ಕ್ರೈಂ ರೌಂಡಪ್: ರೌಡಿ ಶಿಟರ್ ಜೆಸಿಬಿ ನಾರಾಯಣ ಹತ್ಯೆ ಜಸ್ಟ್ ಮಿಸ್ !
ಬೆಂಗಳೂರು, ಡಿ. 08: ರಾಜಧಾನಿಯಲ್ಲಿಎಡೆ ಎತ್ತಿದ ರೌಡಿ ಪಾತಕಿಗಳು. ನಟೋರಿಯಸ್ ರೌಡಿ ಶೀಟರ್ ಜೆಸಿಬಿ ನಾರಾಯಣ ಹತ್ಯೆಗೆ ಯತ್ನ. ಕೂದಲೆಳೆ ಅಂತರದಲ್ಲಿ ಅಟ್ಯಾಕ್‌ನಿಂದ ಪಾರು, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಮನೆಯಲ್ಲಿ ಕಳ್ಳತನ, ಮನೆ ಕೆಲಸದಾಕೆ ಬಂಧಿಸಿ ವಿಚಾರಣೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಜೆಸಿಬಿ ನಾರಾಯಣ ಜಸ್ಟ್ ಮಿಸ್!
ರಾಜಧಾನಿ ಪಾತಕ ಲೋಕದ ನಟೋರಿಯಸ್ ರೌಡಿ ಶೀಟರ್ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಅಗಿರುವ ಜೆಸಿಬಿ ನಾರಾಯಣನ ಕಾರು ಅಡ್ಡಗಟ್ಟಿ ಹಲ್ಲೆ ಮಾಡಲು ಯತ್ನಿಸಿದೆ. ನಾಲ್ಕೈದು ವ್ಯಕ್ತಿಗಳು ಜೆಸಿಬಿ ಹತ್ಯೆಗಾಗಿ ಹೊಂಚು ಹಾಕಿ ಕೂತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ನಡು ರಸ್ತೆಯಲ್ಲಿಯೇ ಹತ್ಯೆಗೆ ಯತ್ನಿಸಿರುವ ದೃಶ್ಯ ಸೆರೆಯಾಗಿದೆ. ಸಿನಿಮೀಯ ರೀತಿಯಲ್ಲಿ ಹತ್ಯೆಯಿಂದ ಜೆಸಿಬಿ ನಾರಾಯಣ ಪಾರಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಡಿಎಲ್ಎಫ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ನಾಲ್ಕೈದು ಮಂದಿ ದುಷ್ಕರ್ಮಿಗಳು ಮಚ್ಚು ಲಾಂಗು ಹಿಡಿದು ಕಾರನ್ನು ಅಡ್ಡಗಟ್ಟುತ್ತಾರೆ. ಮಚ್ಚು ಲಾಂಗು ನೋಡಿದ ಕೂಡಲೇ ಜೆಸಿಬಿ ನಾರಾಯಣ ಇದ್ದ ಕಾರನ್ನು ಸಿನಿಮೀಯ ಶೈಲಿಯಲ್ಲಿ ರಿವರ್ಸ್ ತೆಗೆದು ಚಲಾಯಿಸಿ ಎಸ್ಕೇಪ್ ಆಗಿದ್ದಾನೆ. ಮೊದಲು ಪ್ಲಾನ್ ರೂಪಿಸಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಡಿಎಲ್ಎಫ್ ರಸ್ತೆಯಲ್ಲಿ ಹೊಂಚು ಹಾಕಿದ್ದರು. ಘಟನೆ ಸಂಬಂಧ ಬೇಗೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೆಸಿಬಿ ನಾರಾಯಣ ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

Recommended Video
ಜಂಟಿ ಪೊಲೀಸ್ ಆಯುಕ್ತರ ಮನೆಯಲ್ಲಿ ಕಳ್ಳತನ: ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಮನೆಯಲ್ಲಿ ಕಳ್ಳತನ ಆಗಿದೆ. ಕಳೆದ ಮೂರು ವರ್ಷದಿಂದ ಮನೆ ಕೆಲಸ ಮಾಡುತ್ತಿದ್ದ ಅಂಕಿತಾ ಎಂಬುವರನ್ನು ಸಂಜಯನಗರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರವಿಕಾಂತೇಗೌಡ ಅವರ ಮನೆಯಲ್ಲಿ ಮೂರು ವರ್ಷದಿಂದ ಮನೆ ಕೆಲಸ ಮಾಡುತ್ತಿದ್ದ ಅಂಕಿತಾ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ರವಿಕಾಂತೇಗೌಡ ಅವರ ಕುಟುಂಬದಿಂದ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ಹಾವೇರಿಯಲ್ಲಿದ್ದ ಅಂಕಿತಾಳನ್ನು ಸಂಜಯನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ನಾನು ಕಳ್ಳತನ ಮಾಡಿಲ್ಲ. ಊರಿಗೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.












Click it and Unblock the Notifications