ಬೆಂಗಳೂರು; ಕೋವಿಡ್ ಟೆಸ್ಟ್ ಲ್ಯಾಬ್, 4 ಗಂಟೆಯಲ್ಲಿ ವರದಿ ಕೈಗೆ!
ಬೆಂಗಳೂರು, ಜೂನ್ 04; ಬೆಂಗಳೂರು ನಗರದಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾದರಿಗಳ ಪರೀಕ್ಷೆಗೆ ಮೊಬೈಲ್ ಲ್ಯಾಬ್ ಆರಂಭವಾಗಿದ್ದು, 4 ಗಂಟೆಯಲ್ಲಿ ವರದಿ ಬರಲಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಲ್ಯಾಬ್ ಆರಂಭವಾಗಿದೆ. ಪ್ರತಿದಿನ 2000 ಮಾದರಿಗಳ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಈ ಪ್ರಯೋಗಾಲಯ ಹೊಂದಿದೆ. ಗುರುವಾರ ಇದಕ್ಕೆ ಚಾಲನೆ ಸಿಕ್ಕಿದೆ.
ಹೊರಬಿದ್ದ ಲಸಿಕೆ ಅಭಿಯಾನ ಅಂಕಿಅಂಶ: ಯಾರು ಏನೇ ಹೇಳಲಿ ಬೆಂಗಳೂರು ದೇಶದಲ್ಲೇ ಟಾಪ್
ಸುಮಾರು 40 ಸಾವಿರ ಉದ್ಯೋಗಿಗಳು, ಲಕ್ಷಾಂತರ ದೇಶಿಯ ವಿಮಾನಗಳ ಪ್ರಯಾಣಿಕರು ಬಂದು ಹೋಗುವುದರಿಂದ ವಿಮಾನ ನಿಲ್ದಾಣದಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿದಿನ ಪರೀಕ್ಷೆ ನಡೆಸುವ ಮಾದರಿಗಳ ಸಂಖ್ಯೆಯನ್ನು 3,300ಕ್ಕೆ ಏರಿಕೆ ಮಾಡುವ ಸಾಮರ್ಥ್ಯವನ್ನು ಮೊಬೈಲ್ ಪ್ರಯೋಗಾಲಯ ಹೊಂದಿದೆ.
ಕರ್ನಾಟಕ; 24 ಗಂಟೆಯಲ್ಲಿ 16,068 ಹೊಸ ಕೋವಿಡ್ ಪ್ರಕರಣ ದಾಖಲು
ಟಾಟಾ ಮೆಡಿಕಲ್ & ಡಯೋಗ್ನಾಸ್ಟಿಕ್ ಲಿ. (ಟಿಎಂಡಿ) ಜೊತೆ ಬಿಐಎಎಲ್ ಪಾಲುದಾರಿಕೆಯಲ್ಲಿ ಇದನ್ನು ಆರಂಭಿಸಲಾಗಿದೆ. ಆಸ್ಪರ್ ಲ್ಯಾಬ್ ಸಹ ಇದಕ್ಕೆ ಕೈ ಜೋಡಿಸಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಪರೀಕ್ಷೆ ನಡೆಯಲಿದೆ.
Fact Check: ಕೇಂದ್ರ ಸರ್ಕಾರವು 4 ಹಂತದಲ್ಲಿ ಕೋವಿಡ್ ಪರಿಹಾರ ನಿಧಿ ನೀಡುತ್ತಿದೆಯೇ?
ಟಿಎಂಡಿ ಇಂತಹ 8 ಮೊಬೈಲ್ ಪ್ರಯೋಗಾಲಯನ್ನು ಈಗಾಗಲೇ ಸ್ಥಾಪನೆ ಮಾಡಿದೆ. ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಇವು ಕಾರ್ಯ ನಿರ್ವಹಣೆ ಮಾಡುತ್ತಿವೆ. ಸರ್ಕಾರ ಸಹಕಾರ ನೀಡಿದರೆ ಪ್ರತಿ ಜಿಲ್ಲೆಯಲ್ಲಿ 80 ರಿಂದ 100 ಇಂತಹ ಲ್ಯಾಬ್ ಸ್ಥಾಪನೆಗೆ ಟಿಎಂಡಿ ಆಸಕ್ತಿ ತೋರಿದೆ.
ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿನಲ್ಲಿಯೇ ಕೋವಿಡ್ ಪರೀಕ್ಷೆ ಮಾಡಲು ಇಂತಹ ಲ್ಯಾಬ್ ವ್ಯವಸ್ಥೆ ಮಾಡಿದೆ. ಆದರೆ ಅದರಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಬದಲು ಆಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ 150 ಆಕ್ಸಿಜನ್ ಬೆಡ್ ವ್ಯವಸ್ಥೆ ಹೊಂದಿರುವ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿತ್ತು. ನಿಲ್ದಾಣದ ಕಾರ್ಗೊ ಟರ್ಮಿನಲ್ ಬಳಿ ಈ ಮೊಬೈಲ್ ಲಾಬ್ ನಿಲ್ದಾಣದ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಲಭ್ಯವಿದೆ.