ಎಂಎಲ್‌ಸಿ ವಿ.ಸೋಮಣ್ಣ ಹೆಸರು ಬಳಸಿ ಕೋಟ್ಯಂತರ ಹಣ ವಂಚನೆ
ಬೆಂಗಳೂರು, ಏಪ್ರಿಲ್ 04: ಬಿಜೆಪಿಯ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕಿಗೆ ಹಾಗೂ ಚಿನ್ನಾಭರಣ ಅಂಗಡಿಗೆ ವಂಚನೆ ಎಸಗಿದ್ದ ವ್ಯಕ್ತಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್.ಸೋಮಣ್ಣ ಎಂಬಾತ ತಾನೇ ವಿ.ಸೋಮಣ್ಣ ಎಂದು ನಂಬಿಸಿ ನಗರದ ಕರ್ನಾಟಕ ಬ್ಯಾಂಕ್ ಒಂದರ ವ್ಯವಸ್ಥಾಪಕರ ಬಳಿ ಬರೋಬ್ಬರಿ 2.5 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದ.
ಪರಿಷತ್ ಸದಸ್ಯ ವಿ.ಸೋಮಣ್ಣ ಎಂದು ನಂಬಿಸಿ, ಯಾವುದೋ ಸರ್ಕಾರದ ಕೆಲಸ ಮಾಡಿಸಿದ್ದೆ ಗುತ್ತಿಗೆದಾರರಿಗೆ ಇಂದೇ ಹಣ ಕೊಡಬೇಕು, ಸರ್ಕಾರದಿಂದ ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆ ಆಗುತ್ತದೆ ಆಗ ಮರಳಿ ಕೊಡುತ್ತೇನೆ ಎಂದು ಹೇಳಿ ಕರ್ನಾಟಕ ಬ್ಯಾಂಕ್ ಮ್ಯಾನೇಜರ್‌ನಿಂದ 2.5 ಕೋಟಿ ರೂಪಾಯಿ ಪಡೆದುಕೊಂಡು ಹೋಗಿದ್ದರು.

ನಂತರ ಮೋಸ ಹೋಗಿರುವುದು ತಿಳಿದ ಬ್ಯಾಂಕ್ ಮ್ಯಾನೆಜರ್ ದೊರೆಸ್ವಾಮಿ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಎಲ್.ಸೋಮಣ್ಣನನ್ನು ಬಂಧಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಈ ಹಿಂದೆ ಈತ ಸೋಮಣ್ಣ ಅವರ ಹೆಸರು ಬಳಸಿ ಚಿನ್ನದ ವ್ಯಾಪಾರಿಯಿಂದ ಕೋಟ್ಯಂತರ ಮೌಲ್ಯದ ಸರಗಳನ್ನು ಕೊಂಡೊಯ್ದಿದ್ದ. ಪಕ್ಷದ ವತಿಯಿಂದ ಸಾಮೂಹಿಕ ವಿವಾಹ ಮಾಡಿಸುತ್ತಿದ್ದೇನೆ ಎಂದು ಹೇಳಿ 100 ಚಿನ್ನದ ಸರಗಳನ್ನು ಕೊಂಡೊಯ್ದಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.












Click it and Unblock the Notifications