕ್ಷಣವೇ ನನ್ನ ಎಲ್ಲಾ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ಕಸ್ಟಮರ್ ಕೇರ್‌ಗೆ ತಿಳಿಸಿದೆ. ಎಲ್ಲಾ ಕಾರ್ಡ್‌ಗಳನ್ನು ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿದ್ದಾರೆ. ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲು ಬ್ಯಾಂಕ್‌ಗೆ ಹೋಗಬೇಕಾಗಿದೆ" ಎಂದು ದೂರಿನಲ್ಲಿ ಹೇಳಿದ್ದಾರೆ.












Click it and Unblock the Notifications