ಬೆಂಗಳೂರಿನಲ್ಲಿ ನಕಲಿ ಕೋರಿಯರ್ ಜಾಲ ಸೈಬರ್ ಪೊಲೀಸ್ ಬಲೆಗೆ
ಬೆಂಗಳೂರು, ಜುಲೈ 20: ಜನರು ಡಿಜಿಟಲ್ ಮೊರೆಯನ್ನು ಹೋಗುತ್ತಿದ್ದಂತೆ ಹೆಚ್ಚು ಹೆಚ್ಚು ವಂಚನೆಯ ಜಾಲಗಳು ಹುಟ್ಟಿಕೊಳ್ಳುತ್ತಿವೆ. ಜನರು ತಮಗೆ ಏನಾದರು ತಿಳಿಯದ ವಿಚಾರಕ್ಕೆ ಮೊದಲು ಗೂಗಲ್ ನಲ್ಲಿ ಹುಡುಕಾಟವನ್ನು ನಡೆಸುತ್ತಾರೆ. ಗೂಗಲ್‌ನ ವೆಬ್‌ಸೈಟ್‌ನಲ್ಲಿ ಜಾಹೀರಾತನ್ನು ನೀಡಿ ಯಾಮಾರಿಸೋ ಕಿಲಾಡಿ ಗ್ಯಾಂಗ್‌ಗಳಿವೆ.
ವ್ಯಕ್ತಿಯೊಬ್ಬರು ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಟ್ರಾನ್ಸ್‌ಪೋರ್ಟ್ ಮಾಡಲು ಗೂಗಲ್ ನಲ್ಲಿ ಹುಡುಕಾಟವನ್ನು ನಡೆಸಿದ್ದಾನೆ. ಆ ಹುಡುಕಾದಲ್ಲಿ ಸಿಕ್ಕ ಫೋನ್ ನಂಬರ್‍ಗೆ ಕರೆಯನ್ನು ಮಾಡಿ ಮಾಹಿತಿಯನ್ನು ಪಡೆದಿದ್ದಾರೆ. ಇದೇ ವಂಚನೆಗೆ ಕಾರಣವಾಗಿದೆ.
ಗೂಗಲ್ ವೆಬ್‌ಸೈಟ್‌ನಲ್ಲಿ ಬೇರೆ ಬೇರೆ ಸೇವೆಯನ್ನು ನೀಡುವ ರೀತಿಯಲ್ಲಿ ಜಾಹೀರಾತನ್ನು ನೀಡಿರುತ್ತಾರೆ. ಗೂಗಲ್ ಹುಡುಕಾಟ ನಡೆಸುವಾಗ ಈ ಫೋನ್ ನಂಬರ್ ತೋರಿಸುತ್ತದೆ. ಆ ನಂಬರ್‍ಗೆ ಕರೆಯನ್ನು ಮಾಡಿದರೇ ಯಾಮಾರಿಸೋದು ಗ್ಯಾರಂಟಿ ಅಂತಲೇ ಹೇಳಬೇಕಾಗುತ್ತದೆ. ಕೆಲವ ಜನರು ಮೋಸ ಮಾಡಲೆಂದೇ ತಮ್ಮ ನಂಬರ್ ಅನ್ನು ಹಾಕುತ್ತಾರೆ. ಹಣವನ್ನು ಮಾಡವ ಸುಲಭ ಉಪಾಯಕ್ಕಾಗಿ ದೊಡ್ಡ ದೊಡ್ಡ ಕಂಪನಿಯನ್ನು ಸಹ ದುರುಪಯೋಗವನ್ನು ಪಡಿಸಿಕೊಳ್ಳುತ್ತಾರೆ. ಆ ಮೂಲಕ ಸೈಬರ್ ವಂಚಕರೂ ಹೊಸ ರೀತಿಯಲ್ಲೂ ಯಾಮಾರಿಸಬಹುದು ಎಂಬುದನ್ನು ಕರಗತ ಮಾಡಿಕೊಂಡಿದ್ದಾರೆ.

ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಿನಲ್ಲಿ ದೋಖಾ
ಜನರು ಬೈಕ್, ಕಾರು ಅಥವಾ ಇನ್ನಾವುದೇ ವಸ್ತುಗಳನ್ನು ಬೇರೆ ಊರಿಗೆ ಅಥವಾ ರಾಜ್ಯಕ್ಕೆ ಕಳಿಸಬೇಕು ಅಂದ್ರೆ ಪ್ರತಿಷ್ಠಿತ ಲಾಜಿಸ್ಟಿಕ್ ಕಂಪೆನಿಗಳ ಕಾಂಟ್ಯಾಕ್ಟ್ ನಂಬರ್ಗಾಗಿ ಗೂಗಲ್ನಲ್ಲಿ ಹುಡುಕಾಡುವುದು ಸಹಜ. ಪ್ರತಿಷ್ಠಿತ ಕಂಪೆನಿಗಳ ಸೇವೆ ಉತ್ತಮ ಗುಣಮಟ್ಟದ್ದಾಗಿರುತ್ತೆ ಅನ್ನೋ ನಂಬಿಕೆಯಿಂದ ಜನರು ಅದಕ್ಕಾಗಿಯೇ ಹುಡುಕಾಡುತ್ತಾರೆ. ಜನರ ಈ ನಂಬಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿಷ್ಠಿತ ಕಂಪೆನಿಗಳ ನಕಲಿ ಹೆಸರಿನಲ್ಲಿ ಗೂಗಲ್ನಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ಕೊರಿಯರ್ ಅಥವಾ ಲಾಜಿಸ್ಟಿಕ್ ಸೇವೆ ಒದಗಿಸುವ ನೆಪದಲ್ಲಿ ವಂಚನೆ ಮಾಡಲಾಗುತ್ತಿತ್ತು. ಇಂತಹ ಒಂದು ಚಾಲಾಕಿ ಚೋರರ ಗ್ಯಾಂಗ್ ಅನ್ನು ಈಶಾನ್ಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ವಚನೆ ಗ್ಯಾಂಗ್ ನ ಸದಸ್ಯರುದಗಳಾದ ಧರ್ಮವೀರ್ ,ಧರ್ಮಮದ್ರ ,ನರೇಂದ್ರ. ಪೂರಣ್ ಸಿಂಗ್ ಚೌಹಾಣ್ ಬಂಧನವಾಗಿದೆ.

ಕರೆಗಾಗಿ ಕಾಯುತ್ತಿದ್ದ ವಂಚಕ ಜಾಲ
ಸಾಮಾನ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಾಹನ ಹಾಗು ಮನೆ ಶಿಫ್ಟ್ ಮಾಡುವಾಗ ಯಾವುದಕ್ಕೂ ಇರಲಿ ಅಂತ ಒಳ್ಳೆಯ ನಂಬಿಕೆ ಇರುವಂತಹ ಕಂಪನಿಗಳಿಗಾಗಿ ಗೂಗಲ್ ಮೂಲಕ ಸರ್ಚ್ ಮಾಡುತ್ತಾರೆ. ಹೀಗೆ ಹುಡುಕುವಾಗ ಕೆಲವು ಹೆಚ್ಚಿನ ಹಣ ಖರ್ಚು ಮಾಡಿ ಜಾಹೀರಾತು ಮಾಡಿದ ಕೆಲ ನಕಲಿ ಕಂಪೆನಿಗಳ ಹೆಸರುಗಳು ಮೊದಲಿಗೆ ಕಾಣಿಸುತ್ತವೆ. ಇಲ್ಲಿನ ಸಂಖ್ಯೆಗಳಿಗೆ ಕರೆ ಮಾಡಿ ಸೇವೆ ಪಡೆಯುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ನಕಲಿ ಕಂಪೆನಿ ತಗೆದ ವಂಚಕರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆಗೆ ಒಂದು ಗೋಡೌನ್ ಅನ್ನು ಪಡೆದು ಅಲ್ಲಿ ಹೀಗೆ ಜನರಿಂದ ಪಡೆದ ವಸ್ತುಗಳನ್ನು ತಂದು ಸಂಗ್ರಹಿಸಿಡುತ್ತಿದ್ದರು. ಜನರು ಇನ್ನೂ ತಾವು ಕಳುಹಿಸಿದ ವಸ್ತು ತಲುಪಲಿಲ್ಲ ಎಂದು ತಿಳಿದಾಗ ಇವರಿಗೆ ಕರೆ ಮಾಡುತ್ತಿದ್ದರು. ಆಗ ಈ ಆರೋಪಿಗಳು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದರು. ಅವರಿಂದ ಆ ಹಣ ಪಡೆದು, ಅವರ ವಸ್ತುವನ್ನು ಅವರು ಈ ಹಿಂದೆ ಹೇಳಿದಂತೆ ನಿಜವಾದ ಲಾಜಿಸ್ಟಿಕ್ ಸಂಸ್ಥೆಯ ಕಡೆಯಿಂದ ಕ್ಯಾಶ್ ಆನ್ ಡಿಲಿವರಿ ಮಾಡಿಸ್ತಾರೆ. ಹೀಗಾಗಿಯೇ ಆರೋಪಿಗಳೂ ಎರಡೂ ಕಡೆಯಿಂದ ಹಣ ಪಡೆಯುತ್ತಿದ್ದರು. ಇದೇ ರೀತಿ ಬೆಂಗಳೂರಿನ ವ್ಯಕ್ತಿಯೊಬ್ಬರು ಈ ವಂಚಕರ ಗ್ಯಾಂಗ್ ಮೂಲಕ ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಹುಬ್ಬಳ್ಳಿ ನಗರಕ್ಕೆ ಟ್ರಾನ್ಸ್ ಪೋರ್ಟ್ ಮಾಡೋದಕ್ಕೆ ಬುಕ್ ಮಾಡ್ತಾರೆ. ಮೊದಲು 4 ಸಾವಿರ ಪೇ ಮಾಡ್ತಾರೆ. ಆಗ ಮನೆಗೆ ಬಂದು ಬೈಕ್ ಪ್ಯಾಕ್ ಮಾಡಿ ಈ ಕಂಪನಿ ಅವ್ರು ತಗೊಂಡ್ ಹೋಗ್ತಾರೆ. ಆದರೆ ಆ ರಾಯಲ್ ಎನ್‌ಫೀಲ್ಡ್ ಬೈಕ್ ಹುಬ್ಬಳ್ಳಿ ತಲುಪುವುದೇ ಇಲ್ಲ. ಬದಲಿಗೆ ತಾವೇ ಇಟ್ಟುಕೊಂಡು ಮತ್ತಷ್ಟು ಹಣವನ್ನು ಪಡೆದು ಕೊನೆಗೆ ಕೋರಿಯರ್ ಸೆಂಟರ್ ನಲ್ಲಿ ಬಿಟ್ಟಹೋಗುತ್ತಿದ್ದರು. ಮೋಸ ಹೋದವರು ಮತ್ತೆ ಹಣವನ್ನು ಕಟ್ಟಿ ಬೈಕ್ ಪಡೆಯಬೇಕಿತ್ತು.

ಪದೇ ಪದೇ ಹಣಕ್ಕಾಗಿ ಬೇಡಿಕೆ
ಬೈಕ್ ಮಾಲೀಕ ಕಂಪನಿ ಅವರೆಂದು ಫೋನ್ ಮಾಡಿದರೇ, ಅದು ಇದು ಸಬೂಬ್ ಹೇಳಿ ಪದೇ ಪದೇ ಹಣ ಪಡೆದು ಬರೋಬ್ಬರಿ 20 ದಿನಗಳವರೆಗೆ ಆಟ ಆಡಿಸುತ್ತಿದ್ದರು. ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಬೈಕ್ ಮಾಲೀಕ ಪೊಲೀಸರಿಗೆ ದೂರು ನೀಡುತ್ತಾರೆ. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ನಾಲ್ಕು ಆರೋಪಿಗಳನ್ನ ಎಲೆಕ್ಟ್ರಾನ್ ಸಿಟಿ ಬಳಿ ಬಂಧಿಸುವಲ್ಲಿ ಯಶಸ್ವಿಯಾಗ್ತಾರೆ. ಬಂಧಿತರಲ್ಲಿ ನರೇಂದ್ರ, ಧರ್ಮೇಂದರ್ , ಮತ್ತು ಪುರನ್ ಸಿಂಗ್ ಚೌವ್ಹಾಣ್ ಎಂಬುವರು ರಾಜಸ್ಥಾನದವರಾಗಿದ್ದರೆ, ಧರ್ಮವೀರ್ ಎಂಬಾತ ಹರಿಯಾಣದವನಾಗಿದ್ದಾನೆ. ಸದ್ಯಕ್ಕೆ ಆರೋಪಿಗಳನ್ನ ಸೆರೆ ಹಿಡಿದು ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ಈ ಗ್ಯಾಂಗ್ ಇದುವರೆಗೆ ಹನ್ನೆರಡು ಜನರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ

ಗೂಗಲ್ ನಲ್ಲಿ ಹುಡುಕುವ ಬದಲು ಏನು ಮಾಡಬೇಕು
ಜನರು ಯಾವುದೇ ವಿಷಯ , ಫೋನ್ ನಂಬರ್, ವಿಳಾಸ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಗೂಗಲ್ ಮೊರೆಯನ್ನು ಹೋಗುತ್ತಾರೆ. ಗೂಗಲ್ ನಲ್ಲಿ ಮಾಹಿತಿಯನ್ನು ಹುಡಕಬಹುದೇ ವಿನಃ ಬರುವ ಮಾಹಿತಿ ಎಲ್ಲವೂ ಸತ್ಯವಾದುದಲ್ಲ. ಮೋಸ ಮಾಡುವ ಉದ್ದೇಶದಿಂದ ಹಲವಾರು ವೆಬ್ ಸೈಟ್ ಸುಳ್ಳು ಮಾಹಿತಿಯನ್ನು ಹಾಕಿರುವುದು ಕಂಡುಬರುತ್ತದೆ. ಸರಿಯಾದ ಮಾಹಿತಿಯನ್ನು ಜನರು ಪಡೆಯ ಬೇಕಾದರೆ URL ನ ನೇರವಾಗಿ ಟೈಪ್ ಮಾಡಿ ಮಾಹಿತಿಯನ್ನು ಪಡೆದು ಸರಿಯಾದ ಪರಿಶೀಲನೆಯನ್ನು ಮಾಡಿದ ಬಳಿಕವಷ್ಟೇ ಕೆಲವು ಸೇವೆಯನ್ನು ಪಡೆಯಬಹುದಾಗುತ್ತದೆ. ಇಲ್ಲವಾದರೇ ಯಾಮಾರಿಸೋ ಮಂದಿ ಹೊಂಚು ಹಾಕುತ್ತಾ ಕಾಯುತ್ತಿರುತ್ತಾರೆ ಎಚ್ಚರಾ..












Click it and Unblock the Notifications